ಪಾಟ್ನಾ: ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಬಿಹಾರದ ಕೆಲ ಶಿಕ್ಷಕರು ಬರೆದಿರುವ ರಜೆಯ ಪತ್ರಗಳು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿವೆ. ಶಾಲೆಗೆ ಬಂಕ್ ಹೊಡೆಯಲು ವಿದ್ಯಾರ್ಥಿಗಳು ನಾನಾ ಕಾರಣ ನೀಡುವುದನ್ನು ನೀವು ಕೇಳಿರುತ್ತೀರಿ. ಹೊಟ್ಟೆ ನೋವು, ತಲೆನೋವು ಮತ್ತು ಜ್ವರ ಹೀಗೆ ವಿವಿಧ ಕಾರಣ ನೀಡಿ ರಜೆ ಹಾಕುವುದನ್ನು ನೀವು ನೋಡಿರುತ್ತೀರಿ. ಆದರೆ ಶಾಲೆಗೆ ಬಂಕ್ ಹೊಡೆಯಲು ಶಿಕ್ಷಕರು ನೀಡಿರುವ ಕಾರಣಗಳನ್ನು ಕೇಳಿದ್ರೆ ನೀವು ಹೌಹಾರುವುದು ಗ್ಯಾರಂಟಿ. ಹೌದು, ಬಿಹಾರದ ಕೆಲ ಶಿಕ್ಷಕರು ಬರೆದಿರುವ ಲೀವ್ ಲೆಟರ್ ಸಖತ್ ಸೌಂಡ್ ಮಾಡುತ್ತಿವೆ.    


COMMERCIAL BREAK
SCROLL TO CONTINUE READING

ಏನಿದು ಘಟನೆ..?


ರಜೆ ಕೋರಿ ಬಿಹಾರದ ಶಿಕ್ಷಕರು ಮುಖ್ಯಶಿಕ್ಷಕರಿಗೆ ಬರೆದಿರುವ ರಜಾ ಪತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದೆ. ವಿವಿಧ ಸುಳ್ಳು ಹೇಳಿ ರಜೆ ತೆಗೆದುಕೊಳ್ಳುವವರ ಮಧ್ಯೆ ಬಿಹಾರದ ಈ ಶಿಕ್ಷಕರು ಲೀವ್ ಲೆಟರ್‍ನಲ್ಲಿ ನೀಡಿರುವ ಕಾರಣ ಎಲ್ಲರ ಹುಬ್ಬೇರಿಸಿದೆ.


ವರದಕ್ಷಿಣೆಯಾಗಿ ಬೈಕ್ ಕೊಡದಿದ್ದಕ್ಕೆ ಮದುವೆ ಮಂಟಪದಿಂದಲೇ ಕಾಲ್ಕಿತ್ತ ವರ...!


ಬಿಹಾರದ ಮುಂಗೇರ್, ಭಾಗಲ್ಪುರ್​ ಮತ್ತು ಬಂಕಾ ಜಿಲ್ಲೆಗಳಲ್ಲಿ ಶಿಕ್ಷಕರು ತಮ್ಮ ಕ್ಯಾಶುಯಲ್ ರಜೆಗಳಿಗೆ ಬೇಡಿಕೆ ಇಟ್ಟಿರೋ ಹಿನ್ನೆಲೆ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿತ್ತು. ರಜೆ ಪಡೆಯುವ ಶಿಕ್ಷಕರು 3 ದಿನ ಮುಂಚಿತವಾಗಿಯೇ ಕ್ಯಾಶುಯಲ್ ಲೀವ್‍ಗೆ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಅರ್ಜಿ ಸಲ್ಲಿಸದಿದ್ದರೆ ರಜೆ ರದ್ದು ಮಾಡಲಾಗುವುದು ಅಂತಾ ಹೇಳಲಾಗಿತ್ತು. ಹೀಗಾಗಿ ರಜೆ ಪಡೆಯುವ ಶಿಕ್ಷಕರು ಅದಕ್ಕೆ ಸೂಕ್ತ ಕಾರಣ ನೀಡಬೇಕಾಗಿತ್ತು. ಈ ಹಿನ್ನೆಲೆ ಶಿಕ್ಷಕರೊಬ್ಬರು ರಜೆಗಾಗಿ ನೀಡಿರುವ ಕಾರಣ ಎಲ್ಲರನ್ನು ಆಘಾತಗೊಳಿಸಿದೆ.


ಹಾಗಾದ್ರೆ ಆ ಶಿಕ್ಷಕ ತನ್ನ ಲೀವ್ ಲೆಟರ್‍ನಲ್ಲಿ ಏನು ಬರೆದಿದ್ದಾನೆಂದು ಯೋಚಿಸುತ್ತಿದ್ದೀರಾ? ಅಜಯ್​ ಕುಮಾರ್ ಎಂಬ ಶಿಕ್ಷಕ ತನ್ನ ಲೀವ್‍ ಲೆಟರ್‍ನಲ್ಲಿ ‘ಡಿಸೆಂಬರ್​ 5ರ ರಾತ್ರಿ 8 ಗಂಟೆಗೆ ನಮ್ಮ ತಾಯಿ ಸಾವನ್ನಪ್ಪಲ್ಲಿದ್ದಾರೆ. ಹೀಗಾಗಿ ನನಗೆ 6 ಮತ್ತು 7ನೇ ತಾರೀಖಿನಂದು ತಾಯಿಯ ಅಂತಿಮ ವಿಧಿವಿಧಾನ ನೆರವೇರಿಸಲು ರಜೆ ಬೇಕು’ ಅಂತಾ ಕೇಳಿದ್ದಾರೆ.


ಇದನ್ನೂ ಓದಿ: New Year: 2023ರ ದೀರ್ಘ ವಾರಾಂತ್ಯ ರಜೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ  


ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದಾಗ ರಜೆ ಕೇಳುವುದನ್ನು ನಾವು ನೋಡಿದ್ದೇವೆ. ಆದರೆ ತಾಯಿ ಸಾಯುವ ಮೊದಲೇ ರಜೆ ಕೋರಿರುವ ಶಿಕ್ಷಕನ ಈ ಲೀವ್ ಲೆಟರ್ ಕಂಡು ಸ್ವತಃ ಶಾಲೆಯ ಮುಖ್ಯಸ್ಥರಿಗೆ ಶಾಕ್ ಆಗಿದೆ. ಬಹುಶಃ ಈ ರೀತಿ ಪ್ರಕರಣ ನಡೆದಿರುವುದು ಇದೇ ಮೊದಲು. ತಾಯಿ ಸಾಯುವ ದಿನಾಂಕ ಸಮೇತ ರಜೆ ಕೇಳಿರುವ ಶಿಕ್ಷಕನ ಲೀವ್ ಲೆಟರ್ ಅನೇಕರಿಗೆ ಶಾಕ್ ಮೂಡಿಸಿದೆ.


ಅನಾರೋಗ್ಯಕ್ಕೆ ರಜೆ ಬೇಕಂತೆ!


ರಜೆಯ ಪತ್ರ ಸಹ ವೈರಲ್​ ಆಗಿದೆ. ಈ ಲೀವ್ ಲೆಟರ್‍ನಲ್ಲಿ ಆ ಶಿಕ್ಷಕ ಡಿಸೆಂಬರ್ 4, 5ರಂದು ನಾನು ಅನಾರೋಗ್ಯದಿಂದ ಬಳಲುತ್ತೇನೆ. ಹೀಗಾಗಿ ನನ್ನ ಆರೋಗ್ಯ ನೋಡಿಕೊಳ್ಳಬೇಕಾಗಿದೆ. ನನಗೆ ಶಾಲೆಗೆ ಬರಲು ಸಾಧ್ಯವಿಲ್ಲ. ನನಗೆ ರಜೆ ನೀಡಿ ಅಂತಾ ಮನವಿ ಮಾಡಿಕೊಂಡಿದ್ದಾನೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.