Viral News: ಮೊಸಳೆಯನ್ನೇ ವಿವಾಹವಾದ ಮೆಕ್ಸಿಕನ್ ಮೇಯರ್..!
ವರದಿಗಳ ಪ್ರಕಾರ ಸ್ಯಾನ್ ಪೆಡ್ರೊ ಹ್ಯುಮೆಲುಲಾದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಮೊಸಳೆಯನ್ನು ಸಾಂಕೇತಿಕವಾಗಿ ವಿವಾಹವಾಗಿದ್ದಾರೆ.
ಮೆಕ್ಸಿಕೋ: ಮೆಕ್ಸಿಕೋದಲ್ಲಿ ಮೇಯರ್ ಮೊಸಳೆಯನ್ನೇ ವಿವಾಹವಾಗಿದ್ದಾರೆ. ಅಚ್ಚರಿಯಾದರೂ ಇದು ನಿಜ. ಮೆಕ್ಸಿಕೋದಲ್ಲಿ ಶತಮಾನಗಳಷ್ಟು ಹಳೆಯ ಆಚರಣೆಯ ಪ್ರಕಾರ ವರ್ಣರಂಜಿತ ಸಮಾರಂಭದಲ್ಲಿ ಮೇಯರ್ ಮೊಸಳೆಯನ್ನು ಮದುವೆಯಾಗಿದ್ದಾರೆ.
ಈ ಮದುವೆ ಸಮಾರಂಭಕ್ಕೆ ಅನೇಕರು ಸಾಕ್ಷಿಯಾಗಿದ್ದು, ನೃತ್ಯ ಮತ್ತು ಸಂಗೀತ ಮೊಳಗಿದಾಗ ಮೇಯರ್ ಮೊಸಳೆಗೆ ಕಿಸ್ ಮಾಡಿದ್ದಾರೆ. ಈ ವಿಶಿಷ್ಠ ವಿವಾಹಕ್ಕೆ ಮಹತ್ವದ ಉದ್ದೇಶವಿದೆ. ಸಂಪ್ರದಾಯದ ಪ್ರಕಾರ ನದಿಯಲ್ಲಿ ಮೀನು ಹಿಡಿಯಲು ಅನುಕೂಲವಾಗುವಂತೆ ಸಾಕಷ್ಟು ಮಳೆಯಾಗಿ, ಬೆಳೆ ಬೆಳೆಯಬೇಕಿದ್ದರೆ ಪ್ರಕೃತಿಯ ವರದಾನದ ಅಗತ್ಯವಿದೆ. ಹೀಗಾಗಿ ಅಲ್ಲಿನ ಸ್ಥಳೀಯ ನಾಯಕರು ಮೊಸಳೆಯನ್ನು ವಿವಾಹವಾಗುವ ಆಚರಣೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಇದನ್ನೂ ಓದಿ: ಜಗತ್ತಿನ ಅತೀ ಕೊಳಕು ನಾಯಿ: ಹೀಗೆ ಕರೆಯಲು ಕಾರಣ ಏನ್‌ಗೊತ್ತಾ?
ವರದಿಗಳ ಪ್ರಕಾರ ಸ್ಯಾನ್ ಪೆಡ್ರೊ ಹ್ಯುಮೆಲುಲಾದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಮೊಸಳೆಯನ್ನು ಸಾಂಕೇತಿಕವಾಗಿ ವಿವಾಹವಾಗಿದ್ದಾರೆ. ಮದುವೆ ವೇಳೆ ಅವರು ಸಣ್ಣ ಅಲಿಗೇಟರ್‌ನ ಮೂತಿಗೆ ಸಿಹಿಮುತ್ತು ನೀಡಿದ್ದಾರೆ. ಈ ವೇಳೆ ಮೊಸಳೆ ಕಚ್ಚದಿರಲಿ ಎಂದು ಅದರ ಬಾಯಿಗೆ ಹಗ್ಗ ಕಟ್ಟಲಾಗಿತ್ತು. ಹಿಸ್ಪಾನಿಕ್ ಯುಗಕ್ಕೂ ಮೊದಲಿನ ಅವಧಿಯ ಚೊಂಟಾಲ್ ಮತ್ತು ಹುವೆ ಬುಡಕಟ್ಟು ಸಮುದಾಯದಲ್ಲಿ ಪ್ರಕೃತಿಯನ್ನು ಪೂಜಿಸಲು ಈ ಆಚರಣೆ ಚಾಲ್ತಿಯಲ್ಲಿತ್ತು ಎಂದು ಹೇಳಲಾಗಿದೆ.
‘ನಾವು ಸಾಕಷ್ಟು ಮಳೆಯಾಗಲಿ ಎಂದು ಪ್ರಕೃತಿಯ ಬಳಿ ಕೇಳುತ್ತೇವೆ. ಸಾಕಷ್ಟು ಆಹಾರಕ್ಕಾಗಿ ನಾವು ನದಿಯಲ್ಲಿ ಮೀನುಗಳನ್ನು ಹೊಂದಿದ್ದೇವೆ. ಮಳೆಯಾದರೆ ನಾವು ನಮ್ಮ ತುತ್ತಿನ ಚೀಲವನ್ನು ತುಂಬಿಕೊಳ್ಳುತ್ತೇವೆ’ ಎಂದು ಓಕ್ಸಾಕಾದ ಉಗಿ ಪೆಸಿಫಿಕ್ ಕರಾವಳಿಯಲ್ಲಿರುವ ಸಣ್ಣ ಮೀನುಗಾರಿಕಾ ಹಳ್ಳಿಯ ಮೇಯರ್ ಸೋಸಾ ಹೇಳಿದ್ದಾರೆ.
ಇದನ್ನೂ ಓದಿ: ನಿದ್ದೆಯಿಂದ ಎದ್ದೇಳಿಸಿದ್ರೆ ಸಾಕು ಸಿಗುತ್ತೆ ತಿಂಗಳಿಗೆ 26 ಲಕ್ಷ ರೂ. ಸಂಬಳ
ಪುಟ್ಟ ರಾಜಕುಮಾರಿ ಅಂತಾ ಕರೆಯಲ್ಪಡುವ ಮೊಸಳೆ ಭೂಮಿತಾಯಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದೆ. ಸ್ಥಳೀಯ ನಾಯಕನೊಂದಿಗೆ ಆಕೆಯ ವಿವಾಹವಾಗುವುದನ್ನು ಮಾನವ ಮತ್ತು ದೈವಿಕ ಬಾಂಧವ್ಯದ ಸಂಕೇತವೆಂಬ ನಂಬಿಕೆ ಅಲ್ಲಿ ರೂಢಿಯಲ್ಲಿದೆಯಂತೆ. ಮದುವೆ ವೇಳೆ ಸ್ಥಳೀಯರು ವಧು ಮೊಸಳೆಯನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಬೀದಿಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದ್ದಾರೆ.
ಸ್ಯಾನ್ ಪೆಡ್ರೊ ಹ್ಯುಮೆಲುಲಾದಲ್ಲಿನ ಹಳೆಯ ಆಚರಣೆಯು ಈಗ ಕ್ಯಾಥೊಲಿಕ್ ಆಧ್ಯಾತ್ಮಿಕತೆಯೊಂದಿಗೆ ಬೆರೆತಿದೆ. ಮೊಸಳೆಗೆ ಬಿಳಿ ಮದುವೆಯ ಡ್ರೆಸ್ ಜೊತೆಗೆ ಇತರ ವರ್ಣರಂಜಿತ ಉಡುಪುಗಳಲ್ಲಿ ಧರಿಸಿ ಅದ್ದೂರಿ ಸಮಾರಂಭ ನಡೆಸಲಾಗುತ್ತದೆ. ‘ನನ್ನ ಸಂಸ್ಕೃತಿ ಮತ್ತು ಸಂಪ್ರದಾಯದ ಮೂಲದ ಬಗ್ಗೆ ನನಗೆ ಹೆಮ್ಮೆಯಿದೆ ಮತ್ತು ಈ ಆಚರಣೆಯಿಂದ ತುಂಬಾ ಸಂತೋಷವಾಗಿದೆ’ ಎಂದು ವಿವಾಹ ಆಯೋಜಿಸಿದ್ದ ದೇವಮಾತೆ ಎಂದು ಕರೆಸಿಕೊಳ್ಳುವ ಎಲಿಯಾ ಎಡಿತ್ ಆಗ್ವಿಲರ್ ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ