ಜಗತ್ತಿನ ಅತೀ ಕೊಳಕು ನಾಯಿ: ಹೀಗೆ ಕರೆಯಲು ಕಾರಣ ಏನ್‌ಗೊತ್ತಾ?

ಅನೇಕ ಕಾಯಿಲೆಗಳಿಂದಾಗಿ ಬಳಲುತ್ತಿರುವ ಈ ನಾಯಿಗೆ ಡೈಪರ್‌ಗಳು ಬೇಕಾಗುತ್ತವೆ. ನೆಟ್ಟಗೆ ನಿಲ್ಲಲು ಅಥವಾ ನಡೆಯಲು ಕಷ್ಟಪಡುತ್ತದೆ. ಚಿಹೋವಾ ನಾಯಿ ಶೋಚನೀಯ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದನ್ನು ವ್ಯಕ್ತಿಯೊಬ್ಬರು ತಂದು ಸಾಕುತ್ತಿದ್ದಾರೆ. ಈ ನಾಯಿ ಆಟವಾಡಲು ಇಷ್ಟಪಟ್ಟಾಗ ಅಥವಾ ಖುಷಿಯಾದಾಗಲೆಲ್ಲ ‘ಡಾಡ್ಜ್ ರಾಮ್ ಡೀಸೆಲ್ ಟ್ರಕ್’ ಎಂದು ಸದ್ದು ಮಾಡುತ್ತದೆ.

Written by - Bhavishya Shetty | Last Updated : Jun 28, 2022, 10:14 AM IST
  • ಜಗತ್ತಿನ ಅತೀ ಕೊಳಕು ನಾಯಿ ಯಾವುದು ಗೊತ್ತಾ?
  • 17 ವರ್ಷದ ಚಿಹೋವಾ ಮಿಕ್ಸ್ ಬಗ್ಗೆ ನೀವು ಓದಲೇಬೇಕು
  • ಯುನೈಟೆಡ್ ಸ್ಟೇಟ್ಸ್‌ನ ಅರಿಜೋನಾದಲ್ಲಿರುವ ನಾಯಿ
ಜಗತ್ತಿನ ಅತೀ ಕೊಳಕು ನಾಯಿ: ಹೀಗೆ ಕರೆಯಲು ಕಾರಣ ಏನ್‌ಗೊತ್ತಾ? title=
World's Ugliest Dog

ಮನುಷ್ಯರು ಹೆಚ್ಚಾಗಿ ಪ್ರೀತಿಸೋ ಪ್ರಾಣಿಯೆಂದರೆ ಅದು ಶ್ವಾನ. ಮನೆಯ ಸದಸ್ಯರಂತೆ ನಾಯಿಗಳನ್ನು ಸಾಕುವ ಜನರು ಅದನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಈ ಮೂಲಕ ಪ್ರಾಣಿಯ ಶುಭ್ರತೆ ಕಾಪಾಡಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಶ್ವಾನವಿದೆ. ಅದನ್ನು ಜಗತ್ತಿನ ಅತೀ ಕೊಳಕು ನಾಯಿ ಎಂದೇ ಪರಿಗಣಿಸಲಾಗಿದೆ. ಇದಕ್ಕೆ ಕಾರಣವೂ ಇದೆ. 

ಇದನ್ನೂ ಓದಿ: ಹಳೆ ಎಸಿ ಕೊಟ್ಟು ಹೊಸದನ್ನು ಪಡೆಯಿರಿ .! ಈ ವಿದ್ಯುಚ್ಛಕ್ತಿ ಕಂಪನಿಯು ನೀಡುತ್ತಿದೆ ಭಾರೀ ಆಫರ್

ಯುನೈಟೆಡ್ ಸ್ಟೇಟ್ಸ್‌ನ ಅರಿಜೋನಾದ 17 ವರ್ಷದ ಚಿಹೋವಾ ಮಿಕ್ಸ್ ಎಂಬ ನಾಯಿ ವಿಶ್ವದ ಅತ್ಯಂತ ಕೊಳಕು ನಾಯಿ ಎಂದು ಗುರುತಿಸಲ್ಪಟ್ಟಿದೆ. ಕ್ಯಾಲಿಫೋರ್ನಿಯಾದ ಸೋನೋಮಾ-ಮರಿನ್ ಮೇಳದ ಸಂದರ್ಭದಲ್ಲಿ ಈ ನಾಯಿ ಕಂಡುಬಂದಿತ್ತು. ಈ ಕಾರ್ಯಕ್ರಮವು ಸುಮಾರು 50 ವರ್ಷಗಳಿಂದ ನಡೆಯುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಕಾರಣದಿಂದ ಎರಡು ವರ್ಷಗಳ ಬಳಿಕ ಮತ್ತೆ ಸ್ಪರ್ಧೆಯನ್ನು ನಡೆಸಲಾಗಿದೆ.

ಅನೇಕ ಕಾಯಿಲೆಗಳಿಂದಾಗಿ ಬಳಲುತ್ತಿರುವ ಈ ನಾಯಿಗೆ ಡೈಪರ್‌ಗಳು ಬೇಕಾಗುತ್ತವೆ. ನೆಟ್ಟಗೆ ನಿಲ್ಲಲು ಅಥವಾ ನಡೆಯಲು ಕಷ್ಟಪಡುತ್ತದೆ. ಚಿಹೋವಾ ನಾಯಿ ಶೋಚನೀಯ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದನ್ನು ವ್ಯಕ್ತಿಯೊಬ್ಬರು ತಂದು ಸಾಕುತ್ತಿದ್ದಾರೆ. ಈ ನಾಯಿ ಆಟವಾಡಲು ಇಷ್ಟಪಟ್ಟಾಗ ಅಥವಾ ಖುಷಿಯಾದಾಗಲೆಲ್ಲ ‘ಡಾಡ್ಜ್ ರಾಮ್ ಡೀಸೆಲ್ ಟ್ರಕ್’ ಎಂದು ಸದ್ದು ಮಾಡುತ್ತದೆ.

ಸ್ಪರ್ಧೆಯಲ್ಲಿ, ವಿಜೇತ ನಾಯಿ ಎಲ್ಲಾ ತೀರ್ಪುಗಾರರ ಮನಗೆದ್ದಿದೆ. ಈ ಶ್ವಾನ ಇತರ ನಾಯಿಗಳನ್ನು ಬೀಟ್ ಮಾಡಿದ ಹಲ್ಲುಗಳಿಲ್ಲದ, ಕೂದಲುರಹಿತ ರೂಪಾಂತರಿತ ನಾಯಿ ಎಂದು ಕರೆಯಲ್ಪಟ್ಟಿದೆ. ಗೊರಿಲ್ಲಾ ತರಹದ ತಲೆಯನ್ನು ಹೊಂದಿರುವ ಈ ನಾಯಿ ನೋಡೋಕೆ ತುಂಬಾ ವಿಚಿತ್ರವಾಗಿದೆ. ʼಮಿಸ್ಟರ್‌ ಹ್ಯಾಪಿ ಫೇಸ್‌ʼ ಈವೆಂಟ್‌ನ ಮಾಲೀಕರಾದ ಗೆನ್ನಡಾ ಬೆನೆಲ್ಲಿ 2021 ರ ಆಗಸ್ಟ್‌ನಲ್ಲಿ ಅರಿಜೋನಾದಿಂದ  ಈ ನಾಯಿಯನ್ನು ದತ್ತು ಪಡೆದಿದ್ದಾರೆ.

"ನಾನು ಅರಿಜೋನಾಗೆ ಹೋದಾಗ ಈ ನಾಯಿಯನ್ನು ನೋಡಿದೆ. ಈ ನಾಯಿ ತುಂಬಾ ದೊಡ್ಡದಾಗಿದೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಹೊಂದಿದೆ. ನೋಡಲು ಸಹ ಸುಂದರವಾಗಿಲ್ಲ ಎಂದು ನನಗೆ ಎಚ್ಚರಿಕೆ ನೀಡಿದರು. ಜೊತೆಗೆ ನಾನು ತಂಗಿದ್ದ ಸ್ಥಳದ ಜನರು ಈ ನಾಯಿಯನ್ನು ಹೇಗೆ ಕಾಳಜಿ ವಹಿಸಬೇಕು ಎಂದು ನನಗೆ ವಿವರಿಸಿದರು" ಎಂದು ಹೇಳಿದರು. 

"ನಾನು ನಿಜವಾಗಿಯೂ ವಯಸ್ಸಾದ ಮತ್ತು ಪ್ರೀತಿಗೆ ಅರ್ಹವಾದ ಜೀವಿಯನ್ನು ನೋಡಿದೆ" ಎಂದರು.

ಇದನ್ನೂ ಓದಿ: Tsunami Viral Photo: ಆಕಾಶದಲ್ಲಿ ಏಳುತ್ತಿದೆಯೇ ಸುನಾಮಿ.? ಯಾವ ಸಂದೇಶ ನೀಡುತ್ತಿದೆ ಈ ಫೋಟೋ ?

ಇನ್ನು ಮಿಸ್ಟರ್ ಹ್ಯಾಪಿ ಫೇಸ್ ಗೆದ್ದ ಶ್ವಾನಕ  ಮತ್ತು ಅದರ ಮಾಲೀಕರಿಗೆ 1,500 ಡಾಲರ್‌ ನಗದು ಮತ್ತು ನ್ಯೂಯಾರ್ಕ್ ನಗರಕ್ಕೆ ಪ್ರವಾಸ ಹೋಗುವ ಅವಕಾಶವನ್ನು ನೀಡಲಾಯಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News