Toddler Bite Snake - ಮಕ್ಕಳು ತುಂಬಾ ಮುಗ್ಧರಾಗಿರುತ್ತಾರೆ. ಅವರಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದು ತಿಳಿದಿರುವುದಿಲ್ಲ. ಈ ಕಾರಣದಿಂದಾಗಿ ಅವರು ಅನೇಕ ಬಾರಿ ಅವರಿಗೆ ತುಂಬಾ ಅಪಾಯಕಾರಿ ಎಂದು ಸಾಬೀತಾಗುವ ಹಲವು ಕೆಲಸಗಳನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂತಹ ಮುಗ್ಧ ಹುಡುಗಿಯ ಸುದ್ದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇತ್ತೀಚಿಗೆ ಪುಟ್ಟ ಬಾಲಕಿಯೊಂದಿಗೆ ನಡೆದ ಘಟನೆಯನ್ನು ಕೇಳಿದರೆ ಮೈನವಿರೇಳುತ್ತದೆ.


COMMERCIAL BREAK
SCROLL TO CONTINUE READING

ಪುಟ್ಟ ಬಾಲಕಿಯೋರ್ವಳು ತನ್ನ ಮನೆಯಲ್ಲಿ ಆಟವಾಡಿಕೊಂಡಿದ್ದಳು. ಈ ವೇಳೆ ಎಲ್ಲಿಂದಲೋ ಒಂದು ಹಾವು ಆಕೆಯ ಬಳಿಗೆ ಬಂದಿದೆ. ಆ ಸಮಯದಲ್ಲಿ ಬಾಲಕಿಯ ಸುತ್ತಮುತ್ತ ಯಾರೂ ಇರಲಿಲ್ಲ. ಬಾಲಕಿ ಆಟವಾಡುತ್ತ ಹಾವನ್ನು ಹಿಡಿದಿದ್ದು, ಕೋಪಗೊಂಡ ಹಾವು ಬಾಲಕಿಯನ್ನು ಕಚ್ಚಿದೆ. ಇದರಿಂದ ಕೋಪಗೊಂಡ ಅಮಾಯಕ ಬಾಲಕ್ಕಿ  ಹಾವನ್ನು ಹಿಡಿದು ತನ್ನ ಹಾಲುಳ್ಳ ಹಲ್ಲುಗಳಿಂದ ಜಗಿದಿದ್ದಾಳೆ.


ಇದನ್ನೂ ಓದಿ-‘You Are Next’: ಸಲ್ಮಾನ್ ರಶ್ದಿ ಬಳಿಕ ಹ್ಯಾರಿ ಪಾಟರ್ ಲೇಖಕಿಗೆ ಬಂತು ಕೊಲೆ ಬೆದರಿಕೆ


ಹೃದಯ ವಿದ್ರಾವಕ ಘಟನೆಯು ಟರ್ಕಿಯ ಬ್ಯಾಂಗೋಲ್ ನಗರದ ಕಾಂತಾರ್ ಎಂಬ ಪುಟ್ಟ ಗ್ರಾಮದಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಹುಡುಗಿಯ ವಯಸ್ಸು 2 ವರ್ಷಗಳು. ಹಾವು ಕಚ್ಚಿ ನೋವು ಅನುಭವಿಸಿದಾಗ ಆಕೆ ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ಅಳುತ್ತಿರುವ ಬಾಲಕಿಯ ಧ್ವನಿ ಕೇಳಿ ಅಕ್ಕಪಕ್ಕದ ಜನರು ಆಕೆಯ ಬಳಿ ಧಾವಿಸಿದ್ದಾರೆ. ಆದರೆ ಬಾಲಕಿಯ ಕೋಣೆಯೊಳಗಿನ ದೃಶ್ಯವನ್ನು ನೋಡಿ ನೆರೆದವರೆಲ್ಲರೂ ದಂಗಾಗಿದ್ದಾರೆ. ಸುಮಾರು ಅರ್ಧ ಮೀಟರ್ ಉದ್ದದ ಒಂದು ಹಾವನ್ನು ಪುಟ್ಟ ಬಾಲಕಿ ತನ್ನ ಹಲ್ಲುಗಳಲ್ಲಿ ಕಚ್ಚಿ ಹಿಡಿದಿರುವುದನ್ನು ಜನರು ನೋಡಿದ್ದಾರೆ. ಹಾವು ಬಾಲಕಿಯ ಕೆಳತುಟಿಗೆ ಕಚ್ಚಿತ್ತು. ಇದಾದ ನಂತರ ನೆರೆಹೊರೆಯವರು ತಡಮಾಡದೆ ಬಾಲಕಿಯನ್ನು ಟರ್ಕಿಯ ಬಿಂಗೋಲ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅಲ್ಲಿ ಆಕೆಯನ್ನು 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.


ಇದನ್ನೂ ಓದಿ-Viral Video: ಸಂಗೀತವನ್ನು ಆನಂದಿಸುತ್ತಾ ಗಿಟಾರ್ ನುಡಿಸಿದ ಬೀದಿ ನಾಯಿ!


ಸದ್ಯ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಆದರೆ ಹಾವು ಮಾತ್ರ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಹಾವನ್ನು ಆಟಿಕೆ ಎಂದು ತಪ್ಪಾಗಿ ಭಾವಿಸಿ ಅಮಾಯಕ ತನ್ನ ಹಾಲಿನ ಹಲ್ಲುಗಳನ್ನು ಹಾವಿನ ಹೊಟ್ಟೆಯಲ್ಲಿ ಹುದುಗಿಸಿದ್ದಾಳೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.