ಲಂಡನ್‌: ಗ್ರಾಹಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುವ ವಿಚಾರವಾಗಿ ಓಲಾ, ಊಬರ್ ಕಂಪನಿಗಳು ಸುದ್ದಿಯಲ್ಲಿರುತ್ತವೆ. ತಾವು ಗ್ರಾಹಕ ಸ್ನೇಹಿ ಸೇವೆ ನೀಡುತ್ತವೆ ಅಂತಾ ಹೇಳಿಕೊಂಡೇ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಈ ಕ್ಯಾಬ್‍ ಸೇವೆಗಳಿಗೆ ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಬಿಸಿ ಮುಟ್ಟಿಸಿದೆ.


COMMERCIAL BREAK
SCROLL TO CONTINUE READING

ಗ್ರಾಹಕರಿಗೆ ಬೇಕಾಬಿಟ್ಟಿಯಾಗಿ ದುಬಾರಿ ದರ ವಿಧಿಸುವ ಅನೇಕ ಪ್ರಸಂಗಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಅದೇ ರೀತಿಯ ಮತ್ತೊಂದು ಘಟನೆ ಬ್ರಿಟನ್‍ನಲ್ಲಿ ನಡೆದಿದೆ. ಕೇವಲ 6 ಕಿ.ಮೀ ಸಂಚಾರಕ್ಕೆ ಊಬರ್ ಕಂಪನಿ ಗ್ರಾಹಕರೊಬ್ಬರಿಗೆ ಬರೋಬ್ಬರಿ 32 ಲಕ್ಷ ರೂ. ಶುಲ್ಕ ವಿಧಿಸಿದೆ. ತನಗೆ ಬಂದ್ ಬಿಲ್ ನೋಡಿ ಆ ಗ್ರಾಹಕ ಹೌಹಾರಿ ಹೋಗಿದ್ದಾನೆ.


ಇದನ್ನೂ ಓದಿ: Hindu Temple Attack: ಬಾಂಗ್ಲಾದೇಶದಲ್ಲಿ ಕಾಳಿ ದೇಗುಲ ಧ್ವಂಸಗೊಳಿಸಿದ ಕಿಡಿಗೇಡಿಗಳು!


ಹೌದು, ಇದು ವಿಚಿತ್ರವಾದರೂ ನಿಜ. ಬ್ರಿಟನ್‌ನಲ್ಲಿ ಆಲಿವರ್‌ ಎಂಬಾತ ಇತ್ತೀಚೆಗೆ ಆಫೀಸಿನ ಕೆಲಸ ಮುಗಿಸಿ ಊಬರ್‌ ಕ್ಯಾಬ್‌ ಬುಕ್‌ ಮಾಡಿ ಪಬ್‍ಗೆ ತೆರಳಿದ್ದ. ಆಫೀಸ್‍ನಿಂದ ಪಬ್‌ ಕೇವಲ 6 ಕಿ.ಮೀ ದೂರವಿದ್ದರೂ ಊಬರ್‌ ಆತನಿಗೆ ಬರೋಬ್ಬರಿ 32 ಲಕ್ಷ ರೂ. ಶುಲ್ಕ ವಿಧಿಸಿದೆ.


ಪಬ್‌ನಲ್ಲಿ ಪಾರ್ಟಿ ಮಾಡಿ ಮೋಜು-ಮಸ್ತಿ ಮಾಡಿ ಸಂಭ್ರಮದಲ್ಲಿದ್ದ ಆಲಿವರ್‌ಗೆ ಊಬರ್‌ 32 ಲಕ್ಷ ರೂ.ನ ಬಿಲ್‌ ಕಳುಹಿಸಿದೆ. ಬಿಲ್ ನೋಡಿದ ಆತ ಮೊದಲು ಕನ್ಫ್ಯೂಸ್ ಆಗಿದ್ದ. ಬಳಿಕ ಅದು ನಿಜ ಅಂತಾ ಗೊತ್ತಾದಾಗ ಹೌಹಾರಿದ್ದಾನೆ. ಕೂಡಲೇ ಆತ ಈ ಬಗ್ಗೆ ಆತ ಊಬರ್ ಸಂಸ್ಥೆಯನ್ನು ಪ್ರಶ್ನಿಸಿದ್ದಾನೆ. ‘ಕ್ಷಮಿಸಿ, ನಮ್ಮ App ತಪ್ಪಾಗಿ ನಿಮ್ಮ ಡೆಸ್ಟಿನೇಶನ್‌ ಅನ್ನು 16,000 ಕಿ.ಮೀ. ದೂರದಲ್ಲಿರುವ ಆಸ್ಟ್ರೇಲಿಯಾವನ್ನು ತೆಗೆದುಕೊಂಡಿದೆ. ಹೀಗಾಗಿ ನಿಮಗೆ 32 ಲಕ್ಷ ರೂ. ಬಿಲ್ ಬಂದಿದೆ. ನಿಮ್ಮ ನಿಜವಾದ ಶುಲ್ಕ ಕೇವಲ 900 ರೂ.’ ಅಂತಾ ಹೇಳಿದೆ. ಇದರಿಂದ ಆಲಿವರ್‌ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಸದ್ಯ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.


ಇದನ್ನೂ ಓದಿ: ಕಾಕ್‌ಪಿಟ್‌ನಲ್ಲಿ ಬಟ್ಟೆ ಬಿಚ್ಚಿ ಲೈಂಗಿಕ ಕಿರುಕುಳ: ಏರ್‌ಲೈನ್ಸ್ ವಿರುದ್ಧ ಮಹಿಳಾ ಪೈಲಟ್ ದೂರು!  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.