Wife Gift Husband A Doll: ಅಮೇರಿಕಾದಲ್ಲಿ ಆಶ್ಚರ್ಯ ಹುಟ್ಟಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ತನ್ನ ಗಂಡನ ಮನಸ್ಸು ತನ್ನನ್ನು ಹೊರತುಪಡಿಸಿ ಬೇರೆ ಮಹಿಳೆಯ ಮೇಲೆ ಬರುವುದು ಅಥವಾ ಅವಳ ಪತಿ ಬೇರೆ ಯಾವುದೋ  ಮಹಿಳೆಯನ್ನು ಪ್ರೀತಿಸುವುದು ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಆದರೆ, ಅಮೆರಿಕಾದಲ್ಲಿ ವಾಸಿಸುವ ಮಹಿಳೆಯೊಬ್ಬಳು ತನ್ನ ತದ್ರೂಪಿ ಅಥವಾ ತನ್ನಂತೆಯೇ ಕಾಣುವ ಗೊಂಬೆಯನ್ನು ಖರೀದಿಸಿದ್ದಾಳೆ. ಅಷ್ಟೇ ಅಲ್ಲ ಆ ಬೊಂಬೆಗೆ ಆಕೆ ತನ್ನಂತೆಯೇ ಇರುವ ಬಟ್ಟೆಗಳನ್ನು ತೊಡಿಸಿದ್ದಾಳೆ. ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಬೊಂಬೆ ಮೊದಲ ನೋಟದಲ್ಲಿ ಜೀವಂತ ಹುಡುಗಿಯೇ ಇದೆ ಎಂಬಂತೆ ಕಂಗೊಳಿಸುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದೀಗ ಈ ಜೋಡಿಯ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಜನರು ಅವರ ಸಂಬಂಧದ ಬಗ್ಗೆ ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ತನ್ನ ತಡ್ರೂಪಿಯನ್ನು ಪತಿಗೆ ಉಡುಗೊರೆಯಾಗಿ ನೀಡಿದ ಪತ್ನಿ
ಡೈಲಿ ಸ್ಟಾರ್‌ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ತನ್ನ ಪತಿಗೆ ತನ್ನಂತೆಯೇ ಇರುವ ಗೊಂಬೆಯನ್ನು ಖರೀದಿಸಿದ ಮಹಿಳೆಯ ಹೆಸರು ಚಾರ್ ಗ್ರೇ. ಆಕೆಗೆ 23 ವರ್ಷ. ಚಾರ್ ಗ್ರೇ ಪತಿಯ ಹೆಸರು ರಾಂಡಿ ಕ್ಯಾಲಮ್ ಗ್ರೇ, ಪತಿಗೆ 28 ​​ವರ್ಷ ವಯಸ್ಸು. ತನ್ನ ಪತ್ನಿಯ ತದ್ರೂಪಿ ಗೊಂಬೆಯ ನೋಡಿದ ರಾಂಡಿಗೆ, ಇದು ನಿಜವೆಂದು ನಂಬಲು ಸಾಧ್ಯವಾಗಲಿಲ್ಲ. ಆದರೆ, ನಂತರ ಅವರು ತಮ್ಮ ಮನೆಗೆ ಹೊಸ ಅತಿಥಿಯ ರೂಪದಲ್ಲಿ ಹೆಂಡತಿಯ ತದ್ರೂಪಿಯನ್ನು ತುಂಬಾ ಸಂತೋಷದಿಂದ ಸ್ವಾಗತಿಸಿದ್ದಾರೆ.


ಇದನ್ನೂ ಓದಿ-ಈ ವರ್ಷ ಬರಲಿದೆ ದೊಡ್ಡ ದುರಂತ! ನಾಸ್ಟ್ರಾಡಾಮಸ್ ಭವಿಷ್ಯವಾಣಿಯ ಭಯದ ನೆರಳಿನಲ್ಲಿ ಜಗತ್ತು


ಬೊಂಬೆಯನ್ನು ಸ್ವಾಗತಿಸಿ ತುಂಬಾ ಸಂತೋಷಪಟ್ಟ ದಂಪತಿಗಳು
ಚಾರ್ ಮತ್ತು ಅವರ ಪತಿಗೆ ಲುಕ್‌ಲೈಕ್ ಗೊಂಬೆ ತುಂಬಾ ಇಷ್ಟವಾಗಿದೆ, ಇಬ್ಬರೂ ಗೊಂಬೆಯೊಂದಿಗೆ ತಮ್ಮ ಹಾಸಿಗೆಯ ಮೇಲೆ ಕುಳಿತು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಅಂತಹುದೇ ಒಂದು ಫೋಟೋದಲ್ಲಿ, ಚಾರ್ ಮತ್ತು ಅವರ ಪತಿ ರಾಂಡಿ ಹಾಸಿಗೆಯ ಮೇಲೆ ಕುಳಿತಿದ್ದಾರೆ ಮತ್ತು ಅವರು ಪತ್ನಿಯ ತದ್ರೂಪಿ ಗೊಂಬೆಯನ್ನು ಮಧ್ಯದಲ್ಲಿ ಇರಿಸಿಕೊಂಡಿದ್ದಾರೆ. ಗೊಂಬೆಯ ಒಂದು ಕೈ ಚಾರ್ ಭುಜದ ಮೇಲಿದ್ದರೆ, ಮತ್ತೊಂದು ಕೈ ಚಾರ್ ಪತಿ ರಾಂಡಿಯ ಭುಜದ ಮೇಲಿದೆ. ಗೊಂಬೆಯ ಆಗಮನದ ನಂತರ ದಂಪತಿಗಳು ತುಂಬಾ ಸಂತೋಷಪಟ್ಟಿದ್ದಾರೆ.


ಇದನ್ನೂ ಓದಿ-ಯುಎಸ್‌ನ ಇಂಡಿಯಾನಾ ಮಾಲ್‌ನಲ್ಲಿ ಗುಂಡಿನ ದಾಳಿ, 4 ಜನರ ದುರ್ಮರಣ


ದಂಪತಿಗಳು ಗೊಂಬೆಯನ್ನು ಕುಟುಂಬದ ಸದಸ್ಯರಂತೆ ನಡೆಸಿಕೊಳ್ಳುತ್ತಿದ್ದಾರೆ
ಪ್ರಸ್ತುಗ ಚಾರ್ ಕಾಣುವ ಈ ಬೊಂಬೆಯನ್ನು ದಂಪತಿಗಳು ತಮ್ಮ ಕುಟುಂಬದ ಸದಸ್ಯನಂತೆಯೇ ಭಾವಿಸಿ ಅದರ ಆರಿಕೆ ಮಾಡುತ್ತಿದ್ದಾರೆ. ಇಬ್ಬರೂ ಅವಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಚಾರ್ ತನ್ನ ತದ್ರೂಪಿ ಬೊಂಬೆಗೆ ಹೊಸ ಬಟ್ಟೆಯನ್ನೂ ಕೂಡ ಖರೀದಿಸಿ ತಂದಿದ್ದಾಳೆ. ನಾನು ಮನೆಯಿಂದ ಹೊರಗಿರುವಾಗ, ನನ್ನ ಪತಿಯೊಂದಿಗೆ ಗೊಂಬೆ ಇದೆ ಮತ್ತು ಇದರಿಂದ ತಮ್ಮ ಪತಿಗೆ ಒಂಟಿತನ ಕಾಡುವುದಿಲ್ಲ ಎಂದು ಚಾರ್ ಹೇಳುತ್ತಾಳೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.