ನವದೆಹಲಿ: ವಿಶ್ವದ ಶ್ರೇಷ್ಠ ಪ್ರವಾದಿಯಾದ ನಾಸ್ಟ್ರಾಡಾಮಸ್ ತನ್ನ ಭವಿಷ್ಯಗಳಿಂದಲೇ ಪ್ರಖ್ಯಾತಿಯಾಗಿದ್ದಾನೆ. ಹಿಟ್ಲರನ ಆಳ್ವಿಕೆ, ವಿಶ್ವ ಸಮರ II, 9/11 ದಾಳಿಗಳು ಮತ್ತು ಫ್ರೆಂಚ್ ಕ್ರಾಂತಿ ಸೇರಿದಂತೆ ಅವರು ನುಡಿದ ಭವಿಷ್ಯವಾಣಿಗಳ ಪೈಕಿ ಶೇ.85ರಷ್ಟು ನಿಜವಾಗಿದೆ. ನಾಸ್ಟ್ರಾಡಾಮಸ್ 500 ವರ್ಷಗಳ ಹಿಂದೆ ಹೇಳಿದ್ದ 2022ರ ಭವಿಷ್ಯವನ್ನು ತಿಳಿದರೆ ಜನರು ಆಘಾತಕ್ಕೊಳಗಾಗುತ್ತಾರೆ. ಈ ರೀತಿ ಭಯಾನಕ ಭವಿಷ್ಯ ಹೇಳಿದ್ದ ನಾಸ್ಟ್ರಾಡಾಮಸ್ ಜರ್ಮನಿಯಲ್ಲಿ 14 ಡಿಸೆಂಬರ್ 1503ರಂದು ಜನಿಸಿದರು ಮತ್ತು 2 ಜುಲೈ 1566ರಂದು ನಿಧನರಾದರು.
ಈ ವರ್ಷ ಪರಮಾಣು ಬಾಂಬ್ ಸ್ಫೋಟದ ಮುನ್ಸೂಚನೆ
2022ರ ವರ್ಷಕ್ಕೆ ಸಂಬಂಧಿಸಿದಂತೆ ನಾಸ್ಟ್ರಾಡಾಮಸ್ ತನ್ನ ಭವಿಷ್ಯವಾಣಿಯಲ್ಲಿ ಈ ವರ್ಷದಲ್ಲಿ ಪರಮಾಣು ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದಾನೆ. ಇದರಿಂದಾಗಿ ಹವಾಮಾನ ವೈಪರಿತ್ಯವಾಗಲಿದ್ದು, ಅಣುಬಾಂಬ್ ಸ್ಫೋಟದಿಂದ ಭೂಮಿಯ ಸ್ಥಿತಿಯೂ ಬದಲಾಗಬಹುದು ಎನ್ನಲಾಗಿದೆ.
ಇದನ್ನೂ ಓದಿ: ಎರಡು ದೇಶದ ಪೊಲೀಸರಿಗೂ ಸಿಗದ ಆರೋಪಿಯನ್ನು ಗಂಟೆಗಳಲ್ಲಿ ಪತ್ತೆ ಹಚ್ಚಿತು ನಾಯಿ!
ಹಣದುಬ್ಬರದ ಬಗ್ಗೆಯೂ ಭವಿಷ್ಯ
ನಾಸ್ಟ್ರಾಡಾಮಸ್ 500 ವರ್ಷಗಳ ಹಿಂದೆ 2022ರ ಹಣದುಬ್ಬರದ ಸಮಸ್ಯೆ ಬಗ್ಗೆ ಊಹಿಸಿದ್ದರು. ನಾಸ್ಟ್ರಾಡಾಮಸ್ ಭವಿಷ್ಯ ನುಡಿದಂತೆ ಈ ವರ್ಷ ಹಣದುಬ್ಬರ ನಿಯಂತ್ರಣಕ್ಕೆ ಬರುವುದಿಲ್ಲ. ಇದಲ್ಲದೇ ಅಮೆರಿಕದ ಡಾಲರ್ ಮೌಲ್ಯವೂ ತೀವ್ರವಾಗಿ ಕುಸಿಯಲಿದೆ. ಇದರೊಂದಿಗೆ 2022ರಲ್ಲಿ ಜನರು ಚಿನ್ನ, ಬೆಳ್ಳಿ ಮತ್ತು ಬಿಟ್ಕಾಯಿನ್ನಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಕ್ಷುದ್ರಗ್ರಹವು ಭಾರೀ ಹಾನಿಯನ್ನುಂಟುಮಾಡುತ್ತದೆ
ನಾಸ್ಟ್ರಾಡಾಮಸ್ ಭವಿಷ್ಯವಾಣಿಯ ಪ್ರಕಾರ, 2022ರಲ್ಲಿ ಕ್ಷುದ್ರಗ್ರಹವು ಭೂಮಿಗೆ ಭಾರೀ ಹಾನಿಯನ್ನುಂಟುಮಾಡುತ್ತದಂತೆ. ಒಂದು ದೊಡ್ಡ ಬಂಡೆಯು ಸಮುದ್ರಕ್ಕೆ ಬೀಳುತ್ತದೆ ಎಂದು ನಾಸ್ಟ್ರಾಡಾಮಸ್ ಹೇಳಿದ್ದಾನೆ. ಇದರಿಂದಾಗಿ ಭೀಕರ ಅಲೆಗಳು ಏಳುತ್ತವೆ ಮತ್ತು ಎಲ್ಲಾ ಕಡೆಯಿಂದ ಭೂಮಿಯನ್ನು ಸುತ್ತುವರೆಯುತ್ತವೆ. ಈ ವೇಳೆ ಸಮುದ್ರದ ನೀರು ಭೂಮಿಗೆ ದೊಡ್ಡ ಹಾನಿ ಉಂಟುಮಾಡುತ್ತದೆ.
ಇದನ್ನೂ ಓದಿ: ಯುಎಸ್ನ ಇಂಡಿಯಾನಾ ಮಾಲ್ನಲ್ಲಿ ಗುಂಡಿನ ದಾಳಿ, 4 ಜನರ ದುರ್ಮರಣ
ದೊಡ್ಡ ಚಂಡಮಾರುತದಿಂದ ಫ್ರಾನ್ಸ್ನಲ್ಲಿ ವಿನಾಶ
ನಾಸ್ಟ್ರಾಡಾಮಸ್ನ ಭವಿಷ್ಯವಾಣಿಯ ಪ್ರಕಾರ, ಈ ವರ್ಷ ಫ್ರಾನ್ಸ್ನಲ್ಲಿ ದೊಡ್ಡ ಚಂಡಮಾರುತವಿರುತ್ತದೆ. ಇದರಿಂದಾಗಿ ಪ್ರಪಂಚದ ಅನೇಕ ಭಾಗಗಳು ತೀವ್ರ ಸಮಸ್ಯೆಗಳ ಜೊತೆಗೆ ಬರ ಮತ್ತು ಪ್ರವಾಹ ಪರಿಸ್ಥಿತಿಗಳನ್ನು ಎದುರಿಸಬಹುದು.
ಇಡೀ ಜಗತ್ತನ್ನು 72 ಗಂಟೆಗಳ ಕತ್ತಲು ಆವರಿಸುತ್ತದೆ
2022ರಲ್ಲಿ ಬೃಹತ್ ವಿನಾಶದ ನಂತರ ಶಾಂತಿ ಬರುತ್ತದೆ ಎಂದು ನಾಸ್ಟ್ರಾಡಾಮಸ್ ತನ್ನ ಭವಿಷ್ಯವಾಣಿಯಲ್ಲಿ ಹೇಳಿದ್ದಾನೆ. ಆದರೆ ಈ ಶಾಂತಿಯ ಮೊದಲು ಇಡೀ ಜಗತ್ತು 3 ದಿನಗಳು ಅಂದರೆ 72 ಗಂಟೆಗಳ ಕಾಲ ಕತ್ತಲೆಯಲ್ಲಿರುತ್ತದಂತೆ.
ಕೃತಕ ಬುದ್ಧಿಮತ್ತೆಯಿಂದ ಮಾನವರ ಮೇಲೆ ನಿಯಂತ್ರಣ
ನಾಸ್ಟ್ರಾಡಾಮಸ್ನ ಭವಿಷ್ಯವಾಣಿಯ ಪ್ರಕಾರ, 2022ರಲ್ಲಿ ಕೃತಕ ಬುದ್ಧಿಮತ್ತೆಯು ಮಾನವಕುಲದ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ವೈಯಕ್ತಿಕ ಕಂಪ್ಯೂಟರ್ನ ಮೆದುಳು ಮನುಷ್ಯರನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಅಲ್ಲದೆ ರೋಬೋಟ್ಗಳು ಮಾನವ ಜನಾಂಗವನ್ನು ನಾಶಮಾಡುತ್ತವಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.