ಹೈದರಾಬಾದ್: ಪಾರ್ಕಿಂಗ್‌ ಏರಿಯಾದಲ್ಲಿ ಮಲಗಿದ್ದ 3 ವರ್ಷದ ಮಗುವಿನ ಮೇಲೆ SUV ಕಾರು ಹರಿದು ಮಗು ಮೃತಪಟ್ಟಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಕಲಬುರಗಿಯ ಶಹಬಾದ್‌ ಮೂಲದ ಕವಿತಾ ಎಂಬುವರು ತನ್ನ 2 ಮಕ್ಕಳೊಂದಿಗೆ ಕೆಲಸ ಹುಡುಕಿಕೊಂಡು ಹೈದರಬಾದ್‍ಗೆ ಬಂದಿದ್ದರು. ಬುಧವಾರ ಬೆಳಗ್ಗೆ 8 ಗಂಟೆಗೆ ಹಯತ್‌ನಗರದ ಲೆಕ್ಚರ್ಸ್‌ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಕೆಲಸ ಮಾಡಲು ತೆರಳಿದ್ದರು. ಮಧ್ಯಾಹ್ನ ಊಟದ ಬಳಿಕ ತನ್ನ 3 ವರ್ಷದ ಮಗು ಲಕ್ಷ್ಮೀಯನ್ನು ಸೆಕೆ ಅಂತಾ ಹೇಳಿ ಅಪಾರ್ಟ್‍ಮೆಂಟ್‍ನ ಬೇಸ್‍ಮೆಂಟ್‍ನಲ್ಲಿ ಮಲಗಿಸಿದ್ದರು.


ಇದನ್ನೂ ಓದಿ: Viral Video: ಪ್ರಿಯಕರಿನಿಗಾಗಿ ನಡುಬೀದಿಯಲ್ಲೇ ಮಾರಾಮಾರಿ, ಒಬ್ಬನಿಗೆ ಇಷ್ಟೊಂದು ಹುಡ್ಗೀರಾ?


ಪಾರ್ಕಿಂಗ್‌ ಏರಿಯಾದಲ್ಲಿ ಮಗು ಮಲಗಿ ಗಾಢ ನಿದ್ದೆಯಲ್ಲಿತ್ತು. ಈ ವೇಳೆ ಪಾರ್ಕ್‌ ಮಾಡಲು ಅಂತಾ ಬಂದ SUV ಕಾರು ಮಲಗಿದ್ದ ಮಗುವಿನ ಮೇಲೆ ಹರಿದಿದೆ. ಪರಿಣಾಮ ತಲೆಗೆ ತೀವ್ರ ಏಟಾಗಿ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.


ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: Shocking News: ಸಂಗಾತಿಯನ್ನು ಕೊಂದು ದೇಹ ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟ ವ್ಯಕ್ತಿ!   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.