Viral Video: ಮಲಗಿದ್ದ ಮಹಿಳೆಯ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು!
ಮಹಿಳೆ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಲಬುರಗಿ: ಜಮೀನಿನಲ್ಲಿ ಮಲಗಿದ್ದ ಮಹಿಳೆಯೊಬ್ಬರ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತಿರುವ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ವಿಚಿತ್ರ ಹಾಗೂ ಪವಾಡ ರೀತಿಯ ಘಟನೆ ನಡೆದಿದೆ.
ಮಲ್ಲಾಬಾದ್ ಗ್ರಾಮದ ಭಾಗಮ್ಮ ಬಡದಾಳ್ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಕೆಲಸ ಮಾಡಿದ ಬಳಿಕ ವಿಶ್ರಾಂತಿಗಾಗಿ ಭಾಗಮ್ಮ ತಮ್ಮ ಜಮೀನಿನಲ್ಲಿ ಮಲಗಿದ್ದರು. ಈ ವೇಳೆ ಎಲ್ಲಿಂದಲೋ ಬಂದ ನಾಗರಹಾವು ಅವರ ಮೈಮೇಲೆ ಹರಿದಾಡಿದ್ದು, ಬಳಿಕ ಹೆಡೆ ಎತ್ತಿ ಕುಳಿತುಕೊಂಡಿದೆ.
ಚಿತ್ರದುರ್ಗದ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಎಫ್ಐಆರ್ ದಾಖಲು!
ಮೈಮೇಲೆ ನಾಗರಹಾವು ಇರುವುದನ್ನು ಕಂಡ ಭಾಗಮ್ಮನವರು ಬೆಚ್ಚಿಬಿದ್ದಿದ್ದಾರೆ. ಈ ವೇಳೆ ಅಲ್ಲಾಡದೆ ಮಲಗಿದ್ದ ಸ್ಥಳದಲ್ಲಿಯೇ ಮಲಗಿಕೊಂಡು ಕೈಮುಗಿದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ‘ನನ್ನನ್ನು ಕಾಪಾಡು ಶ್ರೀಶೈಲ ಮಲ್ಲಯ್ಯ’ ಅಂತಾ ಪ್ರಾರ್ಥಿಸಿದ್ದಾರೆ.
ಭಾಗಮ್ಮರ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ಮಹಿಳೆ ಕೈಮುಗಿದು ಪ್ರಾರ್ಥಿಸುತ್ತಿರುವುದನ್ನು ನೀವು ಕಾಣಬಹುದು. ನಾಗರಹಾವು ಸಹ ಮಹಿಳೆಗೆ ಏನೂ ಮಾಡದೆ ಹೆಡೆ ಎತ್ತಿ ಭುಸುಗುಟ್ಟಿದೆ. ಕೆಲಹೊತ್ತಿನ ನಂತರ ಭಾಗಮ್ಮರ ಮೈಮೇಲಿಂದ ಕೆಳಗೆ ಇಳಿದ ನಾಗರಹಾವು ಸ್ಥಳದಿಂದ ಮಾಯವಾಗಿದೆ.
ಇದನ್ನೂ ಓದಿ: Karnataka Weather: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮುಂದಿನ 4 ದಿನ ಮಳೆ ಅಬ್ಬರ!
ಸದ್ಯ ಮಹಿಳೆ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಭಾಗಮ್ಮನವರು ತಮ್ಮ ಹೋದ ಜೀವ ವಾಪಸ್ ಬಂದಂತಾಗಿದೆ. ಕೈಮುಗಿದ ಪ್ರಾರ್ಥಿಸಿದ್ದರಿಂದ ದೇವರೇ ನನ್ನನ್ನು ಕಾಪಾಡಿದ್ದಾನೆ ಎಂದು ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.