Viral Video: ಹಾವಿನೊಂದಿಗೆ ʼಸರಸʼವಾಡಲು ಹೋದವನಿಗೆ ಏನಾಯ್ತು ಗೊತ್ತಾ..? ಭಯಾನಕ ವಿಡಿಯೋ ನೋಡಿ!!
Snake viral video: ವೈರಲ್ ಆಗಿರೋ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಬ್ಬಾವನ್ನು ಹಿಡಿದು ಅದಕ್ಕೆ ಚುಂಬಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಅದು ಆತನಿಗೆ ಮರುಚುಂಬಿಸಿದೆ. ಹೆಬ್ಬಾವು ಆತನಿಗೆ ಬರಿ ಕಿಸ್ ಕೊಟ್ಟಿಲ್ಲ, ಆ ವ್ಯಕ್ತಿಯ ಬಾಯನ್ನೇ ಅದು ಬಲವಾಗಿ ಕಚ್ಚಿಬಿಟ್ಟಿದೆ.
Viral Snake Video: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಪೈಕಿ ಹಾವುಗಳ ವಿಡಿಯೋಗಳು ನೋಡುಗರ ಗಮನ ಸೆಳೆಯುತ್ತವೆ. ವಿಷಸರ್ಪಗಳ ಜೊತೆಗೆ ಕೆಲವರು ನಡೆಸುವ ಹರಸಾಹಸದ ವಿಡಿಯೋಗಳನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ಜೀವಕ್ಕೆ ಅಪಾಯ ಅನ್ನೋದು ಗೊತ್ತಿದ್ದರೂ ಸಹ ಕೆಲವರು ಹಾವುಗಳ ಜೊತೆಗೆ ಸರಸವಾಡಲು ಹೋಗುತ್ತಾರೆ. ಹಾವುಗಳನ್ನು ಹಿಡಿಯಲು ಹಾಗೂ ರಕ್ಷಿಸಲು ಹೋದ ಕೆಲವರು ಅವುಗಳ ಕಡಿತದಿಂದ ಸಾವನ್ನಪ್ಪಿದ್ದಾರೆ.
ತಮ್ಮ ಜೀವಕ್ಕೆ ಅಪಾಯವೆಂದು ಗೊತ್ತಿದ್ದರೂ ಸಹ ಹಾವುಗಳ ಜೊತೆಗೆ ಅನೇಕರು ಹುಚ್ಚು ಸಾಹಸ ಮಾಡಲು ಪ್ರಯತ್ನಿಸುತ್ತಾರೆ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. @Poonam_1992 ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ೧೫ ಸೆಕೆಂಡುಗಳ ಈ ವಿಡಿಯೋ ನೋಡಲು ತುಂಬಾ ಭಯಾನಕವಾಗಿದೆ.
ಭಾರತದಲ್ಲೇ ಇರುವ ಈ ನದಿಯ ನೀರನ್ನು ಫಿಲ್ಟರ್ ಮಾಡಿದ್ರೆ ಸಾಕು ಸಿಗುತ್ತೆ ರಾಶಿ ರಾಶಿ ಚಿನ್ನ! ಆ ನದಿ ಯಾವುದು?
ಅಂದಹಾಗೆ ವೈರಲ್ ಆಗಿರೋ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಬ್ಬಾವನ್ನು ಹಿಡಿದು ಅದಕ್ಕೆ ಚುಂಬಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಅದು ಆತನಿಗೆ ಮರುಚುಂಬಿಸಿದೆ. ಹೆಬ್ಬಾವು ಆತನಿಗೆ ಬರಿ ಕಿಸ್ ಕೊಟ್ಟಿಲ್ಲ, ಆ ವ್ಯಕ್ತಿಯ ಬಾಯನ್ನೇ ಅದು ಬಲವಾಗಿ ಕಚ್ಚಿಬಿಟ್ಟಿದೆ. ಕಚ್ಚಿದ ಹೊಡೆತಕ್ಕೆ ಹೆಬ್ಬಾವಿನ ಹಲ್ಲುಗಳ ಆತನ ಕೆನ್ನೆಯಲ್ಲೇ ಸಿಕ್ಕಿಕೊಂಡಿವೆ. ಈ ವೇಳೆ ಆತ ಹೆಬ್ಬಾವಿನಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ.
ಹೆಬ್ಬಾವು ಕಚ್ಚಿದ ಹೊಡೆತಕ್ಕೆ ಆತ ನೋವಿನಿಂದ ಹೆಣಗಾಡಿದ್ದಾನೆ. ಈ ವೈರಲ್ ವಿಡಿಯೋ ಸೋಷಿಯಲ್ ಮೀಡಿಯಾ ನೋಡುಗರ ಗಮನ ಸೆಳೆದಿದೆ. ಅನೇಕರು ಫನ್ನಿ ಫನ್ನಿಯಾಗಿ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಕೆಲವರು ʼಹಾವಿನೊಂದಿಗೆ ಸರಸವಾಡಲು ಹೋದವರಿಗೆ ತಕ್ಕ ಶಾಸ್ತಿʼ ಆಗಿದೆ ಅಂತಾ ಹೇಳಿದ್ರೆ, ಇನ್ನೂ ಕೆಲವರು ʼಹೆಬ್ಬಾವಿನ ಕಿಸ್ ಪಡೆದ ನೀನೇ ಧನ್ಯʼ ಅಂತಾ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! ಮಧ್ಯಾಹ್ನದ ಊಟದಲ್ಲಿ... ತಿಂಗಳಿಗೆ 2 ಬಾರಿ ಮಟನ್ ಮತ್ತು 4 ಬಾರಿ ಚಿಕನ್..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.