Viral Video: ಸಫಾರಿ ವೇಳೆ ಸಿಂಹವನ್ನು ಮುಟ್ಟಿದ ಪ್ರವಾಸಿಗ, ಆಮೇಲೆ ಏನಾಯ್ತು ನೋಡಿ!
Maasai Mara National Reserve: ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಲಕ್ಷಾಂತರ ಜನರು ಈ ವಿಡಿಯೋ ನೋಡಿದ್ದು, ಸಿಂಹವನ್ನು ಮುಟ್ಟಿದ ಭಾರತೀಯ ಪ್ರವಾಸಿಗ ವಿರುದ್ಧ ಕಿಡಿಕಾರಿದ್ದಾರೆ. ಈ ರೀತಿ ಭಾರತವಷ್ಟೇ ಅಲ್ಲ ಬೇರೆ ಯಾವುದೇ ದೇಶದಲ್ಲಿಯೂ ಮಾಡಬಾರದು. ಏನಾದರೂ ಅನಾಹುತವಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
Viral Video: ಸಫಾರಿ ವೇಳೆ ಕಾಡಿನ ರಾಜ ಸಿಂಹವನ್ನು ಪ್ರವಾಸಿಗನೊಬ್ಬ ಮುಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೀನ್ಯಾ ದೇಶದ ಮಸೈಮಾರಾದಲ್ಲಿ ಸಫಾರಿ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಓಪನ್ ಜೀಪ್‌ನ ಸಫಾರಿ ವೇಳೆಯೇ ಭಾರತೀಯ ಪ್ರವಾಸಿಗನೊಬ್ಬ ಸಿಂಹವನ್ನು ಸ್ಪರ್ಶಿಸಿದ್ದು, ಆತನ ಈ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮಸೈಮಾರಾಕ್ಕೆ ಭೇಟಿ ನೀಡಿದ್ದ ಭಾರತೀಯ ಪ್ರವಾಸಿಗನೊಬ್ಬ ಸಫಾರಿ ವೇಳೆ, ವಾಹನದ ಪಕ್ಕವೇ ಮಲಗಿದ್ದ ಸಿಂಹಕ್ಕೆ ಡಿಸ್ಟರ್ಬ್ ಮಾಡಿದ್ದಾನೆ. ಜೀಪ್‌ನ ತೆರೆದ ಕಿಟಕಿಯಿಂದ ಕೈ ಚಾಚಿ ಆತ ಸಿಂಹವನ್ನು ಸ್ಪರ್ಶಿಸಿದ್ದಾನೆ. ಎರಡು ಬಾರಿ ಆತನ ಈ ಕುಚೇಷ್ಟೆಗೆ ಸುಮ್ಮನಿದ್ದ ಸಿಂಹ ೩ನೇ ಬಾರಿ ಗುರ್... ಅಂತಾ ಘರ್ಜಿಸಿದೆ. ಸಿಂಹದ ಘರ್ಜನೆಗೆ ಭಾರತೀಯ ಪ್ರವಾಸಿಗ ಸೇರಿದಂತೆ ವಾಹನದಲ್ಲಿದ್ದ ಇತರ ಪ್ರವಾಸಿಗರು ಸಹ ಹೆದರಿ ಜೀಪ್‌ನೊಳಗೆ ಗಪ್ ಚುಪ್ ಆಗಿ ಕುಳಿತುಕೊಳ್ಳುತ್ತಾರೆ. ಈ ವೇಳೆ ಸಿಂಹವು ಶಾಂತವಾಗಿದ್ದರಿಂದ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.
Viral: ಮಾವುತನ ಪ್ರಾಣ ತೆಗೆದ ಮರಿ ಆನೆ, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಬೀಕರ ದೃಶ್ಯ
ಈ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮೀನಾಕ್ಷಿ ಶರಣ್ ಎಂಬುವರು, ಸಿಂಹವನ್ನು ಮುಟ್ಟಿದ ಭಾರತೀಯ ಪ್ರವಾಸಿಗನ ವರ್ತನೆಗೆ ಕಿಡಿಕಾರಿದ್ದಾರೆ. ಈ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಅವರು, ʼಭಾರತೀಯ ಪ್ರವಾಸಿಗರೆ, ಬೇರೆ ದೇಶದಲ್ಲಿರುವಾಗ ನೀವು ಭಾರತದ 144 ಕೋಟಿ ಜನರನ್ನು ಪ್ರತಿನಿಧಿಸುತ್ತೀರಿ ಎಂಬುದು ನೆನಪಿರಲಿ. ನಿಮ್ಮ ಅಸಭ್ಯತೆ, ಅನಾಗರಿಕ ನಡವಳಿಕೆ/ಚಟುವಟಿಕೆಯಿಂದ ಭಾರತಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬುದನ್ನು ಮರೆಯಬೇಡಿ!ʼ ಅಂತಾ ಖಾರವಾಗಿ ಹೇಳಿದ್ದಾರೆ.
ಭಗವದ್ಗೀತೆ ಉಲ್ಲೇಖಿಸಿ ಸಂಖ್ಯೆ 18 ರ ಮಹತ್ವ ವಿವರಿಸಿದ ಪ್ರಧಾನಿ ಮೋದಿ
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಲಕ್ಷಾಂತರ ಜನರು ಈ ವಿಡಿಯೋ ನೋಡಿದ್ದು, ಸಿಂಹವನ್ನು ಮುಟ್ಟಿದ ಭಾರತೀಯ ಪ್ರವಾಸಿಗ ವಿರುದ್ಧ ಕಿಡಿಕಾರಿದ್ದಾರೆ. ಈ ರೀತಿ ಭಾರತವಷ್ಟೇ ಅಲ್ಲ ಬೇರೆ ಯಾವುದೇ ದೇಶದಲ್ಲಿಯೂ ಮಾಡಬಾರದು. ಏನಾದರೂ ಅನಾಹುತವಾದರೆ ಯಾರು ಹೊಣೆ? ಈ ರೀತಿಯ ನಿಮ್ಮ ಹುಚ್ಚಾಟದಿಂದ ಭಾರತಕ್ಕೆ ಕೆಟ್ಟ ಹೆಸರು ಬರುತ್ತದೆ. ಇನ್ನುಂದೆಯಾದರೂ ಬುದ್ದಿ ಕಲಿಯಿರಿʼ ಅಂತಾ ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಕೀನ್ಯಾ ದೇಶದಲ್ಲಿರುವ ಈ ಮಸೈಮಾರ ವನ್ಯಜೀವಿ ಛಾಯಾಗ್ರಾಹಕರ ಸ್ವರ್ಗವೆಂದೇ ಖ್ಯಾತಿಯಾಗಿದೆ. ಪ್ರತಿವರ್ಷ ಭಾರತೀಯರು ಸೇರಿದಂತೆ ವಿವಿಧ ದೇಶಗಳ ಲಕ್ಷಾಂತರ ಪ್ರವಾಸಿಗಳು ಈ ಮಸೈಮಾರಕ್ಕೆ ಪ್ರವಾಸ ಹೋಗುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.