ನಾಯಿಯನ್ನು ಕಾರಿಗೆ ಕಟ್ಟಿ ಎಳೆದೊಯ್ದ ಚಾಲಕ..! ಭಯಾನಕ ವಿಡಿಯೋ ವೈರಲ್‌

Dog viral video : ಚಾಲಕನೊಬ್ಬ ಸತ್ತ ನಾಯಿಯನ್ನು ತನ್ನ ಕಾರಿಗೆ ಕಟ್ಟಿಗೆ ಎಳೆದೊಯ್ದ ಘಟನೆ ಗುಜರಾತ್‌ನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Jun 22, 2024, 04:21 PM IST
    • ಸತ್ತ ನಾಯಿಯನ್ನು ತನ್ನ ಕಾರಿಗೆ ಕಟ್ಟಿಗೆ ಎಳೆದೊಯ್ದ ಕ್ರೂರಿ
    • ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ
    • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ನೆಟ್ಟಿಗರಿಂದ ಒತ್ತಾಯ
ನಾಯಿಯನ್ನು ಕಾರಿಗೆ ಕಟ್ಟಿ ಎಳೆದೊಯ್ದ ಚಾಲಕ..! ಭಯಾನಕ ವಿಡಿಯೋ ವೈರಲ್‌ title=

Man tied dog to car : ಮನುಷ್ಯರು ಮಾನವೀಯತೆ ಮರೆಯುತ್ತಿದ್ದಾರೆ, ಕೊಲೆ, ಕ್ರೌರ್ಯದ ಹಾದಿ ಹಿಡಿಯುತ್ತಿದ್ದಾರೆ. ದೇಶದಲ್ಲಿ ಕೊಲೆ, ಅತ್ಯಾಚಾರಗಳು ಹೆಚ್ಚಾಗುತ್ತಲೇ ಇವೆ.. ಇದೀಗ ಅಹಮದಾಬಾದ್‌ನಲ್ಲಿ ನಡೆದ ಘಟನೆಯ ಆಘಾತಕಾರಿ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..

ವಿಡಿಯೋದಲ್ಲಿ ಚಾಲಕನೊಬ್ಬ ಸತ್ತ ನಾಯಿಯನ್ನು ತನ್ನ ಕಾರಿನ ಹಿಂದೆ ಕಟ್ಟಿ ಎಳೆದೊಯ್ದಿದ್ದಾನೆ. ಈ ವಿಡಿಯೋ ನೋಡಿದ್ರೆ ನೀವು ಬೆರಗಾಗುತ್ತೀರಿ. ಕೌಶಿಕ್ ಕಂಠೇಚಾ ಎಂಬ ವ್ಯಕ್ತಿ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾರು ಸಂಖ್ಯೆ GJ01 KC 4748 ಬಾವ್ಲಾದಿಂದ ರಾಜ್‌ಕೋಟ್ ಕಡೆಗೆ ಹೋಗುತ್ತಿದೆ. ಕಾರಿನ ಹಿಂಭಾಗದಲ್ಲಿ ಸತ್ತ ನಾಯಿಯನ್ನು ಕಟ್ಟಲಾಗಿದೆ. 

ಇದನ್ನೂ ಓದಿ:ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ 56ರ ವ್ಯಕ್ತಿಯ ಮೂಗು ಮುರಿಯವಂತೆ ಹೊಡೆದ ತಾಯಿ..! 

ಕೌಶಿಕ್ ಕಂಠೇಚಾ ಎನ್ನವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಸತ್ತ ನಾಯಿಯನ್ನು ಈ ರೀತಿ ಗಾಡಿಗೆ ಕಟ್ಟಿ ಸಾಗಿಸುವುದು ಎಷ್ಟು ಸರಿ..? ಅಂತ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಸಧ್ಯ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..

ಇನ್ನು ಈ ವಿಡಿಯೋವನ್ನು ಗಮನಿಸಿದ ಪ್ರಾಣಿಗಳಿಗಾಗಿ ಕೆಲಸ ಮಾಡುವ ಪೇಟಾ ಇಂಡಿಯಾ ಸಂಸ್ಥೆಯು ಕೌಶಿಕ್ ಕಂಠೇಚಾ ಅವರು, ದಯವಿಟ್ಟು ನಮ್ಮ ತುರ್ತು ಸಂಖ್ಯೆ 98201 22602 ಗೆ ಕರೆ ಮಾಡಿ ಮತ್ತು ಘಟನೆಯ ವಿವರಗಳನ್ನು ನಮಗೆ ನೀಡಿ ಎಂದು ಕೋರಿದ್ದಾರೆ.  

ಇದನ್ನೂ ಓದಿ:ವ್ಯಕ್ತಿಯ ಖಾಸಗಿ ಭಾಗಕ್ಕೆ ಕಚ್ಚಿದ ಹಾವು..! ಮುಂದೇನಾಯ್ತು.. ವಿಡಿಯೋ ನೋಡಿ..

ಈ ವಿಡಿಯೋ ತುಂಬಾ ಭಯಾನಕವಾಗಿದೆ. ಚಾಲಕನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಸತ್ತಿದ್ದರೂ ಮಾನವೀಯತೆ ಮರೆದು ಈ ರೀತಿ ಕಟ್ಟಿರುವುದು ನೋವಾಗುತ್ತದೆ ಎಂದು ನೆಟ್ಟಿಗರೊಬ್ಬರು ನೋವು ವ್ಯಕ್ತ ಪಡಿಸಿದ್ದಾರೆ. ಮತ್ತೊಬ್ಬರು ಈ ಹೇಯ ಕೃತ್ಯಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News