ನವದೆಹಲಿ: ಅನೇಕರು ಕಿವಿ ನೋವಿನಿಂದ ಬಳಲುತ್ತಿರುತ್ತಾರೆ. ಕಿವಿ ನೋವಿಗೆ ಕಾರಣವೇನು ಅನ್ನೋದು ತಲೆನೋವು ತಂದಿರುತ್ತದೆ. ಹಲ್ಲು ನೋವು, ಕಿವಿಯಲ್ಲಿನ ಸೋಂಕು ಮತ್ತು ಗಂಟಲಿನಲ್ಲಿ ಏನಾದ್ರೂ ಸೋಂಕಾಗಿದ್ರೆ ಕಿವಿಯಲ್ಲಿ ನೋವು ಕಂಡುಬರುತ್ತದೆ.


COMMERCIAL BREAK
SCROLL TO CONTINUE READING

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸಖತ್ ಸೌಂಡ್ ಮಾಡುತ್ತಿದೆ. ಈ ವಿಡಿಯೋ ನೋಡಿದ್ರೆ ನೀವೂ ಸಹ ಹೌಹಾರುವುದು ಗ್ಯಾರಂಟಿ. ಯಾಕಂದ್ರೆ ನೋವು ಅಂತಾ ಕ್ಲಿನಿಕ್‍ಗೆ ತೆರಳಿದ್ದ ಮಹಿಳೆಯ ಕಿವಿಯೊಳಗೆ ಜೇಡ ಪತ್ತೆಯಾಗಿ ವೈದ್ಯರಿಗೆ ಭಯವನ್ನುಂಟು ಮಾಡಿತ್ತು.  


ಇದನ್ನೂ ಓದಿ: Wedding Viral Video: ಮದುವೆ ಮನೆಯಲ್ಲಿ ಪಾತ್ರೆ ಹಿಡಿದು ಕುಣಿದಾಡಿದ ಅತಿಥಿಗಳು: ವಧು-ವರನ ಕಥೆ ಏನು ನೋಡಿ


ಹೌದು, ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದಳು. ಈ ವೇಳೆ ಆಕೆಗೆ ಚಿಕಿತ್ಸೆ ನೀಡಲು ಕಿವಿ ಪರಿಶೀಲಿಸಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಸಣ್ಣ ಬ್ಯಾಟರಿ ಹಾಕಿ ಕಿವಿ ಪರಿಶೀಲಿಸಿದ ವೈದ್ಯರಿಗೆ ಜೀವಂತವಾಗಿದ್ದ ಜೇಡವಿರುವುದು ಗೊತ್ತಾಗಿದೆ. ಕೂಡಲೇ Ear Drops ಹಾಕಿ ಅದನ್ನು ಹೊರತೆಗೆಯುವಲ್ಲಿ ಯಶಸ್ಸಿಯಾಗಿದ್ದಾರೆ.


 

 

 

 



 

 

 

 

 

 

 

 

 

 

 

A post shared by UNILAD (@unilad)


ಈ ವಿಡಿಯೋ ನೋಡಿದ್ರೆ ನಿಮಗೆ ಕಸಿವಿಸಿಯಾಗುತ್ತದೆ. ಆದರೆ ಕಿವಿ ನೋವಿನಿಂದ ಬಳಲುತ್ತಿದ್ದ ಮಹಿಳೆ ಜೇಡ ಹೊರಬಂದ ಮೇಲೆ ನಿರಾಳವಾಗಿದ್ದಾಳೆ. ಮಹಿಳೆಯ ಕಿವಿಯಿಂದ ಜೇಡ ಹೊರಬರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. Unilad ಇನ್‍ಸ್ಟಾಗ್ರಾಮ್‍ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ‘Imagine finding out this is what's causing your earache’ ಅಂತಾ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.


ಇದನ್ನೂ ಓದಿViral Video: 52 ವರ್ಷದ ಆಂಟಿಯನ್ನು ಮದುವೆಯಾದ 21 ರ ಯುವಕ! ಬಲು ರೋಚಕ ಈ ಲವ್‌ ಸ್ಟೋರಿ


ವಿಡಿಯೋ ನೋಡಿದ ಬಹುತೇಕರು ಅಸಹ್ಯಕರವಾಗಿದೆ ಅಂತಾ ಕಾಮೆಂಟ್ ಮಾಡಿದೆ. 50 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ನೂರಾರು ಜನರು ಶೇರ್ ಮಾಡಿದ್ದಾರೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.