Trending Video: ಪೆಟ್ರೋಲ್ ಬಾಂಬ್ ಜೊತೆ ಸ್ಟಂಟ್ ಮಾಡಲು ಹೋಗಿ ಬ್ಯಾಕ್ ಸುಟ್ಟಿಕೊಂಡ ಬಾಲಕ: ವಿಡಿಯೋ ನೋಡಿ

Petrol Bomb Viral Video: ಕೆಲ ಹುಡುಗರು ಶಾಲೆ ಬಿಟ್ಟು ಸ್ಟಂಟ್ ಮಾಡಿ ಫಜೀತಿಗೆ ಸಿಲುಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಬಾಲಕರು ಪೆಟ್ರೋಲ್ ಬಾಂಬ್ ನ್ನು ಒಬ್ಬರಿಗೊಬ್ಬರು ಎಸೆದುಕೊಂಡಿದ್ದಾರೆ. ಆಗ ಅದರಲ್ಲಿ ಒಬ್ಬರ ಬಾಲಕನ ಮೇಲೆ ಬೆಂಕಿ ಬಿದ್ದಿದ್ದು, ಕಿರುಚಾಡಿಕೊಂಡಿದ್ದಾನೆ. ಈ ಘಟನೆ ನಡೆದ ಬಳಿಕ ಶಾಲಾ ಮಂಡಳಿ ಆತನನ್ನು ಡಿಬಾರ್ ಮಾಡಿದ್ದಾರೆ.

Written by - Bhavishya Shetty | Last Updated : Dec 11, 2022, 12:41 PM IST
    • ಕೆಲವೊಂದು ಬುದ್ಧಿಹೀನ ಜನರು ತಮ್ಮ ಆಟಕ್ಕೆ ಪರಿಸರವನ್ನು ಹಾಳು ಮಾಡುತ್ತಾರೆ
    • ಇದೇ ರೀತಿಯ ಘಟನೆಯೊಂದು ಇದೀಗ ನಡೆದಿದೆ
    • ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ
Trending Video: ಪೆಟ್ರೋಲ್ ಬಾಂಬ್ ಜೊತೆ ಸ್ಟಂಟ್ ಮಾಡಲು ಹೋಗಿ ಬ್ಯಾಕ್ ಸುಟ್ಟಿಕೊಂಡ ಬಾಲಕ: ವಿಡಿಯೋ ನೋಡಿ title=
Petrol Bomb

Petrol Bomb Viral Video: ಕೆಲವೊಮ್ಮೆ ತಮಾಷೆ ಮಾಡಲು ಹೋಗಿ ಅದೇನೋ ಅಚಾತುರ್ಯಗಳು ನಡೆಯುವುದುಂಟು. ಬಹಳಷ್ಟು ಹಾನಿ, ನಷ್ಟವನ್ನು ಅನುಭವಿಸುವುದುಂಟು. ಇಂತಹ ವಿಚಾರಗಳ ಬಗ್ಗೆ ಪ್ರತೀ ದಿನ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ ಕೆಲವೊಂದು ಬುದ್ಧಿಹೀನ ಜನರು ತಮ್ಮ ಆಟಕ್ಕೆ ಪರಿಸರವನ್ನು ಹಾಳು ಮಾಡುತ್ತಾರೆ. ಇದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Shocking: ಊಟದಲ್ಲಿ ಕೂದಲು ಪತ್ತೆ; ಪತ್ನಿಯ ತಲೆಬೋಳಿಸಿ ಚಿತ್ರಹಿಂಸೆ ನೀಡಿದ ಸೈಕೋ ಪತಿ!

ಕೆಲ ಹುಡುಗರು ಶಾಲೆ ಬಿಟ್ಟು ಸ್ಟಂಟ್ ಮಾಡಿ ಫಜೀತಿಗೆ ಸಿಲುಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಬಾಲಕರು ಪೆಟ್ರೋಲ್ ಬಾಂಬ್ ನ್ನು ಒಬ್ಬರಿಗೊಬ್ಬರು ಎಸೆದುಕೊಂಡಿದ್ದಾರೆ. ಆಗ ಅದರಲ್ಲಿ ಒಬ್ಬರ ಬಾಲಕನ ಮೇಲೆ ಬೆಂಕಿ ಬಿದ್ದಿದ್ದು, ಕಿರುಚಾಡಿಕೊಂಡಿದ್ದಾನೆ. ಈ ಘಟನೆ ನಡೆದ ಬಳಿಕ ಶಾಲಾ ಮಂಡಳಿ ಆತನನ್ನು ಡಿಬಾರ್ ಮಾಡಿದ್ದಾರೆ.

ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ. ಇಲ್ಲಿನ ಶಾಲೆಯೊಂದರಲ್ಲಿ ಓದುತ್ತಿರುವ ಕೆಲ ಮಕ್ಕಳು ತರಗತಿ ಬಿಟ್ಟು ಕಾಡಿನಲ್ಲಿ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲಿ ಒಬ್ಬರಿಗೊಬ್ಬರು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯುತ್ತಿದ್ದು ಈ ಸಮಯದಲ್ಲಿ ಒಬ್ಬ ಹುಡುಗನಿಗೆ ಬೆಂಕಿ ತಗುಲಿದೆ. ಪರಿಣಾಮ ಗಂಭೀರ ಗಾಯಗಳಾಗಿವೆ.

ಒಬ್ಬ ಹುಡುಗನ ಕೈಯಿಂದ ಬಿದ್ದ ಪೆಟ್ರೋಲ್ ಬಾಂಬ್ ಮತ್ತೊಬ್ಬನ ಬಟ್ಟೆಗೆ ತಗುಲಿಕೊಂಡಿದೆ. ಮೊದಲಿಗೆ ಹೇಗೋ ವಿದ್ಯಾರ್ಥಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಅಷ್ಟರೊಳಗೆ ವಿದ್ಯಾರ್ಥಿಯ ಬೆನ್ನು ಸುಟ್ಟುಹೋಗಿದೆ. ಇದೆಲ್ಲ ನಡೆದಿರುವುದು ಶಾಲೆಯ ಸಮೀಪದ ಕಾಡಿನಲ್ಲಿ. ಅಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ವಲ್ಪ ದೂರದಲ್ಲಿ ನಿಂತುಕೊಂಡು ಪೆಟ್ರೋಲ್ ಬಾಂಬ್ ನ್ನು ಎಸೆಯುವುದು ಕಾಣಿಸುತ್ತದೆ.

ಇದನ್ನೂ ಓದಿ: Snake in Air India: ಏರ್ ಇಂಡಿಯಾ ವಿಮಾನದಲ್ಲಿ ಹಾವು ಪತ್ತೆ! ತನಿಖೆಗೆ ಆದೇಶ

ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡ ಶಾಲಾ ಮಂಡಳಿ ಇವರ ವಿರುದ್ಧ ಕ್ರಮ ಕೈಗೊಂಡಿದೆ. ಮಾಹಿತಿ ಪ್ರಕಾರ, ಈ ಸ್ಟಂಟ್ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಯಿಂದ ಡಿಬಾರ್ ಮಾಡಲಾಗಿದ್ದು, ಅವರ ಕುಟುಂಬದವರಿಗೂ ಮಾಹಿತಿಯನ್ನು ನೀಡಲಾಗಿದೆ. ಮತ್ತೊಂದೆಡೆ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News