Bull In SBI Bank Viral Video: ಇಂಟರ್ನೆಟ್ ಜಗತ್ತು ತುಂಬಾ ವಿಚಿತ್ರವಾಗಿದೆ, ನೀವು ಯಾವಾಗ ಈ ಜಗತ್ತಿನಲ್ಲಿ ಏನು ಕಾಣಲು ಸಿಗುತ್ತದೆ ಎಂಬುದು ಊಹೆಗೂ ಮೀರಿರುತ್ತದೆ. ಕೆಲವೊಮ್ಮೆ ಕೆಲವು ವೈರಲ್ ವೀಡಿಯೊಗಳು ಮತ್ತು ಫೋಟೋಗಳು ನಿಮ್ಮನ್ನು ಹೊಟ್ಟೆ ಹಿಡಿದು ನಗುವಂತೆ ಮಾಡಿದರೆ, ಕೆಲವೊಮ್ಮೆ, ಮುಖದಲ್ಲಿ ಆತಂಕದ ಭಾವವನ್ನು ಉಂಟು ಮಾಡುತ್ತವೆ. ಅಂತಹುದೇ ವಿಡಿಯೋವೊಂದು ಸಾಮಾಜಿಕ ಪ್ಲಾಟ್ ಫಾರ್ಮ್ 'ಎಕ್ಸ್'ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ಇದನ್ನು ನೋಡಿ ನೀವೂ ಬೆಚ್ಚಿ ಬೀಳುವಿರಿ. ವಾಸ್ತವದಲ್ಲಿ, ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಬ್ಯಾಂಕಿನೊಳಗೆ ಗೂಳಿಯೊಂದು ಪ್ರವೇಶಿಸಿದ್ದನ್ನು ನೀವು ನೋಡಬಹುದು, ಇದನ್ನು ನೋಡಿ ಅಲ್ಲಿದ್ದ ಜನರು ಭಾರಿ ಆತಂಕಕ್ಕೆ ಒಳಗಾಗಿದ್ದಾರೆ. (Viral News In Kannada)


COMMERCIAL BREAK
SCROLL TO CONTINUE READING

ವೈರಲ್ ಆಗುತ್ತಿರುವ ಈ ವಿಡಿಯೋ ಉತ್ತರ ಪ್ರದೇಶದ ಉನ್ನಾವೊದಿಂದ ಹೊರಹೊಮ್ಮಿದೆ ಎನ್ನಲಾಗುತ್ತಿದೆ. ಹಾಡು ಹಗಲೇ ಎಸ್‌ಬಿಐ ಶಾಖೆಗೆ ಗೂಳಿಯೊಂದು ನುಗ್ಗಿದ್ದು, ಬ್ಯಾಂಕ್‌ನ ಒಳಗಡೆ ಇದ್ದ ಜನರಲ್ಲಿ ಗೊಂದಲದ ವಾತಾವರಣ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಜನರು ತಮ್ಮನ್ನು ಉಳಿಸಿಕೊಳ್ಳಲು ಅಲ್ಲಿ ಇಲ್ಲಿ ಓಡಲಾರಂಭಿಸಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿದೆ, ಇದನ್ನು ನೋಡಿ ಜನರು ಆಶ್ಚರ್ಯ ಪಡುತ್ತಿದ್ದಾರೆ.


ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಗೂಳಿಯು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬ್ಯಾಂಕ್‌ನ ಕ್ಯಾಶ್ ಕೌಂಟರ್‌ಗೆ ಪ್ರವೇಶಿಸಿದೆ ಎಂದು ಹೇಳಲಾಗುತ್ತಿದೆ. ಗೂಳಿ ಬ್ಯಾಂಕ್ ಪ್ರವೇಶಿಸಿದಾಗ ಬ್ಯಾಂಕ್ ಉದ್ಯೋಗಿಗಳಲ್ಲದೆ, ಗ್ರಾಹಕರು ಕೂಡ ಶಾಖೆಯಲ್ಲಿದ್ದರು, ಅವರ ಮುಖದಲ್ಲಿ ಭಯ ಸ್ಪಷ್ಟವಾಗಿ ಗೋಚರಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು.


ಇದನ್ನೂ ಓದಿ -Viral Video: 'ನನಗೆ ಒಂದು ಮುತ್ತು ಬೇಕು' ಎಂದು ಹುಡುಗ ಹುಡುಗಿಗೆ ಕೇಳಿದ್ದೆ ತಡ, ನೆಟ್ಟಿಗರ ರಿಯಾಕ್ಷನ್ ಹೇಗಿದೆ ನೋಡಿ!


ಅಷ್ಟರಲ್ಲಿ ಸೆಕ್ಯೂರಿಟಿ ಗಾರ್ಡ್ ಮತ್ತು ಇತರೆ ಜನರು ಗೂಳಿಯನ್ನು ಬ್ಯಾಂಕಿನೊಳಗಿಂದ ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಸಾಕಷ್ಟು ಹರಸಾಹಸದ ಬಳಿಕ ಗೂಳಿಯನ್ನು ಬ್ಯಾಂಕ್ ಹೊರಹಾಕುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಗೂಳಿ ಹೊರ ಹೋದ ನಂತರವೇ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.


ಇದನ್ನೂ ಓದಿ -Shocking Video: ಯುವಕ 'ಅಪ್ಪನಿಗೆ ಹುಟ್ಟಿದ್ರೆ ಗುಂಡು ಹೊಡೆ' ಅಂದಿದ್ದೆ ತಡ, ಈ ದೊಡಪ್ಪ ಮಾಡಿದ್ದೇನು ನೀವೇ ನೋಡಿ!


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ