ನವದೆಹಲಿ: ಪ್ರತಿ ದಿನ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೆಲವು ವೀಡಿಯೋಗಳು ನಿಮ್ಮನ್ನು ತುಂಬಾ ನಗುವಂತೆ ಮಾಡಿದರೆ ಇನ್ನು ಕೆಲವು ನಿಮ್ಮನ್ನು ಶಾಕ್ ನೀಡುತ್ತವೆ. ಅಂತಹುದೇ ವಿಡಿಯೋವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬ ವಯಸ್ಸಾದ ದೊಡಪ್ಪನಿಗೆ ಗುಂಡು ಹಾರಿಸುವಂತೆ ಸೆಡ್ಡು ಹೊಡೆದಿದ್ದಾನೆ. ನಂತರ ಆತನ ಈ ಕೆಣಕುವಿಕೆ ಆತನ ಪ್ರಾಣಕ್ಕೆ ಕುತ್ತು ತಂದಿದೆ, ವಯಸ್ಸಾದ ದೊಡಪ್ಪ ವ್ಯಕ್ತಿ ಹಾಕಿದ ಸವಾಲನ್ನು ಸ್ವೀಕರಿಸಿ ಗುಂಡು ಹಾರಿಸಿಯೇಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. (Viral News In Kannada)
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೇಗವಾಗಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವೃದ್ಧರೊಬ್ಬರು ನಿಂತಿರುವುದು ನೀವು ನೋಡಬಹುದು. ಅವರ ಕೈಯಲ್ಲಿ ಕೋವಿ ಇರುವುದನ್ನು ಕೂಡ ನೀವು ನೋಡಬಹುದು. ಈ ಮುದಿ ವ್ಯಕ್ತಿಯ ಮುಂದೆ ಒಬ್ಬ ಯುವಕ ನಿಂತಿದ್ದಾನೆ. ಆತ ಬಹುಶಃ ಇದರ ವೀಡಿಯೊವನ್ನು ಕೂಡ ಮಾಡುತಿದ್ದಾನೆ. ಮತ್ತು ಆ ಯುವಕ ಆ ಮುದುಕನನ್ನು ಪದೇ ಪದೇ ಗುಂಡು ಹಾರಿಸುವಂತೆ ಕೆರಳಿಸುತ್ತಿದ್ದಾನೆ. ವೀಡಿಯೊದ ಭಾಷೆಯಿಂದ ವೀಡಿಯೊ ಹರಿಯಾಣ ಅಥವಾ ರಾಜಸ್ಥಾನದ ವಿಡಿಯೋ ಇದಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಯುವಕ ಮುದುಕನಿಗೆ, ‘ನೀನು ನಿನ್ನ ತಂದೆಗೆ ಹುಟ್ಟಿದ್ದರೇ ಗುಂಡು ಹಾರಿಸು’ ಎಂದು ಕೆಣಕುತ್ತಾನೆ.
ಯುವಕನು ಮುದಿ ವ್ಯಕ್ತಿಗೆ ಇದನ್ನು ಒಂದಲ್ಲ ಅನೇಕ ಬಾರಿ ಹೇಳುತ್ತಾನೆ. ಕೊನೆಗೆ ಪಿತ್ತ ನೆತ್ತಿಗೇರಿದ ಮುದಿ ವ್ಯಕ್ತಿ ಕೋವಿಯನ್ನು ಎತ್ತಿ ನೇರವಾಗಿ ಯುವಕನತ್ತ ಗುಂಡು ಹಾರಿಸುತ್ತಾನೆ. ಗುಂಡು ತಗುಲಿದ ಯುವಕ ಒದ್ದಾಡಲು ಪ್ರಾರಂಭಿಸುತ್ತಾನೆ. ಫೋನ್ ಕೂಡ ಅವನ ಕೈಯಿಂದ ಬೀಳುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಜನರು ವ್ಯಾಪಕವಾಗಿ ಕಾಮೆಂಟ್ ಮಾಡುತ್ತಿದ್ದಾರೆ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, @gharkekalesh ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ ಸುಮಾರು 3 ಲಕ್ಷ ಬಾರಿ ವೀಕ್ಷಿಸಲಾಗಿದೆ. ವೀಡಿಯೊಗೆ ಬಳಕೆದಾರರಿಂದ ವಿವಿಧ ರೀತಿಯ ಕಾಮೆಂಟ್‌ಗಳು ಸಹ ಬರುತ್ತಿವೆ. ಕಾಮೆಂಟ್ ಮಾಡುವಾಗ, ಬರೆದುಕೊಂಡ ಓರ್ವ ವ್ಯಕ್ತಿ, 'ತಂದೆಗೆ ಹುಟ್ಟಿದ ಮಗನಾಗಿದ್ದಾರೆ ಎನ್ನುತ್ತಾನೆ' ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರರು ' ಯಾರನ್ನು ಈ ರೀತಿ ಪ್ರಚೋದಿಸಬೇಡಿ' ಎಂದಿದ್ದಾರೆ. ಮೂರನೇ ಬಳಕೆದಾರ 'ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಗೊಂದಲ ನನಗಿದೆ' ಎಂದು ಬರೆದುಕೊಂಡಿದ್ದಾರೆ. ಇದೇ ರೀತಿ ಮತ್ತೊಬ್ಬ ಬಳಕೆದಾರ ರೈಫಲ್‌ನ ಮಾದರಿಯನ್ನು ಹೇಳಿ 'ಇದು ದುನಾಲಿ ಅಲ್ಲ, ಇದು 12 ಬೋರ್ ಆಗಿರಬಹುದು ಅಥವಾ ದೇಸಿ 12 ಬೋರ್' ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ-
Tau ne Sach me Dunali Chala dis😭
pic.twitter.com/xvH016zXYb— Ghar Ke Kalesh (@gharkekalesh) January 6, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ