ನವದೆಹಲಿ: ನಡುರಸ್ತೆಯಲ್ಲಿಯೇ ಕಾಲೇಜು ಯುವತಿಯರಿಬ್ಬರು ಪರಸ್ಪರ ಹೊಡೆದಾಡಿಕೊಂಡಿರು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಜಾರ್ಖಂಡ್‍ನ ಧನ್‌ಬಾದ್‌ನಲ್ಲಿ ಈ ಘಟನೆ ನಡೆದಿದೆ. ಯುವತಿಯರು ತಮ್ಮ ಜಡೆಗಳನ್ನು ಹಿಡಿದುಕೊಂಡು ಎಳೆದಾಡಿ ಹೊಡೆದಾಡಿಕೊಂಡಿದ್ದಾರೆ. ಹುಡುಗಿಯರು ಹೀಗೆ ನಡುರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಂಡರೂ ಯಾರೂ ಕೂಡ ನೆರವಿಗೆ ಬಂದಿಲ್ಲ.


ಇದನ್ನೂ ಓದಿ: Viral News: ಆರತಕ್ಷತೆ ವೇಳೆ ಮಾವನಿಂದ 3 ಕಂಡೀಷನ್, ‘ನಿನ್ನ ಮಗಳೇ ಬೇಡ’ವೆಂದು ಎಸ್ಕೇಪ್ ಆದ ವರ!


ಯಾವುದೋ ಕಾರಣಕ್ಕೆ ಕಾಲೇಜು ಯುವತಿಯರ ನಡುವೆ ಮನಸ್ತಾಪ ಉಂಟಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಡಿಕೊಂಡಿದ್ದಾರೆ. ಯುವತಿಯರು ಜಡೆ ಹಿಡಿದುಕೊಂಡು ಹೊಡೆದಾಡಿಕೊಳ್ಳುತ್ತಿರುವಾಗ ಕಾಲೇಜು ಹುಡುಗರು ಕೇಕೆ, ಸಿಳ್ಳೆ ಹಾಕಿದ್ದಾರೆ.


ಯುವತಿಯರ ಜಗಳವಾಡುತ್ತಿದ್ದ ವೇಳೆ ಕಾಲೇಜಿನ ಹುಡುಗ-ಹುಡುಗಿಯರು ನಿಂತು ನೋಡುತ್ತಿದ್ದರು. ಆದರೆ ಯಾರೂ ಜಗಳ ಬಿಡಿಸಲು ಪ್ರಯತ್ನಿಸಿಲ್ಲ. ಸಾಲದ್ದಕ್ಕೆ ಯುವತಿಯರು ಮತ್ತಷ್ಟು ಜಗಳವಾಡಲಿ ಎಂದು ಕೇಕೆ, ಸಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ.


ಇದನ್ನೂ ಓದಿ: ನಡುರಸ್ತೆಯಲ್ಲಿ ಕಂಬದಂತೆ ನೆಟ್ಟಗೆ ನಿಂತ ನಾಗರಹಾವು..! ವಿಸ್ಮಯಕಾರಿ ವಿಡಿಯೋ ವೈರಲ್‌


Gharkekaleshh ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇಗೀದ ಸಖತ್ ವೈರಲ್ ಆಗುತ್ತಿದೆ. ಸಾವಿರಾರು ಜನರು ಈ ವಿಡಿಯೋ ವೀಕ್ಷಿಸಿದ್ದು, ಕಾಲೇಜಿನ ಮುಂದೆಯೇ ಯುವತಿಯರು ಈ ರೀತಿ ಜಗಳವಾಡಿರುವುದು ತಪ್ಪು ಅಂತಾ ಕಾಮೆಂಟ್ ಮಾಡಿದ್ದಾರೆ.


ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.