Viral Video: ತಮ್ಮ ಮದುವೆಗೆ ಸಂಬಂಧಿಕರಿಗಾಗಿ ಇಡೀ ವಿಮಾನವನ್ನೇ ಬುಕ್ ಮಾಡಿದ ನವದಂಪತಿ!
Wedding Video Viral: ತಮ್ಮ ಮದುವೆಗೆ ವಧು-ವರ ಸೇರಿಕೊಂಡು ಪ್ಲಾನ್ ಮಾಡಿ ತಮ್ಮ ಸಂಬಂಧಿಕರಿಗೆ ಇಡೀ ವಿಮಾನವನ್ನೇ ಬುಕ್ ಮಾಡಿದ್ದಾರೆ.
ನವದೆಹಲಿ: ಭಾರತದಲ್ಲಿ ಅದ್ದೂರಿ ಮದುವೆಗಳಿಗೆ ಕಡಿಮೆ ಇಲ್ಲ. ದೇಶದಲ್ಲಿ ಪ್ರತಿವರ್ಷ ನಡೆಯುವ ಮದುವೆಗಳಿಂದ ಸಾವಿರಾರು ಕೋಟಿ ರೂ. ವ್ಯವಹಾರವಾಗುತ್ತದೆ. ಹೀಗಾಗಿ ದೇಶದಲ್ಲಿ ಸರಳ ಮದುವೆಗಳಿಗಿಂತಲೂ ದುಬಾರಿ ವೆಚ್ಚದ ಮದುವೆಗಳೇ ಹೆಚ್ಚು ಸದ್ದು ಮಾಡುತ್ತವೆ.
ಬಸ್ಸು, ಕಾರು, ರೈಲುಗಳ ಮೂಲಕ ಸಂಬಂಧಿಕರು ಒಟ್ಟಾಗಿ ಮದುವೆಗೆ ಹೋಗುವುದನ್ನು ನೀವು ನೋಡಿದ್ದೀರಿ. ಆದರೆ ಇಲ್ಲೊಂದು ಕುಟುಂಬ ಇಡೀ ವಿಮಾನವನ್ನೇ ಬುಕ್ ಮಾಡಿ ಮದುವೆಗೆ ಹೋಗಿದೆ. ಕುಟುಂಬಸ್ಥರೆಲ್ಲಾ ಸೇರಿಕೊಂಡು ಮದುವೆಗೆ ತೆರಳಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ: Shepherd Viral Video: ಕುರಿ ಜೊತೆ ಕುರಿಗಾಹಿಯ ಸಖತ್ ಡ್ಯಾನ್ಸ್: ವಿಡಿಯೋ ನೋಡಿದ್ರೆ ದಿಲ್ ಖುಷ್ ಆಗೋದು ಗ್ಯಾರಂಟಿ
ಮದುವೆ ಅಂದ್ರೆ ಅಲ್ಲಿ ಸಂಭ್ರಮ-ಸಡಗರಕ್ಕೆ ಕೊರತೆಯಿರುವುದಿಲ್ಲ. ಮದುವೆಗೆ ಹೋಗುವ ಸಂಭ್ರಮವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಕುಟುಂಬ ಸಮೇತ ಸಂತೋಷದಿಂದ ಮದುವೆಗೆ ಹೋಗುವುದು ಪ್ರತಿಯೊಬ್ಬರ ನೆನಪಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಅದೇ ರೀತಿ ಈ ಮದುವೆ ವಿಡಿಯೋ ವಿಶೇಷ ರೀತಿಯಲ್ಲಿ ಜನರ ಗಮನ ಸೆಳೆದಿದೆ.
ಇಲ್ಲಿ ತಮ್ಮ ಮದುವೆಗೆ ವಧು-ವರ ಸೇರಿಕೊಂಡು ಪ್ಲಾನ್ ಮಾಡಿ ತಮ್ಮ ಸಂಬಂಧಿಕರಿಗೆ ಇಡೀ ವಿಮಾನವನ್ನೇ ಬುಕ್ ಮಾಡಿದ್ದಾರೆ. ಶ್ರೇಯಾ ಶಾ ಎಂಬ ಇನ್ಸ್ಟಾಗ್ರಾಂ ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಿಮಾನದಲ್ಲಿ ಕುಟುಂಬಸ್ಥರು ಮದುವೆಗೆ ಹೋಗಿರುವುದನ್ನು ಕಾಣಬಹುದಾಗಿದೆ. ಶ್ರೇಯಾ ಶಾ ಸಹೋದರಿಯ ಮದುವೆಗೆ ಅವರ ಎಲ್ಲಾ ಕುಟುಂಬಸ್ಥರು ವಿಮಾನದಲ್ಲಿಯೇ ಅತ್ಯಂತ ಸಂಭ್ರಮ-ಸಡಗರದಿಂದ ತೆರಳಿದ್ದಾರೆ. ;ನನ್ನ ಸಹೋದರಿಯ ಮದುವೆಗೆ ತೆರಳಲು ವಿಶೇಷ ವಿಮಾನವನ್ನು ನಾವು ಬುಕ್ ಮಾಡಿದ್ದೇವೆ. ನಾವೆಲ್ಲರೂ ಸಂತೋಷದಿಂದ ಕುಟುಂಬ ಸಮೇತವಾಗಿ ಮದುವೆಗೆ ತೆರಳುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Video Viral: ಪೊಲೀಸ್ ಠಾಣೆಯೊಂದರಲ್ಲಿ ಕಳ್ಳನೊಬ್ಬನ ಪ್ರಾಮಾಣಿಕ ತಪ್ಪೊಪ್ಪಿಗೆ ಹೇಗಿದೆ ಗೊತ್ತಾ?
ವೈರಲ್ ಆಗಿರುವ ವಿಡಿಯೋದಲ್ಲಿ ವಿಮಾನದಲ್ಲಿ ವಧು-ವರರ ಸಂಬಂಧಿಕರು ಸಂತೋಷದಿಂದ ನಗುತ್ತಿರುವುದನ್ನು ಕಾಣಬಹುದು. ಅವರು ಕ್ಯಾಮೆರಾದತ್ತ ಕೈ ಬೀಸಿ ನೀವೂ ಸಹ ನಮ್ಮ ಸಹೋದರಿಯ ಮದುವೆಗೆ ಬನ್ನಿ ಎಂದು ಕರೆದಿದ್ದಾರೆ. ಇದೇ ವೇಳೆ ಅತ್ಯಂತ ಉತ್ಸಾಹದಲ್ಲಿ ಕಂಡು ಬಂದ ವಧು-ವರರು ಪರಸ್ಪರ ಪಕ್ಕದಲ್ಲಿ ಕುಳಿತು ನಗುತ್ತಿರುವುದನ್ನು ನೀವು ನೋಡಬಹುದು. ಸದ್ಯ ವೈರಲ್ ಆಗಿರುವ ಈ ವಿಡಿಯೋವನ್ನು ಸುಮಾರು 1 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ಮದುವೆಗೆ ಶುಭ ಹಾರೈಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.