Shepherd Viral Video: ಕುರಿ ಜೊತೆ ಕುರಿಗಾಹಿಯ ಸಖತ್ ಡ್ಯಾನ್ಸ್: ವಿಡಿಯೋ ನೋಡಿದ್ರೆ ದಿಲ್ ಖುಷ್ ಆಗೋದು ಗ್ಯಾರಂಟಿ

Shepherd Dancing To A Bollywood Song:  ಇಂಟರ್ನೆಟ್ ಈಗ ಪ್ರತಿಯೊಂದು ವರ್ಗದ ಜನರನ್ನು ಪರಸ್ಪರ ಸಂಪರ್ಕಿಸುವ ಒಂದು ಪ್ರಮುಖ ಸಾಧನವಾಗಿ ಮಾರ್ಪಾಡಾಗಿದೆ. ಏನೇ ವಿಡಿಯೋಗಳನ್ನು ಅಪ್ಲೋಡ್ ಮಾಡಿದರೂ ಸಹ ಕೆಲವೇ ನಿಮಿಷಗಳಲ್ಲಿ ಅದು ಸಖತ್ ವೈರಲ್ ಆಗುತ್ತದೆ. ಅದು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಪಡೆಯುತ್ತದೆ.

Written by - Bhavishya Shetty | Last Updated : Dec 5, 2022, 10:43 AM IST
    • ಅನೇಕ ಪ್ರತಿಭೆಗಳ ಅನಾವರಣಕ್ಕೆ ಪ್ರಮುಖ ವೇದಿಕೆಯಾಗಿ ಮಾರ್ಪಾಡಾಗಿರೋದು ಸೋಶಿಯಲ್ ಮೀಡಿಯಾ
    • ಬಾಲಿವುಡ್ ಹಾಡಿಗೆ ಕುಣಿಯುವ ಕುರಿಗಾಹಿ ತನ್ನ ಡ್ಯಾನ್ಸ್ ವಿಡಿಯೋ ಸಖತ್ ವೈರಲ್
    • ಈ ವೀಡಿಯೊವನ್ನು ಇನ್ ಸ್ಟಾಗ್ರಾಂ ಹ್ಯಾಂಡಲ್ ‘Oosm.dance’ ಪೋಸ್ಟ್ ಮಾಡಿದೆ.
Shepherd Viral Video: ಕುರಿ ಜೊತೆ ಕುರಿಗಾಹಿಯ ಸಖತ್ ಡ್ಯಾನ್ಸ್: ವಿಡಿಯೋ ನೋಡಿದ್ರೆ ದಿಲ್ ಖುಷ್ ಆಗೋದು ಗ್ಯಾರಂಟಿ title=
Shepherd Dance Video

Shepherd Dancing To A Bollywood Song:  ಇತ್ತೀಚಿನ ದಿನಗಳಲ್ಲಿ ಅನೇಕ ಪ್ರತಿಭೆಗಳ ಅನಾವರಣಕ್ಕೆ ಪ್ರಮುಖ ವೇದಿಕೆಯಾಗಿ ಮಾರ್ಪಾಡಾಗಿರೋದು ಸೋಶಿಯಲ್ ಮೀಡಿಯಾ. ದಿನ ಬೆಳಗಾದರೆ ಒಂದಿಲ್ಲೊಂದು ವಿಭಿನ್ನ ವಿಡಿಯೋಗಳನ್ನು ನಾವು ಕಾಣುತ್ತೇವೆ. ಹೀಗಿರುವಾಗ ಇದೀಗ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಖತ್ ಟ್ರೆಂಡಿಂಗ್ ಆಗಿದೆ.

ಇಂಟರ್ನೆಟ್ ಈಗ ಪ್ರತಿಯೊಂದು ವರ್ಗದ ಜನರನ್ನು ಪರಸ್ಪರ ಸಂಪರ್ಕಿಸುವ ಒಂದು ಪ್ರಮುಖ ಸಾಧನವಾಗಿ ಮಾರ್ಪಾಡಾಗಿದೆ. ಏನೇ ವಿಡಿಯೋಗಳನ್ನು ಅಪ್ಲೋಡ್ ಮಾಡಿದರೂ ಸಹ ಕೆಲವೇ ನಿಮಿಷಗಳಲ್ಲಿ ಅದು ಸಖತ್ ವೈರಲ್ ಆಗುತ್ತದೆ. ಅದು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಪಡೆಯುತ್ತದೆ.

ಇದನ್ನೂ ಓದಿ: Post Office: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 50 ರೂ. ಠೇವಣಿ ಮಾಡಿ 35 ಲಕ್ಷ ಪಡೆಯಿರಿ!

ನಾವು ಮಾಡುವ ವೀಡಿಯೊಗಳು ಇತರರಿಗಿಂತ ಭಿನ್ನವಾಗಿರಬೇಕು, ಅದನ್ನು ಜನರು ಇಷ್ಟಪಡಬೇಕು ಎಂಬುದು ಎಲ್ಲಾ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಗಳ ಆಸೆ. ಇದೀಗ ಹೊಸ ಕಾನ್ಸೆಪ್ಟ್ ನಿಂದ ಮಾಡಿರುವ ವಿಡಿಯೋ ಕೂಡ ಸಾಕಷ್ಟು ಜನರನ್ನು ಸೆಳೆಯುತ್ತಿದೆ. ಈ ಬಾರಿ ಬಾಲಿವುಡ್ ಹಾಡಿಗೆ ಕುಣಿಯುವ ಕುರಿಗಾಹಿ ತನ್ನ ಡ್ಯಾನ್ಸ್ ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಈ ವೀಡಿಯೊವನ್ನು ಇನ್ ಸ್ಟಾಗ್ರಾಂ ಹ್ಯಾಂಡಲ್ ‘Oosm.dance’ ಪೋಸ್ಟ್ ಮಾಡಿದೆ.

ಡ್ಯಾನ್ಸ್ ವಿಡಿಯೋದಲ್ಲಿ ಕುರ್ತಾ ಧರಿಸಿದ ವ್ಯಕ್ತಿಯೊಬ್ಬ ತನ್ನ ಹಿಂದೆ ಹತ್ತಾರು ಕುರಿಗಳೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಜೊತೆಗೆ ಇಬ್ಬರು ನೃತ್ಯ ಮಾಡುತ್ತಾ ಸಂಪೂರ್ಣವಾಗಿ ಎಂಜಾಯ್ ಮಾಡುತ್ತಿದ್ದಾರೆ. ಇನ್ನೊಬ್ಬರು ಕತ್ತೆಯ ಮೇಲೆ ಸವಾರಿ ಮಾಡುತ್ತಿರುವುದು ಕಾಣಿಸುತ್ತದೆ.

ಇವರು ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಸಂಜಯ್ ದತ್ ಅಭಿನಯದ 'ಹಮ್ ಕಿಸಿ ಸೆ ಕಾಮ್ ನಹಿ' ಚಿತ್ರದ 'ಪೀಚೆ ಬಾರಾತಿ ಆಗೇ ಬ್ಯಾಂಡ್-ಬಾಜಾ, ಆಯೆ ದುಲ್ಹೆ ರಾಜಾ' ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಮರುಭೂಮಿ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ಇದರಲ್ಲಿ ಅನೇಕ ಕುರಿಗಳು ಮತ್ತು ಎರಡು ಸಣ್ಣ ಹುಡುಗರು ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಒಬ್ಬ ಕುರಿಗಾಹಿಯೊಂದಿಗೆ ಹೆಜ್ಜೆಗಳನ್ನು ಹಾಕಲು ಪ್ರಯತ್ನಿಸಿದರೆ, ಇನ್ನೊಬ್ಬ ಕತ್ತೆಯ ಮೇಲೆ ಕೊಳಲು ನುಡಿಸುವುದನ್ನು ಕಾಣಬಹುದು.

ವೀಡಿಯೊವನ್ನು ಇಲ್ಲಿ ವೀಕ್ಷಿಸಿ:

 
 
 
 

 
 
 
 
 
 
 
 
 
 
 

A post shared by Oosm Dance (@oosm.dance)

 

 

ಇದನ್ನೂ ಓದಿ: Viral Video: ಸೊಲ್ಲಾಪುರದಲ್ಲಿ ಒಬ್ಬ ವ್ಯಕ್ತಿಯನ್ನೇ ಮದುವೆಯಾದ ಸಹೋದರಿಯರು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ

ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ನೂರಾರು ಲೈಕ್‌ಗಳನ್ನು ಪಡೆದಿದ್ದು, ಇದನ್ನು ಸುಮಾರು 10,000 ಮಂದಿ ವೀಕ್ಷಿಸಿದ್ದಾರೆ. ಜನಪ್ರಿಯ ವೀಡಿಯೊವನ್ನು ಹಂಚಿಕೊಂಡ ತಕ್ಷಣ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, 'ನಿಜವಾಗಿಯೂ ಈ ವೀಡಿಯೊ ಅದ್ಭುತವಾಗಿದೆ. ನಾನು ಸುಲಭವಾಗಿ ಯಾರ ವೀಡಿಯೊವನ್ನು ಇಷ್ಟಪಡುವುದಿಲ್ಲ. ಆದರೆ ನಾನು ನಿಮ್ಮ ವೀಡಿಯೊವನ್ನು ಇಷ್ಟಪಟ್ಟಿದ್ದೇನೆ. ನಿಮ್ಮ ಡ್ಯಾನ್ಸ್ ಮೂವ್ಸ್ ತುಂಬಾ ಚೆನ್ನಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರ, “ತುಂಬಾ ಒಳ್ಳೆಯ ವೀಡಿಯೊ” ಎಂದು ಹೇಳಿದ್ದಾರೆ. ಇನ್ನು ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ವೇದಿಕೆಯ ಕೊರತೆ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿಯೇ ಅನೇಕರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿ ಮೆಚ್ಚುಗೆ ಗಳಿಸುತ್ತಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News