Viral Video: ಬೇಟೆಯಾಡಲು ನೀರಿನಿಂದ ಹೊರಬಂದ ಮೊಸಳೆ ಮುಂದೇನಾಯ್ತು...
Crocodile Viral Video: ಎಲ್ಲೆಡೆ ಮಳೆಗಾಲ ಆರಂಭವಾಗಿದೆ. ಕೆರೆ-ಕಟ್ಟೆಗಳೆಲ್ಲಾ ತುಂಬಿ ಹರಿಯುತ್ತಿವೆ. ಇಂತಹ ಸಂದರ್ಭದಲ್ಲಿ ಹಲವು ಜಲಚರಗಳು ನದಿಯಿಂದ ಹೊರಬರುವುದನ್ನು ಸಾಮಾನ್ಯವಾಗಿ ನೋಡಿಯೇ ಇರುತ್ತೇವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮೊಸಳೆಯ ವಿಡಿಯೋವೊಂದು ವೈರಲ್ ಆಗಿದೆ. ಬೇಟೆ ಹುಡುಕುತ್ತಾ ನೀರಿನಿಂದ ಏಕಾಏಕಿ ಹೊರಬಂದ ಮೊಸಳೆ ಮುಂದೆ ಏನ್ ಮಾಡ್ತು ಗೊತ್ತಾ...
ವೈರಲ್ ವಿಡಿಯೋ: ಸಾಮಾಜಿಕ ಮಾಧ್ಯಮದಲ್ಲಿ ವನ್ಯಜೀವಿಗಳಿಗೆ ಸಂಬಂಧಿಸಿದ ವೀಡಿಯೊಗಳು ಹೆಚ್ಚಾಗಿ ಪ್ರಾಬಲ್ಯ ಹೊಂದಿವೆ. ಅವುಗಳಲ್ಲಿ ಕೆಲವು ತುಂಬಾ ತಮಾಷೆಯಾಗಿರುತ್ತವೆ. ಇನ್ನೂ ಕೆಲವು ವಿಡಿಯೋಗಳನ್ನು ಕಂಡಾಗ ರೋಮಗಳು ಎದ್ದು ನಿಲ್ಲುತ್ತವೆ. ಇದೀಗ ಅಂತಹ ಒಂದು ವಿಡಿಯೋ ಎಲ್ಲೆಡೆವೈರಲ್ ಆಗುತ್ತಿದೆ.
ಎಲ್ಲೆಡೆ ಮಳೆಗಾಲ ಆರಂಭವಾಗಿದೆ. ಕೆರೆ-ಕಟ್ಟೆಗಳೆಲ್ಲಾ ತುಂಬಿ ಹರಿಯುತ್ತಿವೆ. ಇಂತಹ ಸಂದರ್ಭದಲ್ಲಿ ಹಲವು ಜಲಚರಗಳು ನದಿಯಿಂದ ಹೊರಬರುವುದನ್ನು ಸಾಮಾನ್ಯವಾಗಿ ನೋಡಿಯೇ ಇರುತ್ತೇವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಕಾಲುವೆಯಿಂದ ಹೊರಬರುವ ದೈತ್ಯ ಮೊಸಳೆಗೆ ಸಂಬಂಧಿಸಿದ ವೀಡಿಯೊವೊಂದು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಇದನ್ನೂ ಓದಿ- Shocking Video : ಹುಲಿಯನ್ನು ಸಾಕು ನಾಯಿಯಂತೆ ಸುತ್ತಾಡಿಸುತ್ತಾಳೆ ಈ ಯುವತಿ, ನೀವೂ ನೋಡಿ
ಇದ್ದಕ್ಕಿದ್ದಂತೆ ಕಾಲುವೆಯಿಂದ ಹೊರಬಂದ ದೈತ್ಯ ಮೊಸಳೆ:
ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ದೈತ್ಯ ಮೊಸಳೆಯೊಂದು ಬೇಟೆ ಹುಡುಕುತ್ತಾ ಕಾಲುವೆಯಿಂದ ಹೊರಬಂದಿದೆ. ಬಳಿಕ ಹೊರಗಿರುವುದು ಅಸುರಕ್ಷಿತ ಎಂದೋ ಏನೋ ರಸ್ತೆ ದಾಟಿ ಇನ್ನೊಂದು ಕೊಳಕ್ಕೇ ಇಳಿದಿದೆ. ಮೊಸಳೆ ರಸ್ತೆ ದಾಟುವಾಗ ಮಧ್ಯದಲ್ಲಿ ದ್ವಿಚಕ್ರ ವಾಹನವೊಂದನ್ನು ಕಾಣಬಹುದು.
ವಿಡಿಯೋವನ್ನು ಇಲ್ಲಿ ವೀಕ್ಷಿಸಿ...
ಇದನ್ನೂ ಓದಿ- Shocking Video: ಎಂಟನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿ!
ಇನ್‌ಸ್ಟಾಗ್ರಾಮ್‌ನಲ್ಲಿ ಹೆಲಿಕಾಪ್ಟರ್_ಯಾತ್ರಾ_ ಹೆಸರಿನ ಪುಟದಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದ್ದು, ಇದುವರೆಗೆ 1,29 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ನೆಟಿಜನ್‌ಗಳು ಕೂಡ ವಿಡಿಯೋಗೆ ತೀವ್ರ ಕಾಮೆಂಟ್ ಮಾಡುತ್ತಿದ್ದಾರೆ.