ವೈರಲ್ ವಿಡಿಯೋ: ಯುವಕರಿಗೆ ಸ್ಟಂಟ್ ಮಾಡುವುದೆಂದರೆ ಒಂದು ರೀತಿಯ ಕ್ರೇಜ್. ಸ್ಟಂಟ್‌ಗಳು ಕೆಲವರ ವೃತ್ತಿಯಾಗಿದ್ದು, ಕೆಲವರು ಹವ್ಯಾಸಕ್ಕಾಗಿ ಮಾಡುತ್ತಾರೆ.  ಕೆಲವರಿಗಂತೂ ಅಪಾಯಕಾರಿ ಸ್ಟಂಟ್ ಮಾಡುವುದೆಂದರೆ ಬಲು ಪ್ರಿಯ. ಆದಾಗ್ಯೂ, ಕೆಲವೊಮ್ಮೆ ಇಂತಹ ಸಾಹಸಗಳು ಪ್ರಾಣಕ್ಕೇ ಕುತ್ತು ತರಬಹುದು. ಸಾಮಾಜಿಕ ಜಾಲತಾಣದಲ್ಲಿ ಇದೀಗ ಅದೇ ರೀತಿಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸ್ಟಂಟ್‌ಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದು ಸಾಕಷ್ಟು ಅಪಾಯಕಾರಿಯಾಗಿದೆ. ವೀಡಿಯೊದಲ್ಲಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವ ವ್ಯಕ್ತಿಯೊಬ್ಬ  ನದಿಯ ಮೇಲೆ ಹಗ್ಗದ ಮೇಲೆ ನಡೆಯುತ್ತಾ ಸ್ಟಂಟ್ ಪ್ರದರ್ಶಿಸುತ್ತಿದ್ದಾನೆ.  ಅಷ್ಟರಲ್ಲಿ ಅಪಾಯಕಾರಿ ಮೊಸಳೆಗಳ ಗುಂಪು ಅಲ್ಲಿಗೆ ತಲುಪಿವೆ. 


ಇದನ್ನೂ ಓದಿ- Monkey Leopard Video: ಮರದ ಮೇಲೇರಿದ ಕೋತಿಯನ್ನು ಜಿಗಿದು ಹಿಡಿದ ಚಿರತೆ- ವಾಚ್ ಶಾಕಿಂಗ್ ವಿಡಿಯೋ


ಹೌದು, ಈ ವೈರಲ್ ವಿಡಿಯೋದಲ್ಲಿ ವ್ಯಕ್ತಿ ಮೊದಲು ಹಗ್ಗವನ್ನು ನದಿಯ ಮೇಲೆ ಕಟ್ಟಿರುವುದನ್ನು ಕಾಣಬಹುದು. ನಂತರ ಆತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಗ್ಗದ ಮೇಲೆ ನಡೆಯತೊಡಗಿದರು. ಅಷ್ಟೇ ಅಲ್ಲ, ಈ ವೇಳೆ ಅಪಾಯಕಾರಿ ಮೊಸಳೆಗಳ ಗುಂಪು ನದಿಯಲ್ಲಿ ಕಾಣಿಸಿಕೊಂಡಿವೆ. ಸ್ಟಂಟ್ ಮಾಡುತ್ತಿದ್ದ ವ್ಯಕ್ತಿಗೆ ಇದರ ಬಗ್ಗೆ ತಿಳಿದರೂ ಆತ ಗಾಬರಿ ಆಗದೇ ಹಗ್ಗದ ಮೇಲೆಯೇ ಸ್ಟಂಟ್ ಮುಂದುವರೆಸಿದ್ದಾನೆ.


ಇದನ್ನೂ ಓದಿ- ಮದುವೆ ಸಂಭ್ರಮದ ನಡುವೆಯೂ ಕುಳಿತಲ್ಲೇ ನಿದ್ದೆಗೆ ಜಾರಿದ ವರ .! ವಧು ಮಾಡಿದ್ದೇನು ಗೊತ್ತಾ ?


ಈ ವೀಡಿಯೊದ ಕೊನೆಯಲ್ಲಿ ಮೊಸಳೆಗಳ ಗುಂಪು ವ್ಯಕ್ತಿಯನ್ನು ಹಿಡಿಯಲು ಮುಂದಾಗಿರುವುದನ್ನು ನೀವು ನೋಡಲು ಸಾಧ್ಯವಾಗುತ್ತದೆ. ಆದರೆ, ಅದೃಷ್ಟವಶಾತ್ ಆತ ತನ್ನನ್ನು ರಕ್ಷಿಸಿಕೊಂಡಿದ್ದಾರೆ. ವ್ಯಕ್ತಿಯ ಈ ಸ್ಟಂಟ್ ನೋಡಿದರೆ ಅವರು ಅದನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ತೋರುತ್ತದೆ. ಆದಾಗ್ಯೂ, ಅಂತಹ ಸಾಹಸಗಳು ಯಾರಿಗಾದರೂ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಹಾಗಾಗಿ ಯಾವುದೇ ಸ್ಟಂಟ್ಸ್ ಮಾಡುವಾಗ ಎಚ್ಚರದಿಂದಿರಿ.


ಈ ಅಪಾಯಕಾರಿ ಸ್ಟಂಟ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:



ಈ ವಿಡಿಯೋವನ್ನು earth.brains ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಗೆ ಅಪ್‌ಲೋಡ್ ಮಾಡಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.