Trending Video: ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವೊಮ್ಮೆ ಸ್ವಾರಸ್ಯಕರ ವಿಡಿಯೋಗಳು ಕಂಡುಬರುತ್ತವೆ. ಇಂತಹ ವಿಡಿಯೋಗಳು ಜನರಿಗೆ ಹೊಟ್ಟೆ ಹಿಡಿದು ನಗಲು ಒತ್ತಾಯಿಸುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತುತ ವಿಡಿಯೋವೊಂದು ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಓರ್ವ ಪುಟ್ಟ ಬಾಲಕಿ ಅಳುತ್ತಾ ತನ್ನ ತಂದೆಯ ಕಡೆಗೆ ಬರುತ್ತಾಳೆ ಮತ್ತು ಬೇಡಿಕೆಯೊಂದನ್ನು ಮುಂದಿಡುತ್ತಾಳೆ. ಆಕೆಯ ಬೇಡಿಕೆಗೆ ತಂದೆಯೇ ನಿಬ್ಬೆರಗಾಗಿದ್ದಾರೆ. ನೆಟ್ಟಿಗರಿಗೆ ಮಾತ್ರ ಈ ಪುಟಾಣಿಯ ಬೇಡಿಕೆ ತುಂಬಾ ಕ್ಯೂಟ್ ಮತ್ತು ಫನ್ನಿ ಅನಿಸುತ್ತಿದೆ. ಅದೇನೇ ಇದ್ದರೂ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ (Social Media) ಭಾರಿ ವೈರಲ್ ಆಗುತ್ತಿದೆ. ವಿಡಿಯೋಗೇ ಹಲವು ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.  (Trending News In Kannada)

COMMERCIAL BREAK
SCROLL TO CONTINUE READING

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪುಟ್ಟ ಬಾಲಕಿಯೊರ್ವಳು ತನ್ನ ತಂದೆಯ ಬಳಿ ಅಳುತ್ತಾ ಬಂದು 'ನನಗೆ ಮದುವೆಯಾಗಬೇಕಿದೆ, ಅದೂ ಈಗಲೇ' ಎಂದು ಹಟ ಹಿಡಿದಿದ್ದಾಳೆ. ಇದನ್ನು ಕೇಳಿ ಬಾಲಕಿಯ ತಂದೆಯೇ ಆಶ್ಚರ್ಯಚಕಿತರಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಸಾಧ್ಯವಿಲ್ಲ, ಮದುವೆಯಲ್ಲಿ ಹಲವು ಸಮಸ್ಯೆಗಳಿವೆ ಎಂದು ಹುಡುಗಿಯ ತಂದೆ ಪದೇ ಪದೇ ಹೇಳುತ್ತಿದ್ದಾರೆ. ಬೇಕಾದರೆ ಮಮ್ಮಿಗೂ ಕೇಳು ಎಂದು ತಂದೆ ಹೇಳುತ್ತಿದ್ದಾರೆ. ಇದನ್ನು ಕೇಳಿ ಪುಟಾಣಿ ಮತ್ತೆ ಜೋರಾಗಿ ಅಳಲು ಪ್ರಾರಂಭಿಸುತ್ತದೆ ಮತ್ತು ತಂದೆ ಆಕೆಯ ಹಟದ ಮುಂದೆ ಹತಾಶರಾಗುವುದನ್ನು ನೀವು ಕೇಳಬಹುದು. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Instagram ನಲ್ಲಿ sweety_writer_0.2 ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಇದೇ ವೇಳೆ ಅನೇಕ ಬಳಕೆದಾರರು ಈ ವಿಡಿಯೋಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ವೀಡಿಯೋ ನೋಡಿದ ಜನರಿಗೆ ತಮ್ಮ ನಗು ತಡೆದುಕೊಳ್ಳಲು ಆಗುತ್ತಿಲ್ಲ.


ಜನರ ಪ್ರತಿಕ್ರಿಯೆ ಹೇಗಿದೆ?
ವೈರಲ್ ಆಗಿರುವ ವೀಡಿಯೋ ನೋಡಿದ ಜನರು ತಮ್ಮ ತೀವ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ಮದುವೆಯಾಗಲಿ ಬಿಡು ಬ್ರೋ, ಪುಟಾಣಿಯನ್ನು ಏಕೆ ಅಳಿಸುತ್ತಿರುವಿ?' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಇದೆಲ್ಲಾ ಏನು ನೋಡಲು ಸಿಗುತ್ತಿದೆ?'  ಎಂದಿದ್ದಾರೆ. ಅದೇ ಸಮಯದಲ್ಲಿ, ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, "ವಾಹ್! ಇನ್ಸ್ಟಾಗ್ರಾಮ್ ಹವಾ ತಗುಲಿದ ಪುಟಾಣಿ ತೀವ್ರವಾಗಿ ಗಾಯಗೊಂಡು, ತನ್ನ ತಂದೆಯ ಮುಂದೆ ವಿವಾಹ ಮಾಡಿಸಲು ಬೇಡಿಕೆ ಇಡುತ್ತಿದ್ದಾಳೆ" ಎಂದಿದ್ದಾರೆ. 


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ