ಚಿನ್ನಾಭರಣಗಳಿಗಿಂತಲೂ ದುಬಾರಿಯಾಯ್ತು ಟೋಮ್ಯಾಟೊ! ಕಾವಲಿಗೆ ಬಂದು ನಿಂತ ನಾಗರಾಜ... ವಿಡಿಯೋ ನೋಡಿ
ಹಳೆ ಚಲನ ಚಿತ್ರಗಳಲ್ಲಿ ಹೇಗೆ ನಾಗರ ಹಾವು ತಿಜೋರಿಯ ರಕ್ಷಣೆಯನ್ನು ಮಾಡುತ್ತವೆಯೋ, ಅದೇ ರೀತಿ ಒಂದು ನಾಗರ ಹಾವು ಟೋಮ್ಯಾಟೊ ರಕ್ಷಣೆಗೆ ಬಂದು ನಿಂತಿದೆ. ಟೋಮ್ಯಾಟೊ ಇಟ್ಟ ಜಾಗದಲ್ಲಿ ಅಪಾಯಕಾರಿ ನಾಗರ ಹಾವು ಇರುವುದನ್ನು ಗಮನಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, ಹಲವು ಹಾಸ್ಯಭರಿತ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕೆಲವರಂತೂ ಇದೀಗ ಟೋಮ್ಯಾಟೊ ಚಿನ್ನಾಭರಣಗಳಿಗಿಂತಲೂ ದುಬಾರಿಯಾಗಿದೆ ಎಂದು ಹೇಳುತ್ತೀರುವುದನ್ನು ನೀವು ಗಮನಿಸಬಹುದು.
ಬೆಂಗಳೂರು: ಪ್ರಸ್ತುತ ದೇಶಾದ್ಯಂತ ಟೋಮ್ಯಾಟೊ ಬೆಲೆಗಳು ಗಗನಾಮುಖಿಯಾಗಿರುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ದೇಶದ ಕೆಲವೆಡೆ ಟೋಮ್ಯಾಟೊ ಧಾರಣಿ 200 ರೂ.ಪ್ರತಿ ಕೆ.ಜಿ ತಲುಪಿದೆ. ಟೋಮ್ಯಾಟೊಗಳ ಬೆಲೆ 300 ರೂ.ಗಳ ಗಡಿ ದಾಟಲಿದೆ ಎಂದೂ ಕೂಡ ಹೇಳಲಾಗುತ್ತಿದೆ. ಹೀಗಿರುವಾಗ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಗೊಂಡ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಿಷಕಾರಿ ಹಾವೊಂದು ಟೋಮ್ಯಾಟೊಗಳನ್ನು ಕಾವಲು ಮಾಡುತ್ತಿರುವುದನ್ನು ನೀವು ನೋಡಬಹುದು. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ಜನರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಟೋಮ್ಯಾಟೊಗಳನ್ನು ಯಾವ ರೀತಿ ಖಜಾನೆಯಲ್ಲಿ ಚಿನ್ನದಂತೆ ಇರಿಸಲಾಗಿದೆ ಎಂಬುದನ್ನು ನೀವು ಗಮನಿಸಬಹುದು. ಇನ್ನೊಂದೆಡೆ ಒಂದು ವಿಷಕಾರಿ ಹಾವು ಟೋಮ್ಯಾಟೋಗಳ ಬಳಿ ತನ್ನ ಠಿಕಾಣಿ ಹೂಡಿದೆ. ಈ ವಿಡಿಯೋವನ್ನು ವೀಕ್ಷಿಸಿದ ಕೆಲ ಜನರು ನಿಬ್ಬೆರಗಾದರೆ, ಕೆಲವರ ಮೈಮೇಲಿನ ರೋಮಗಳು ಎದ್ದು ನಿಂತಿವೆ. ಟೋಮ್ಯಾಟೊ ಸಂಗ್ರಹದ ಬಳಿ ಕುಳಿತಿರುವ ಅಪಾಯಕಾರಿ ನಾಗರಹಾವನ್ನು ಕಂಡ ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು, ಹಾಸ್ಯ ಚಟಾಕಿಗಳನ್ನು ಸಿಡಿಸುತ್ತಿದ್ದಾರೆ. ಕೆಲವರು ಟೋಮ್ಯಾಟೊ ಚೀನಾಭರಣಗಳಿಗಿಂತ ದುಬಾರಿಯಾಯ್ತು ಎಂದು ಹೇಳುತ್ತಿದ್ದಾರೆ. ಹಳೆ ಚಲನ ಚಿತ್ರಗಳಲ್ಲಿ ಯಾವ ರೀತಿ ನಾಗರ ಹಾವು ತಿಜೋರಿಯ ರಕ್ಷಣೆಯನ್ನು ಬಂದು ನಿಲ್ಲುತ್ತದೆಯೋ, ಅದೇ ರೀತಿ ಈ ನಾಗರ ಹಾವು ಟೋಮ್ಯಾಟೊ ರಕ್ಷಣೆಗೆ ಬಂದು ನಿಂತಿದೆ.
ಇದನ್ನೂ ಓದಿ-ಒಂದು ವರ್ಷದಲ್ಲಿ ವಯಾಗ್ರಾ ಮಾತ್ರೆಯ ಮೇಲೆ ಅಮೆರಿಕಾ ಸೇನೆ ಮಾಡುತ್ತಿರುವ ವೆಚ್ಚ ಎಷ್ಟು ಗೊತ್ತಾ?
ವಿಷಯ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಯಾವುದೇ ಓರ್ವ ವ್ಯಕ್ತಿ ಟೋಮ್ಯಾಟೊ ಖರೀದಿಗಾಗಿ ಅವುಗಳತ್ತ ಕೈಚಾಚುತ್ತಾನೋ, ಆಗ ಹಾವೂ ಕೂಡ ಕಚ್ಚಲು ಮುಂದಕ್ಕೆ ಬರುತ್ತದೆ. ದೃಶ್ಯ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಈ ಮೊದಲು ಇಂತಹ ವಿಡಿಯೋ ನೀವು ಎಲ್ಲೂ ನೋಡಿರಲಿಕ್ಕಿಲ್ಲ. ಯಾವ ರೀತಿ ಹಾವು ವ್ಯಕ್ತಿಯನ್ನು ಕಚ್ಚಲು ಮುಂದಾಗುತ್ತದೆಯೋ, ಆ ದೃಶ್ಯ ಮೈಯಲ್ಲಿ ನಡುಕ ಹುಟ್ಟಿಸುವಂತಿದೆ. mirzamdarif1 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಹಂಚಿಕೊಂಡ ವ್ಯಕ್ತಿ 'ಖಜಾನೆಗಿಂತ ಕಡಿಮೆಯೇನಿಲ್ಲ ಟೋಮ್ಯಾಟೊ, ರಕ್ಷಣೆಗೆ ನಿಂತ ಅಪಾಯಕಾರಿ ನಾಗರಹಾವು' ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.