ನವದೆಹಲಿ: ಗಿನ್ನಿಸ್ ಬುಕ್ ಆಫ್ ವರ್ಡ್ ರೆಕಾರ್ಡ್ ನಲ್ಲಿ ಚಿತ್ರ ವಿಚಿತ್ರ ದಾಖಲೆಗಳು ಬರೆಯಲಾಗಿವೆ. ಅದರಲ್ಲಿ ವಿಶ್ವದ ಅತೀ ದೀರ್ಘಾವಧಿಯ ಚುಂಬನದ ದಾಖಲೆಯನ್ನು ಕೂಡ ಬರೆಯಲಾಗಿತ್ತು. ಆದರೆ ಕಾಲಾಂತರದಲ್ಲಿ ಆ ವಿಭಾಗವನ್ನೇ ದಾಖಲೆ ಪುಸ್ತಕದಿಂದ ಕೈಬಿಡಲಾಯಿತು. 58 ಗಂಟೆ 35 ನಿಮಿಷಗಳ ಕಾಲ ನಿರಂತರವಾಗಿ ಚುಂಬಿಸುವ ಮೂಲಕ ಈ ದಾಖಲೆಯನ್ನು ಮಾಡಿದ ಥಾಯ್ ಜೋಡಿಯ ಹೆಸರಿನಲ್ಲಿ ವಿಶ್ವದ ಅತಿ ಉದ್ದದ ಚುಂಬನದ ವಿಶ್ವದಾಖಲೆ ಇದೆ. 2013 ರಲ್ಲಿ ಈ ಸುದೀರ್ಘ ಚುಂಬನದೊಂದಿಗೆ, ಈ ಜೋಡಿಯು ತಾವೇ ನಿರ್ಮಿಸಿದ್ದ ದಾಖಲೆಯನ್ನು ಮುರಿದಿತ್ತು.
ಇದನ್ನೂ ಓದಿ-ಪರಸ್ಪರ ಕಾದಾಟಕ್ಕಿಳಿದ ಕಾಳಿಂಗ ಸರ್ಪ-ಹೆಬ್ಬಾವು, ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ ವೈರಲ್
ಥಾಯ್ಲೆಂಡ್‌ನ ಪಟ್ಟಾಯದಲ್ಲಿ ಚುಂಬನ ಸ್ಪರ್ಧೆ
ಫೆಬ್ರವರಿ 12, 2013 ರಂದು, ಥೈಲ್ಯಾಂಡ್‌ನ ಪಟ್ಟಾಯದಲ್ಲಿ ಚುಂಬನದ ಸ್ಪರ್ಧೆ ನಡೆದಿದ್ದು, ಇದರಲ್ಲಿ ಸುಮಾರು 9 ದಂಪತಿಗಳು ಭಾಗವಹಿಸಿದ್ದರು. ಅದರಲ್ಲಿ 70 ವರ್ಷದ ದಂಪತಿಯೂ ಇದ್ದರು, ಆದರೆ ವೃದ್ಧ ದಂಪತಿಗಳಿದೆ ತಮ್ಮ ವೃದ್ಧಾಪ್ಯದ ಕಾರಣ ಕೇವಲ 1 ಗಂಟೆ 38 ನಿಮಿಷಗಳು ಮಾತ್ರ ಮೈದಾನದಲ್ಲಿ ಇರಲು ಸಾಧ್ಯವಾಯಿತು. ಈ ಸ್ಪರ್ಧೆಯ ಕೊನೆಯಲ್ಲಿ, ಕೇವಲ 4 ಜೋಡಿಗಳು ಮೈದಾನದಲ್ಲಿ ಉಳಿದಿದ್ದವು, ನಂತರ ಥಾಯ್ ಜೋಡಿ ತನ್ನ 50 ಗಂಟೆ 25 ನಿಮಿಷಗಳ ಕಾಲ ಚುಂಬಿಸಿದ ಹಳೆಯ ದಾಖಲೆಯನ್ನು ಮುರಿದು ಜಯಶಾಲಿಯಾಗಿದೆ. , ಥಾಯ್ ಜೋಡಿ ಎಕ್ಕಾಚಾಯ್ ಮತ್ತು ಲ್ಯಾಕ್ಷನಾ 58 ಗಂಟೆ 35 ನಿಮಿಷಗಳ ಕಾಲ ದೃಢವಾಗಿ ನಿಂತು ಪರಸ್ಪರ ಚುಂಬಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ಹೇಳಿದರೆ ನೀವೂ ಒಂದು ಕ್ಷಣ ನಿಬ್ಬೆರಗಾಗುವಿರಿ. ಈ ಮೊದಲು ಕೂಡ ಈ ದಾಖಲೆಯು ಎಕ್ಕಾಚಾಯ್ ಮತ್ತು ಲ್ಯಾಕ್ಷನಾ ಹೆಸರಿನಲ್ಲಿತ್ತು. ಹೀಗಾಗಿ ಎಕ್ಕಾಚಾಯ್ ಮತ್ತು ಲ್ಯಾಕ್ಷನಾ ತಮ್ಮ ಹಳೆ ದಾಖಲೆಯನ್ನೇ ಮುರಿದಿದ್ದಾರೆ.
ಇದನ್ನೂ ಓದಿ-Snake Farming: ಸಿಕ್ಕಾಪಟ್ಟೆ ಹಾವುಗಳ ಕೃಷಿಯಲ್ಲಿ ತೊಡಗಿದ್ದಾರೆ ಈ ಗ್ರಾಮದ ಜನ, ಕಾರಣ ಇಲ್ಲಿದೆ!
ಕಿಸ್ಸಿಂಗ್ ವರ್ಗವನ್ನು ಏಕೆ ತೆಗೆದುಹಾಕಲಾಗಿದೆ?
ಚುಂಬನದ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಗಿನ್ನಿಸ್ ದಾಖಲೆ ಪುಸ್ತಕದಿಂದ ಆ ವಿಭಾಗವನ್ನೇ ಕೈಬಿಡಲಾಯಿತು. ಈ ಸ್ಪರ್ಧೆಯು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ, ಇದರಿಂದಾಗಿ ಭಾಗವಹಿಸುವವರ ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ನಿದ್ರೆಯ ಕೊರತೆ ಮತ್ತು ಮಾನಸಿಕ ಸಮಸ್ಯೆಗಳ ದೃಷ್ಟಿಯಿಂದ ಗಿನ್ನೆಸ್ ಪುಸ್ತಕವು ಈ ವರ್ಗವನ್ನು ರದ್ದುಗೊಳಿಸಲು ನಿರ್ಧರಿಸಿತು. 1999 ರಲ್ಲಿ ಇಸ್ರೇಲಿ ದಂಪತಿಗಳಾದ ಟ್ಜುಬೆರಾ ಮತ್ತು ಡ್ರೋರ್ ಒರ್ಪಾಜ್ 30 ಗಂಟೆ 45 ನಿಮಿಷಗಳ ಕಾಲ ಚುಂಬಿಸಿ ದಾಖಲೆ ಬರೆದಿದರು ಎಂಬ ವಿಷಯ ಇನ್ನೂ ಆಶ್ಚರ್ಯಕ್ಕೀಡುಮಾಡುತ್ತದೆ. 2004 ರಲ್ಲಿ, ಇಟಲಿಯ ಆಂಡ್ರಿಯಾ ಸರ್ಟಿ ಮತ್ತು ಅವರ ಗೆಳತಿಯ ಹೆಸರನ್ನು ದಾಖಲೆ ಪುಸ್ತಕದಲ್ಲಿ ನಮೂಡಿಸಲಾಯಿತು, ಅವರು 31 ಗಂಟೆ 18 ನಿಮಿಷಗಳ ಕಾಲ ಚುಂಬಿಸಿ ದಾಖಲೆ ಮಾಡಿದ್ದರು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.