ಬರ್ಮಿಂಗ್ ಹ್ಯಾಮ್:  ವಿಶ್ವಾದ್ಯಂತ, ಕೆಲವು ಜನರು ಪಾರ್ಟಿಗಳ ಸಮಯದಲ್ಲಿ ಮದ್ಯಪಾನ ಮಾಡುತ್ತಾರೆ ಎಂಬುದು ನಿಮ್ಮೆಲ್ಲರಿಗೂ ತಿಳಿದೇ ಇದೆ, ಆದರೆ ಕೆಲವೊಮ್ಮೆ ಕೆಲವರು ಅನಗತ್ಯವಾಗಿ ಅಧಿಕ ಮಧ್ಯಪಾನ ಮಾಡಿ ತಮ್ಮ ಮೇಲೀನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯೊಂದಿಗೆ ಅದೇ ರೀತಿಯ ಘಟನೆ ಸಂಭವಿಸಿದೆ. ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಕುಡಿದ ಅಮಲಿನಲ್ಲಿ ದೊಡ್ಡದಾದ ಹೂದಾನಿಗೆ ಸಿಲುಕಿಕೊಂಡಿದ್ದಾನೆ. ನಂತರ ಅಕ್ಕಪಕ್ಕದಲ್ಲಿದ್ದವರು ಆತನನ್ನು ಹೊರತರಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. (Viral News In Kannada)


COMMERCIAL BREAK
SCROLL TO CONTINUE READING

ವೈರಲ್ ವಿಡಿಯೋ ಎಲ್ಲಿಂದ?
ಮಾಧ್ಯಮ ವರದಿಗಳ ಪ್ರಕಾರ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪಾರ್ಟಿಯಲ್ಲಿ ಈ ಆಘಾತಕಾರಿ ವೀಡಿಯೊವನ್ನು ಸೆರೆಹಿಡಿಯಲಾಗಿದೆ. ಇಲ್ಲಿ ವ್ಯಕ್ತಿಯೊಬ್ಬ ಅತಿಯಾಗಿ ಮದ್ಯ ಸೇವಿಸಿ ಪ್ರಜ್ಞೆ ತಪ್ಪಿದ್ದಾನೆ. ವೀಡಿಯೋದಲ್ಲಿ ಆತನ ಸುತ್ತಲೂ ನೆರೆದ ಜನರು ಆತನ ಈ ಕೃತ್ಯವನ್ನು ಕಂಡು ಆತನನ್ನು ಹೊರಕ್ಕೆ ತರಲು ಯತ್ನಿಸುತ್ತಿದ್ದಾರೆ ಮತ್ತು ಕೆಲವರು ನಗುತ್ತಿದ್ದಾರೆ.


ಇದನ್ನೂ ಓದಿ-Viral Video: ಇದೀಗ ಬ್ರೆಜಿಲ್ ಪರ್ವತದಲ್ಲಿ ಕಂಡುಬಂದ 10 ಅಡಿ ಎತ್ತರದ ಎಲಿಯನ್ ಗಳು! ನಿಗೂಢ ಜೀವಿಗಳನ್ನು ಕಂಡು ಬೆಚ್ಚಿಬಿದ್ದ ನೆಟ್ಟಿಗರು!


ವಿಡಿಯೋದಲ್ಲಿ ಏನಿದೆ?
ಪಾರ್ಟಿ ಸಂದರ್ಭದಲ್ಲಿ ಹಲವರು ಖುಷಿಯಿಂದ ಕುಣಿದಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆದರೆ ಈ ಸಮಯದಲ್ಲಿ ಒಂದು ಘಟನೆ ಸಂಭವಿಸುತ್ತದೆ ಮತ್ತು ಎಲ್ಲರೂ ಓರ್ವ ವ್ಯಕ್ತಿಯನ್ನು ಸುತ್ತುವರೆದು ಹಿಳ್ಳುತ್ತಾರೆ. ವಾಸ್ತವದಲ್ಲಿ ಪಾರ್ಟಿ ವೇಳೆ ಒಬ್ಬ ವ್ಯಕ್ತಿಯು ಮಿತಿಮೀರಿ ಕುಡಿದಿದ್ದಾನೆ, ನಂತರ ವ್ಯಕ್ತಿಯು ತನ್ನನ್ನು ತಾನೇ ಒಂದು ದೊಡ್ಡದಾದ ಹೂದಾನಿ ಸಿಲುಕಿಸಿಕೊಂಡಿದ್ದಾನೆ. ಸಿಕ್ಕಿಬಿದ್ದ ನಂತರ ವ್ಯಕ್ತಿಯು ತನ್ನನ್ನು ತಾನು ಹೂದಾನಿಯಿಂದ ಹೊರತೆಗೆಯಲು ಹರಸಾಹಸ ಪಡುತ್ತಿದ್ದಾನೆ, ಆದರೆ ಆತನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇಷ್ಟಾದರೂ ಕೂಡ ಕುಡಿದ ಅಮಲಿನಲ್ಲಿ ಆತ ಕೋಪದಿಂದ ಅಲ್ಲಿದ್ದವರನ್ನು ಬೈಯುತ್ತಿದ್ದಾನೆ. ಮಾಹಿತಿ ಪ್ರಕಾರ, ವ್ಯಕ್ತಿ ಸಿಕ್ಕಿಬಿದ್ದಿರುವ ಹೂದಾನಿಯ ಮೌಲ್ಯ 500 ರಿಂದ 3000 ಡಾಲರ್ ಎಂದು ಅಂದಾಜಿಸಲಾಗಿದೆ.


ಇದನ್ನೂ ಓದಿ-Mohammed Shami ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ! ಕಾರಣ ಗೊತ್ತಾಗಬೇಕೆ? Viral Video ನೋಡಿ!


ಈ ಕ್ಲಿಪ್ ಅನ್ನು @TheWapplehouse ಹೆಸರಿನ ಖಾತೆಯೊಂದಿಗೆ X ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಇದುವರೆಗೆ 15 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ‘ಬ್ರೋ ಅಗತ್ಯಕ್ಕಿಂತ ಹೆಚ್ಚು ಕುಡಿದಿದ್ದಾನೆ’ ಎಂದು ಒಬ್ಬ ಬಳಕೆದಾರರು ಬರೆದುಕೊಂಡರೆ,  ಮತ್ತೊಬ್ಬ ಬಳಕೆದಾರರು ‘ಇಷ್ಟು ಕುಡಿಯಬಾರದು’ ಎಂದು ಬರೆದಿದ್ದಾರೆ.


ವೈರಲ್ ವಿಡಿಯೋ ಇಲ್ಲಿದೆ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ