Viral Video: ಇದೀಗ ಬ್ರೆಜಿಲ್ ಪರ್ವತದಲ್ಲಿ ಕಂಡುಬಂದ 10 ಅಡಿ ಎತ್ತರದ ಎಲಿಯನ್ ಗಳು! ನಿಗೂಢ ಜೀವಿಗಳನ್ನು ಕಂಡು ಬೆಚ್ಚಿಬಿದ್ದ ನೆಟ್ಟಿಗರು!

Viral Video: ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ಜೀವಿಗಳು 10 ಅಡಿಗಳಷ್ಟು ಎತ್ತರವಾಗಿವೆ, ಆಗ್ನೇಯ ಬ್ರೆಜಿಲ್‌ನ ಕರಾವಳಿಯಿಂದ ಮೂರು ಕಿಲೋಮೀಟರ್‌ಗಿಂತ ಹೆಚ್ಚು ದೂರದಲ್ಲಿರುವ ಇಲ್ಹಾ ಡೊ ಮೆಲ್ ಎಂಬ ದ್ವೀಪದಲ್ಲಿ ಇವು ಕಾಣಿಸಿಕೊಂಡಿವೆ (Viral News In Kannada).  

Written by - Nitin Tabib | Last Updated : Jan 13, 2024, 04:39 PM IST
  • ಬ್ರೆಜಿಲಿಯನ್ ಪರ್ವತ ಪ್ರದೇಶದಲ್ಲಿ ಕಾಣಿಸಿಕೊಂಡ ಎಲಿಯನ್ ಗಳು!
  • ಮನುಷ್ಯರಂತೆ ಕಾಣುವ ನಿಗೂಢ ಜೀವಿಗಳನ್ನು ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
  • ಮಾನುಷರೇ ಅಥವಾ ಎಲಿಯನ್ಗಳು! ವೈರಲ್ ಆಗಿರುವ ವೀಡಿಯೋ ನೋಡಿದ ಜನರು ಅಚ್ಚರಿಗೊಂಡಿದ್ದಾರೆ
Viral Video: ಇದೀಗ ಬ್ರೆಜಿಲ್ ಪರ್ವತದಲ್ಲಿ ಕಂಡುಬಂದ 10 ಅಡಿ ಎತ್ತರದ ಎಲಿಯನ್ ಗಳು! ನಿಗೂಢ ಜೀವಿಗಳನ್ನು ಕಂಡು ಬೆಚ್ಚಿಬಿದ್ದ ನೆಟ್ಟಿಗರು! title=

ಬ್ರೆಜಿಲ್: ಬ್ರೆಜಿಲ್‌ನ ದ್ವೀಪವೊಂದರ ಬೆಟ್ಟದ ತುದಿಯಲ್ಲಿ ಎರಡು ಮಾನವರಂತಹ ಜೀವಿಗಳನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಭೂಮಿಗೆ ಏಲಿಯನ್ ಗಳ ಆಗಮನದ ಬಗ್ಗೆ ಚರ್ಚೆಯನ್ನು ಮತ್ತೊಮ್ಮೆ ಹುಟ್ಟುಹಾಕಿದೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ಜೀವಿಗಳು 10 ಅಡಿ ಉದ್ದವಿದ್ದು, ಆಗ್ನೇಯ ಬ್ರೆಜಿಲ್‌ನ ಕರಾವಳಿಯಿಂದ ಮೂರು ಕಿಲೋಮೀಟರ್‌ಗಿಂತ ಹೆಚ್ಚು ದೂರದಲ್ಲಿರುವ ಇಲ್ಹಾ ಡೊ ಮೆಲ್ ಎಂಬ ದ್ವೀಪದಲ್ಲಿ ಕಾಣಿಸಿಕೊಂಡಿವೆ. ಬೆಟ್ಟದ ತುದಿಯಲ್ಲಿ ಅವುಗಳ ಉಪಸ್ಥಿತಿಯು ಸ್ಥಳೀಯರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ, ಅವುಗಳವರೆಗೆ ತಲುಪುವುದು ಕಷ್ಟ ಎಂದು ಹೇಳಲಾಗುತ್ತಿದೆ, ಆದರೆ ಬೆಟ್ಟದ ಮೇಲಿನ ಪೊದೆಗಳು ಅವುಗಳ  ಮೊಣಕಾಲುಗಳನ್ನು ಕೂಡ ತಲುಪಿಲ್ಲ ಎನ್ನಲಾಗುತ್ತಿದೆ. (Viral News In Kannada)

ಮನುಷ್ಯರಲ್ಲ ಎಲಿಯನ್ ಗಳು!
ಈ ಜೀವಿಗಳು ತಮ್ಮ ಕೈಗಳನ್ನು ಮನುಷ್ಯರಂತೆ ಚಲಿಸುತ್ತಿರುವುದು ಕಂಡುಬಂದಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ, ಆದರೆ ಸಾಕ್ಷಿಗಗಳಿಗೆ ಇವು ಮನುಷ್ಯರು ಎಂಬ ಮನವರಿಕೆಯಾಗಿಲ್ಲ. ಜೆಬಿ ಲಿಟ್ಟೋರಲ್ ಅವರ ಅನುವಾದದ ಪ್ರಕಾರ, "ಇವು ಮನುಷ್ಯರಾಗಿರುವುದು ದೊಡ್ಡ ವಿಷಯ" ಎಂದು ಸ್ಥಳೀಯ ವ್ಯಕ್ತಿಯೊಬ್ಬರು ವೀಡಿಯೊದಲ್ಲಿ ಹೇಳುವುದನ್ನು ಕೇಳಬಹುದು. ಮತ್ತೊಬ್ಬ ವ್ಯಕ್ತಿ, "ಅವು ಚಲಿಸುವ ರೀತಿ ನೋಡಿದರೆ, ನಿಜವಾಗಿಯೂ ವಿಚಿತ್ರವಾಗಿದೆ! ಗಾತ್ರವನ್ನು ನೋಡಿ ... ಮತ್ತು ಅವು ತುಂಬಾ ತೀಕ್ಷ್ಣವಾಗಿವೆ" ಎಂದಿದ್ದಾರೆ

ಅವುಗಳ ವೇಗ ನೋಡಿದರೆ ಅವು ಮನುಷ್ಯರಂತೆ ಕಾಣುತ್ತಿಲ್ಲ
ಮಿಯಾಮಿ ಮಾಲ್‌ನಲ್ಲಿ 10 ಅಡಿ ಎತ್ತರದ ಅನ್ಯಗ್ರಹ ಜೀವಿ ತಿರುಗುತ್ತಿದೆ ಎಂದು ಕೆಲವರು ಹೇಳಿಕೊಳ್ಳುತ್ತಿದ್ದ ದೃಶ್ಯಾವಳಿ ವೈರಲ್ ಆದ ಕೆಲವೇ ದಿನಗಳಲ್ಲಿ ಈ ಕ್ಲಿಪ್ ಬಂದಿದೆ. ಹೊಸ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಬಳಕೆದಾರರು ಅದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಬರೆದುಕೊಂಡ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು, "ಈ ಜೀವಿ ಬೆಟ್ಟದಿಂದ ಇಳಿಯುವ ವೇಗವನ್ನು ನೋಡಿ ಅಷ್ಟೇ ಸಾಕು, ಈ ರೀತಿಯ ಬೆಟ್ಟಗಳ ಮೇಲೆ ಪ್ರಯಾಣಿಸಿದ ಯಾರಿಗಾದರೂ ನೀವು 1-2 ನಿಮಿಷಗಳಲ್ಲಿ ಈ ಬೆಟ್ಟವನ್ನು ಇಳಿಯಬಹುದು ಎಂಬುದು ತಿಳಿದಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ-Mohammed Shami ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ! ಕಾರಣ ಗೊತ್ತಾಗಬೇಕೆ? Viral Video ನೋಡಿ!

ಈ ಕುರಿತು ಬರೆದುಕೊಂಡ ಮತ್ತೊರ್ವ ಬಳಕೆದಾರರು, "ಅವು ಚಲಿಸುವ ವಿಧಾನವು ಮೆನ್ ಇನ್ ಬ್ಲ್ಯಾಕ್ ಕ್ರಿಟ್ಟರ್ಸ್ ಅನ್ನು ನೆನಪಿಸುತ್ತದೆ" ಎಂದಿದ್ದಾರೆ. ಮೂರನೆಯ ಬಳಕೆದಾರರು, "ನನಗೆ ಒಂದು ವಿಷಯ ತಿಳಿದಿದೆ ... ನಾನು ಮತ್ತೆ ಅಲ್ಲಿಗೆ ಕಾಲಿಡುವುದಿಲ್ಲ" ಎಂದು ಬರೆದಿದ್ದಾರೆ.

ಇದನ್ನೂ ಓದಿ-Trending Video: ಮೈನಸ್ 30 ಡಿಗ್ರಿ ತಾಪಮಾನದಲ್ಲಿ ಒದ್ದೆ ಕೂದಲಲ್ಲಿ ಹೊರಬಂದ ಯುವತಿ, ನಂತರ ಆಗಿದ್ದು ನೀವೇ ನೋಡಿ!

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News