ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ಮತ್ತೊಮ್ಮೆ ಸುದ್ದಿ ಮಾಡಿದೆ. ಸದಾ ಒಂದಿಲ್ಲೊಂದು ಘಟನೆಗಳಿಂದ ಸುದ್ದಿಯಾಗುವ ದೆಹಲಿ ಮೆಟ್ರೋದಲ್ಲಿ ಮತ್ತೊಂದು ಅಹಿತಕರ ಘಟನೆ ನಡೆದಿದೆ. ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬರು 'ಬೀಡಿ' ಸಿಗರೇಟ್ ಸೇದುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ದುರದೃಷ್ಟವಶಾತ್ ಈ ಘಟನೆಯ ನಿಖರವಾದ ದಿನಾಂಕ ಮತ್ತು ಸ್ಥಳ ಯಾವುದು ತಂದು ತಿಳಿದುಬಂದಿಲ್ಲ.   


COMMERCIAL BREAK
SCROLL TO CONTINUE READING

ಸಖತ್ ವೈರಲ್ ಆಗಿರುವ ಈ ವಿಡಿಯೋದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ತನ್ನ ಜೇಬಿನಿಂದ 'ಬೀಡಿ' ತೆಗೆದು ಪ್ರಯಾಣಿಕರಿಂದ ಕಿಕ್ಕಿರಿದ ಮೆಟ್ರೋ ಕ್ಯಾರೇಜ್‌ನಲ್ಲಿ ಬೆಂಕಿ ಹಚ್ಚುವುದನ್ನು ಗಮನಿಸಬಹುದು. ಈ ವೇಳೆ ಕೆಲವು ಸಹ ಪ್ರಯಾಣಿಕರು ವೃದ್ಧನ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ತನ್ನ ಬಳಿ ಟಿಕೆಟ್ ಇದೆ ಅಂತಾ ಹೇಳುವ ಮೂಲಕ ಉದ್ಧಟತನ ತೋರಿದ್ದಾನೆ.


ಇದನ್ನೂ ಓದಿ: ʼಚಿಕನ್‌ʼಗೆ ಹಣ ಕೊಡದ ಪತ್ನಿಯನ್ನು ಕತ್ತರಿಯಿಂದ ಕತ್ತರಿಸಿ ಕೊಂದ ಗಂಡ..!


ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಮತ್ತು ದೆಹಲಿ ಮೆಟ್ರೋ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಡಿಎಂಆರ್‌ಸಿ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಿಲ್ಲ.


ಇದನ್ನೂ ಓದಿ: ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡ ಪ್ರಾಣಿ ಯಾವುದು..? ಸರಿಯಾದ ಉತ್ತರ ನಿಮ್ಮ ಬುದ್ಧಿಶಕ್ತಿ ಸಾಮರ್ಥ್ಯ ತೋರುತ್ತದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.