Viral Video in India: ರೈಲು ಹಳಿಗಳ ಮೇಲೆ ಮಲಗಿ ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಭಯಾನಕ ದೃಶ್ಯವು ರೈಲ್ವೆ ನಿಲ್ದಾಣದ CCTVಯಲ್ಲಿ ಸರೆಯಾಗಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಭಯಂದರ್ ನಿಲ್ದಾಣದ ಬಳಿ ಈ ಘೋರ ದುರಂತ ಸಂಭವಿಸಿದೆ.


COMMERCIAL BREAK
SCROLL TO CONTINUE READING

60 ವರ್ಷದ ತಂದೆ ಮತ್ತು ಮಗ ಬರುತ್ತಿರುವ ಸ್ಥಳೀಯ ರೈಲಿನ ಮುಂದೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ(ಜುಲೈ ೮) ಬೆಳಗ್ಗೆ 9.30ರ ವೇಳೆಗೆ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಹರೀಶ್ ಮೆಹ್ತಾ (60) ಮತ್ತು ಪುತ್ರ ಜೈ (35) ಎಂದು ಗುರುತಿಸಲಾಗಿದೆ. 


ಇದನ್ನೂ ಓದಿ: ಬದಲಾಗುವುದು 3 ಮತ್ತು 6 ನೇ ತರಗತಿ ಪಠ್ಯಪುಸ್ತಕ ! ಪಠ್ಯಕ್ರಮ ಗೊಂದಲಕ್ಕೆ ಸ್ಪಷ್ಟನೆ ನೀಡಿದ CBSE


ಮೃತರು ವಸಾಯಿ ನಿವಾಸಿಗಳಾಗಿದ್ದಾರೆ. ರೈಲು ಬರುತ್ತಿರುವುದನ್ನು ನೋಡಿದ ಇಬ್ಬರೂ ಪರಸ್ಪರರ ಕೈಗಳನ್ನು ಹಿಡಿದುಕೊಂಡು ಹಳಿಯ ಮೇಲೆ ಮಲಗಿದ್ದಾರೆ. ಪರಿಣಾಮ ಇಬ್ಬರ ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ.


ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನಡೆ ನಡೆಸಿದ್ದಾರೆ. ಬಳಿಕ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪ್ಪ-ಮಗನ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. 


ಇದನ್ನೂ ಓದಿ: Tripura: HIVಗೆ 47 ವಿದ್ಯಾರ್ಥಿಗಳು ಬಲಿ, 828ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್‌!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.