ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಮಹಿಳೆಯರು ಹೂ ಮುಡಿದುಕೊಳ್ಳಲ್ಲ..! ಏಕೆ ಗೊತ್ತಾ?

Tirumala Tirupati Temple rules : ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಅಲಂಕಾರ ಮತ್ತು ಸೇವೆಗಳಿಗಾಗಿ ನಿತ್ಯವೂ ಟನ್‌ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ. ಆದರೆ, ಬಾಲಾಜಿ ದರ್ಶನಕ್ಕೆ ಬರುವ ಭಕ್ತರು ಹೂವು ಮುಡಿದುಕೊಳ್ಳಬಾರದು ಎಂಬ ನಿಯಮವಿದೆ. ಹೂವು ಧರಿಸಿದ ಮಹಿಳೆಯರಿಗೆ ಸ್ವಾಮಿಯ ದರ್ಶನಕ್ಕೂ ಅವಕಾಶವಿಲ್ಲ.. ಏಕೆ ಗೊತ್ತೆ.. ಬನ್ನಿ ತಿಳಿಯೋಣ..

Written by - Krishna N K | Last Updated : Jul 7, 2024, 07:41 PM IST
    • ಬಾಲಾಜಿ ದರ್ಶನಕ್ಕೆ ಬರುವ ಭಕ್ತರು ಹೂವು ಮುಡಿದುಕೊಳ್ಳಬಾರದು
    • ಹೂವು ಧರಿಸಿದ ಮಹಿಳೆಯರಿಗೆ ಸ್ವಾಮಿಯ ದರ್ಶನಕ್ಕೂ ಅವಕಾಶವಿಲ್ಲ..
    • ಶ್ರೀ ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರವಾದ ತಿರುಮಲದ ನಿಯಮ
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಮಹಿಳೆಯರು ಹೂ ಮುಡಿದುಕೊಳ್ಳಲ್ಲ..! ಏಕೆ ಗೊತ್ತಾ? title=
tirupati ticket booking

Do's and Don'ts in Tirumala Tirupati Devasthana : ಭಕ್ತಾದಿಗಳು ಸಾಮಾನ್ಯವಾಗಿ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ದೇವಾಲಯಗಳಿಗೆ ಹೋಗುತ್ತಾರೆ. ಅದರಲ್ಲೂ ಮಹಿಳೆಯರು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ.. ಹಣೆಯಲ್ಲಿ ಕುಂಕುಮ ಮತ್ತು ತಲೆಯಲ್ಲಿ ಹೂವುಗಳನ್ನು ಮುಡಿಯುತ್ತಾರೆ... ಆದರೆ, ಶ್ರೀ ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರವಾದ ತಿರುಮಲದಲ್ಲಿ ಮಹಿಳೆಯರು ಹೂವುಗಳನ್ನು ಮುಡಿಯುವಂತಿಲ್ಲ.. 

ಭೂವೈಕುಂಟ ತಿರುಮಲಕ್ಕೆ ಪ್ರತಿ ವರ್ಷ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಾರೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಜೊತೆಗೆ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ನಿತ್ಯವೂ ತಿರುಮಲಕ್ಕೆ ಬಂದು ಬಾಲಾಜಿ ದರ್ಶನ ಪಡೆಯುತ್ತಾರೆ. ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಗೋವಿಂದಾ ಎನ್ನುತ್ತ.. ಲಕ್ಷ್ಮಿ ವಲ್ಲಭನನ್ನು ಕಣ್ತುಂಬಿಕೊಳ್ಳುತ್ತಾರೆ.. 

ಇದನ್ನೂ ಓದಿ:ಅಂಬಾನಿ ಪುತ್ರನ ಮದುವೆಗೆ ಆಗಮಿಸಿದಕ್ಕೆ ಪಾಪ್ ಸಿಂಗರ್ ಜಸ್ಟೀನ್ ಬೈಬರ್ ಪಡೆದ ಸಂಭಾವನೆ ಎಷ್ಟು ಕೋಟಿ?

ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ನಿತ್ಯವೂ ವಿಶೇಷ ಪೂಜೆಗಳು, ಅರ್ಚನೆಗಳು ಮತ್ತು ಅಭಿಷೇಕಗಳು ನಡೆಯುತ್ತಲೇ ಇರುತ್ತವೆ. ಭಕ್ತರು ವಿವಿಧ ಅಲಂಕಾರಗಳಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ದರ್ಶನ ಪಡೆಯುತ್ತಾರೆ. ವಿಷ್ಣುವನ್ನು ಅಲಂಕಾರ ಪ್ರಿಯು ಅಂತಲೂ ಕರೆಯುತ್ತಾರೆ. ಶ್ರೀಹರಿಯು ಪುಷ್ಪಪ್ರಿಯನೆಂದು ಹೇಳಲಾಗುತ್ತದೆ. 

ಪುರಾಣಗಳಲ್ಲಿ ತಿರುಮಲವನ್ನು ಪುಷ್ಪ ಮಂಟಪವೆಂದು ಉಲ್ಲೇಖಿಸಲಾಗಿದೆ. ತಿರುಮಲವು ಹೂವಿನ ಮಂಟಪವಾಗಿರುವುದರಿಂದ, ಶ್ರೀಹರಿ ಹೂವಿನ ಅಲಂಕಾರ ಪ್ರಿಯ, ಭಗವಂತನನ್ನು ನಿಯಮಿತವಾಗಿ ಟನ್ಗಟ್ಟಲೆ ಹೂಗಳಿಂದ ಅಲಂಕರಿಸಿ ಪೂಜಿಸಲ್ಪಡುತ್ತಾನೆ. ಬ್ರಹ್ಮೋತ್ಸವದ ಸಂದರ್ಭದಲ್ಲಿ ನೂರಾರು ಬಗೆಯ ಅಲಂಕಾರಗಳಲ್ಲಿ ನೋಡಲು ಗೋವಿಂದ ಕಾಣಸಿಗುತ್ತಾನೆ... 

ಇದನ್ನೂ ಓದಿ:ಲಾಲ್ ಕೃಷ್ಣ ಅಡ್ವಾಣಿಯವರ ಆರೋಗ್ಯ ಹೇಗಿದೆ..?

ತಿರುಮಲದಲ್ಲಿ ಹಾಕುವ ಪ್ರತಿಯೊಂದು ಹೂವು ಶ್ರೀ ಮನ್ನಾ ನಾರಾಯಣ ಮೀಸಲಾಗಿದೆ ಎಂದು ಜನರು ಮತ್ತು ಭಕ್ತರು ನಂಬುತ್ತಾರೆ. ಅದಕ್ಕಾಗಿಯೇ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಭಗವಂತನ ದರ್ಶನಕ್ಕೆ ತೆರಳುವ ಭಕ್ತರು ಹೂವುಗಳನ್ನು ಮುಡಿಯಬಾರದು ಎಂಬ ನಿಯಮವನ್ನು ಜಾರಿಗೊಳಿಸಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News