Viral Video: ಭಾರತದಲ್ಲಿ ಮದುವೆಯ ಸಂಪ್ರದಾಯ ತುಂಬಾ ವಿಶಿಷ್ಟವಾಗಿರುತ್ತವೆ. ಮದುವೆಗೂ ಮುನ್ನ ವಧು ವರರ ಕಡೆಯ ಜನ ಪರಸ್ಪರ ಬಂದು ಹುಡುಗ ಹುಡುಗಿ ಮದುವೆಗೆ ಒಪ್ಪಿಗೆ ಕೊಡುತ್ತಾರೆ. ಮದುವೆಗೆ ಸಂಬಂಧಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ವಿಡಿಯೋ ಭಾರಿ ವೈರಲ್ (Trending Video) ಆಗುತ್ತಿದೆ. ಈ ವೀಡಿಯೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ ಹುಡುಗನತ್ತ ನೋಡಿ ತುಂಟತನದಿಂದ ಕಣ್ಣು ಹೊಡೆಯುವುದನ್ನು ನೀವು ನೋಡಬಹುದು. ಇಬ್ಬರೂ ಒಬ್ಬರನ್ನೊಬ್ಬರು ನೋಡಿ ತುಂಬಾ ನಾಚಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: Drone ಹಾರಿಸುತ್ತಿರುವ ಚಿಂಪಾಂಜಿಯನ್ನು ಎಲ್ಲಾದರೂ ನೋಡಿದ್ದೀರಾ?


ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೊದಲು ಹುಡುಗ ಹುಡುಗಿಯತ್ತ ನೋಡುತ್ತಾನೆ. ಇದೆ ವೇಳೆ ಹುಡುಗಿಯೂ ಕೂಡ ಆತನ ಮೇಲೆ ತುಂಟ ನೋಟ ಬೀರುತ್ತಾಳೆ.  ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ನಗುತ್ತಾರೆ. ಈ ಸಂದರ್ಬಹದಲ್ಲಿ ಹುಡುಗಿ ಕೇವಲ ಹುಡುಗನಿಗೆ ಅರ್ಥವಾಗುವ ರೀತಿಯಲ್ಲಿ ಮುತ್ತು ಕೊಡುತ್ತಾಳೆ ಮತ್ತು ನಂತರ ಕಣ್ಣು ಹೊಡೆಯುವುದನ್ನು ನೀವು ನೋಡಬಹುದು.  ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ (Social Media) ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಇನ್ನೊಂದೆಡೆ ಅನೇಕ ಬಳಕೆದಾರರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ಕೊಡುತ್ತಿದ್ದಾರೆ. ವಿಡಿಯೋ ನೋಡಿದ ಮೇಲೆ ಎಲ್ಲರಿಗೆ ತಮ್ಮ ಹಳೆಯ ದಿನಗಳು ನೆನಪಿಗೆ ಬರುತ್ತಿವೆ. ಇಂತಹ ವೀಡಿಯೊ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ವಿಡಿಯೋ ಹಂಚಿಕೊಂಡು ಬರೆದುಕೊಂಡ ಬಳಕೆದಾರರು , 'ನನಗೆ ಅದು ಎಷ್ಟು ಇಷ್ಟವಾಗಿದೆ ಎಂದರೆ, ಅವರು ಊಹಿಸಲು ಸಾಧ್ಯವಿಲ್ಲ' ಎಂದಿದ್ದಾರೆ. 


ಇದನ್ನೂ ಓದಿ-Viral News: ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿದೆ 'Modi Ka Parivar', ವಿಭಿನ್ನ ಶೈಲಿಯಲ್ಲಿ 'ಮನ್ ಕೀ ಬಾತ್' ಹೇಳಿದ ಬಳಕೆದಾರರು!


ವೀಡಿಯೋ ನೋಡಿದ ಬಳಕೆದಾರರ ಪ್ರತಿಕ್ರಿಯೆ ಹೇಗಿದೆ?
ವೈರಲ್ ಆಗುತ್ತಿರುವ ವಿಡಿಯೋ ಕುರಿತು ಅನೇಕ ಬಳಕೆದಾರರು ತನ್ನ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಮತ್ತೊರ್ವ ಬಳಕೆದಾರರು 'ತುಂಬಾ ಸುಂದರ ವೀಡಿಯೊ.' ಎಂದಿದ್ದಾರೆ. ಮೂರನೇ ಬಳಕೆದಾರ 'ನನಗೆ ನನ್ನ ಮದುವೆಯ ದಿನ ನೆನಪಿಗೆ ಬಂತು' ಎಂದು ಹೇಳಿದ್ದಾರೆ. ಇದೇ ವೇಳೆ ಇನ್ನೊಬ್ಬ ಬಳಕೆದಾರರು 'ಈ ಭಾವನೆ ತುಂಬಾ ಸುಂದರವಾಗಿದೆ.' ಎಂದಿದ್ದಾರೆ. 


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ