Viral Video: ಬೋಳು ತಲೆಯ ವಿಷಯ ಮುಚ್ಚಿಟ್ಟು ಮದುವೆಗೆ ಸಿದ್ಧನಾಗಿದ್ದ ವರನಿಗೆ ಏನಾಯ್ತು ನೋಡಿ!
Viral Wedding Video: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್ ‘Ghar Ke Kalesh`ನಲ್ಲಿ ಅಪ್ಲೋಡ್ ಮಾಡಲಾಗಿದೆ. ವರನು ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ವಧುವಿನ ಮನೆಯವರು ಯಾವುದೇ ಕರುಣೆ ತೋರಿಸಿಲ್ಲ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪುರುಷರಿಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ. ಮದುವೆಯಾಗುವ ಯುವಕನಿಗೆ ಸರ್ಕಾರಿ ನೌಕರಿ, ಆಸ್ತಿ-ಪಾಸ್ತಿ, ನೋಡಲು ಸುಂದರವಾಗಿರಬೇಕು ಜೊತೆಗೆ ತಲೆತುಂಬಾ ಕೂದಲು ಇರಬೇಕು ಹೀಗೆ ಹಲವಾರು ಡಿಮ್ಯಾಂಡ್‍ಗಳಿರುತ್ತವೆ. ‘ಸಾವಿರ ಸುಳ್ಳು ಹೇಳಿ ಮದುವೆ ಮಾಡು’ ಮಾಡಿ ಅನ್ನೋ ಗಾದೆ ಮಾತೇ ಇದೆ. ಅದರಂತೆ ಇಲ್ಲೊಬ್ಬ ತನ್ನ ಬೋಳು ತಲೆಯ ವಿಷಯವನ್ನು ಮುಚ್ಚಿಟ್ಟು ಮದುವೆಯಾಗಲು ಹೋಗಿ ಪಿಕಲಾಟ ಅನುಭವಿಸಿದ್ದಾನೆ.
ಹೌದು, ಬಿಹಾರದ ಗಯಾ ಜಿಲ್ಲೆಯಲ್ಲಿ ಮದುವೆ ಸಮಾರಂಭದಲ್ಲಿ ವರನಿಗೆ ಬೋಳು ತಲೆ ಇದೆ ಎಂಬುದು ಬಯಲಾದ ನಂತರ ಆತನನ್ನು ಮನಬಂದಂತೆ ಥಳಿಸಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವರನಿಗೆ ವಧುವಿನ ಮನೆಯವರು ಥಳಿಸುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ದೃಶ್ಯವನ್ನೂ ನೀವು ನೋಡಬಹುದು. ಕುಳಿತುಕೊಂಡು ಸಮಜಾಯಿಸಿ ನೀಡುತ್ತಿದ್ದ ವರನಿಗೆ ವಧುವಿನ ಕಡೆಯವರು ಮನಬಂದಂತೆ ಥಳಿಸಿದ್ದಾರೆ.
ಇದನ್ನೂ ಓದಿ: Supreme Court ಗೆ ಇಬ್ಬರು ನೂತನ ನ್ಯಾಯಾಧೀಶರ ನೇಮಕ
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಲೈಕ್ ಮತ್ತು ಶೇರ್ ಮಾಡಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ವರನಿಗೆ ಬಂದಿರುವ ಪಜೀತಿ ಕಂಡು ನಕ್ಕಿದ್ದಾರೆ.
ಇದನ್ನೂ ಓದಿ: Odisha Train Mishap: ಬಾಲಾಸೊರ್ ರೈಲು ದುರಂತ ಪ್ರಕರಣ, ರೇಲ್ವೆ ವಿಭಾಗದ 7 ಜನ ಸಿಬ್ಬಂದಿ ಅಮಾನತು
https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK