ನವದೆಹಲಿ: ಬಾಲ್ಯದಲ್ಲಿ, ಎಲ್ಲಾ ಮಕ್ಕಳು ತಮ್ಮ ಹೆತ್ತವರ ಮುಂದೆ ತಮ್ಮ ಒಡಹುಟ್ಟಿದವರ ಬಗ್ಗೆ ಗಾಸಿಪ್ ಕಂಪ್ಲೇಂಟ್ ಮಾಡುವುದನ್ನು ನೀವು ನೋಡಿರಬಹುದು. ಒಡಹುಟ್ಟಿದವರಿಗೆ ಸಂಬಂಧಿಸಿದ ಅನೇಕ ಬಾಲ್ಯದ ಕಥೆಗಳು ಇಂದಿಗೂ ನಮ್ಮನ್ನು ನಗಿಸುತ್ತವೆ. ಅಂದಹುದೇ ಒಂದು ಕ್ಯೂಟ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದನ್ನು ನೋಡಿ ನೀವು ಹೊಟ್ಟೆ ಹಿಡಿದುಕೊಂಡು ನಗುವಿರಿ ಮತ್ತು ನಾವೂ ಕೂಡ ಒಂದಲ್ಲ ಒಂದು ಬಾರಿ ಮಾಡಿದ ಇಂತಹ ಕಂಪ್ಲೇಂಟ್ ಮಾಡಿದ್ದೆವು ಎಂಬುದನ್ನೂ ನೆನಪಿಸಿಕೊಳ್ಳುವಿರಿ. ವೀಡಿಯೊದಲ್ಲಿ, ಚಿಕ್ಕ ಮಗು ತನ್ನ ಸಹೋದರನ ಗುಟ್ಟನ್ನು ಟೀಚರ್ ಬಳಿ ಬಿಚ್ಚಿಡುವುದನ್ನು ನೀವು ನೋಡಬಹುದು.(Viral News In Kannada)


COMMERCIAL BREAK
SCROLL TO CONTINUE READING

ನೆಲದ ಮೇಲೆ ಕುಳಿತು ಸಂತೋಷದಿಂದ ಓದುತ್ತಿರುವ 4-5 ವರ್ಷದ ಮಗುವಿಗೆ ಶಿಕ್ಷಕರು ವಿಶಿಷ್ಟ ಭಾಷೆಯಲ್ಲಿ (ಅವಧಿ ಭಾಷೆ) ಪ್ರಶ್ನಿಸುತ್ತಾರೆ - ನಿನ್ನ ಅಣ್ಣ ಏಕೆ ಓದುವುದಿಲ್ಲ? ಅದಕ್ಕೆ ಮಗು ತಾನು ಕುಳಿತಿದ್ದ ಜಾಗದಲ್ಲಿಯೇ ಎದ್ದು ನಿಂತು ಭಾರಿ ಮುಗ್ಧತೆಯಿಂದ ಉತ್ತರಿಸುತ್ತದೆ. 


ಟೀಚರ್ ಪ್ರಶ್ನೆಗೆ ತುಂಬಾ ಮುಗ್ಧತೆಯಿಂದ  ಉತ್ತರಿಸಿದ ಮಗು, ' ಬತಾಯೇ... ಯೇ ಫಟಬಾಲ್ ಖೇಲತ್ ಕರೆ... ಸಚ್ ಬತಾವು... ಹಾಂ ಸಚ್ಚಿ.. ಘೂಮತೌ ಕರೆ..(ಹೇಳಲಾ... ಈತ ಫಟಬಾಲ್ ಆಡ್ತಾನೆ.. ಹಾಂ ನಿಜವಾಗಲೂ ಸುತ್ತಾಡುತ್ತಿರುತ್ತಾನೆ)' ಎನ್ನುತ್ತದೆ. ಬಳಿಕ ನೀನೇನು ಮಾಡ್ತೀಯಾ? ಅಂತಾ ಟೀಚರ್ ಮರು ಪ್ರಶ್ನಿಸುತ್ತಾರೆ. ಅದಕ್ಕೆ ಸ್ವಲ್ಪ ಗಂಭೀರತೆಯಿಂದ ಆಲೋಚಿಸಿ ಉತ್ತರ ನೀಡುವ ಮಗು 'ಹಮ್ ರಾತಭರ್ ಮೇ ದೀದಿ ಸಂಗ್ ಯಹಾ ಪಢತ್ ಕರೆ... ದೀದಿ ಸಂಗ್... ತಾನ್ಯಾ ದೀದಿ ಸಂಗ್ (ನಾನು ರಾತ್ರಿಯಿಡಿ ಅಕ್ಕನ ಜೊತೆಗೆ ಇಲ್ಲಿ ಅಭ್ಯಾಸ ಮಾಡುತ್ತೇನೆ.. ಅಕ್ಕನ ಜೊತೆ... ತಾನ್ಯಾಕ್ಕನ ಜೊತೆಗೆ)' ಎಂದು ಹೇಳುತ್ತದೆ. 


ಮಗು ತುಂಬಾ ಪ್ರೀತಿಯಿಂದ ಮತ್ತು ಮುಗ್ಧತೆಯಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇದನ್ನು ನೋಡಿ ನೀವೂ ಕೂಡ ಈ ಮಗು ಎಷ್ಟೊಂದು ಮುದ್ದಾಗಿದೆ ಎನ್ನುವಿರಿ. ಈ ವಿಡಿಯೋಗೆ ಸಾರ್ವಜನಿಕರು ಕೂಡ ಸಖತ್ತಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದನ್ನು ಇನ್ಸ್ಟಾಗ್ರಾಮ್ ಹ್ಯಾಂಡಲ್ @navneetjha9916 ಮೂಲಕ ಹಂಚಿಕೊಳ್ಳಲಾಗಿದೆ.


ಸಾರ್ವಜನಿಕರು ಭಾರೀ ಕಾಮೆಂಟ್ ಮಾಡುತ್ತಿದ್ದಾರೆ
ಈ ಬಗ್ಗೆ ಕಾಮೆಂಟ್ ಮಾಡುತ್ತಿರುವ  ಅನೇಕ ಬಳಕೆದಾರರು ಫುಟ್ಬಾಲ್ ಅನ್ನು 'ಫಟ್ಬಾಲ್' ಎಂದು ಕರೆಯುವ ಮಗುವಿನ ಪರಿಯನ್ನು ತುಂಬಾ ಹೊಗಳುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಓರ್ವ ಬಳಕೆದಾರ 'ಕಿರಿಯ ಸಹೋದರ ಕೂಡ ತನ್ನ ಸ್ಥಾನಮಾನ ಎಂಬುದನ್ನು ತೋರಿಸಿ ಕೊಟ್ಟಿದ್ದಾನೆ' ಎಂದಿದ್ದಾರೆ.  . ಇನ್ನೊಬ್ಬ ಬಳಕೆದಾರರು  'ದುಷ್ಮನ್ ಮಿಲೇ ಬಹೋತೆ...ಭಾಯಿ ನಾ ಮಿಲೇ ಚುಗಲ್ ಛೋಟೆ (ಶತ್ರುವಿನ ರೂಪದಲ್ಲಿ ಸಿಕ್ಕ ಸಹೋದರ.. ಸಹೋದರ ಅಲ್ಲ... ಚಾಡಿಕೋರ ತುಂಟ ಸಿಕ್ಕಿದ್ದಾನೆ) ಎಂದಿದ್ದಾರೆ. ಈ ಕುರಿತು ಬರೆದುಕೊಂಡ ಮತ್ತೊರ್ವ ವ್ಯಕ್ತಿ 'ಬಾಲ್ಯತನ ನಮ್ಮ ಜೀವನದ ಒಂದು ಅವಿಸ್ಮರಣೀಯ ಭಾಗವಾಗಿದ್ದು, ಅದನ್ನು ನೆನಪಿಸಿಕೊಂಡು ಜೀವನವಿಡೀ ಆನಂದದಿಂದ ಕಳೆಯಬಹುದು' ಎಂದಿದ್ದಾರೆ. 


ಇದನ್ನೂ ಓದಿ-Viral Video: ಯಾರೀ ಸೈಕೋ ಕವಿ, ಶ್ರೀರಾಮನ ಕುರಿತು ಆತ ಬರೆದ ಕವಿತೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಕಿಯಂತೆ ಪಸರಿಸುತ್ತಿದೆ!


ಟ್ರೆಂಡಿಂಗ್ ವೀಡಿಯೊ
ಇದುವರೆಗೆ 19 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ವೀಡಿಯೋಗೆ ಜನ ಪ್ರೀತಿಯ ಸುರಿಮಳೆಗೈಯ್ಯುತ್ತಿದ್ದಾರೆ ಮತ್ತು ವಿಡಿಯೋ ಟ್ರೆಂಡ್ ಆಗುತ್ತಿದೆ. ಈ ವೀಡಿಯೊದ ಬಗ್ಗೆ ನಿಮ್ಮ ಅನಿಸಿಕೆ ಎಂದು? ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.


ಇದನ್ನೂ ಓದಿ-Viral Video: ಸಹೋದರನ ಕೂದಲು ಒಣಗಿಸುತ್ತಾ ಫ್ರಾಂಕ್ ಮಾಡಿದ ಯುವತಿ, ನಂತರ ನಡೆದಿದ್ದು ಎದೆ ಝಲ್ ಎನ್ನಿಸುವಂತಿದೆ!


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ 


ಇದನ್ನೂ ನೋಡಿ-



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ