ಹೈದರಾಬಾದ್: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ಪೊಲೀಸ್ ಕಾನ್ಸ್‍ಟೇಬಲ್ ಸಾವನ್ನಪ್ಪಿದ್ದಾರೆ. ಮೃತ ಪೇದೆಯನ್ನು ವಿಶಾಲ್ ಎಂದು ಗುರುತಿಸಲಾಗಿದೆ. 2020ರ ಬ್ಯಾಚ್‍ನ ಪೊಲೀಸ್ ಕಾನ್ಸ್‍ಟೇಬಲ್ ಆಗಿದ್ದ ವಿಶಾಲ್ ತೆಲಂಗಾಣದ ಆಸಿಫ್ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ.


COMMERCIAL BREAK
SCROLL TO CONTINUE READING

ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ವಿಶಾಲ್‍ಗೆ ಹಠಾತ್ ಹೃದಯಾಘಾತವಾಗಿದೆ. ಕುಸಿದುಬಿದ್ದು ಆತ ಸಾವನ್ನಪ್ಪಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮೊದಲು ನೆಲದ ಮೇಲೆ ಕೆಲವು ಪುಷ್-ಅಪ್‌ಗಳನ್ನು ಮಾಡುವ ವಿಶಾಲ್ ಇದ್ದಕ್ಕಿದ್ದಂತೆ ನೆಲದ ಮೇಲೆ ಬಿದ್ದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


Jayalalitha Birth Anniversary: ಜನತೆಯ ಒಲವಿನ ಅಮ್ಮನ ಬಗೆಗಿನ 11 ಕುತೂಹಲಕಾರಿ ಸಂಗತಿಗಳು


24 ವರ್ಷದ ಕಾನ್‌ಸ್ಟೆಬಲ್ ವಿಶಾಲ್ ಸಿಕಂದ್ರಾಬಾದ್‌ನ ಬೋವೆನ್‌ಪಲ್ಲಿ ನಿವಾಸಿಯಾಗಿದ್ದ. ಫಿಟ್‍ನೆಸ್‍ಗಾಗಿ ಜಿಮ್‍ ಸೇರಿದ್ದ ಆತ ಪ್ರತಿದಿನ ಚೆನ್ನಾಗಿಯೇ ವರ್ಕೌಟ್ ಮಾಡುತ್ತಿದ್ದನಂತೆ. ಆದರೆ ಆತನಿಗೆ ಹಠಾತ್ ಹೃದಯಾಘಾತವಾಗಿದೆ. ಆತ ನೆಲಕ್ಕೆ ಕುಸಿದುಬೀಳುತ್ತಿದ್ದಂತೆಯೇ ಜಿಮ್‍ನಲ್ಲಿದ್ದ ಇತರರು ಆತನ ಸಹಾಯಕ್ಕೆ ಮುಂದಾಗಿದ್ದಾರೆ. ಏನಾಯಿತು ಅನ್ನೋವಷ್ಟರಲ್ಲಿ ವಿಶಾಲ್ ಪ್ರಾಣಪಕ್ಷಿ ಹಾರಿಹೋಗಿದೆ. 


ಗುರುವಾರ ಅಂದರೆ ಫೆಬ್ರವರಿ 23ರಂದು ಈ ಘಟನೆ ನಡೆದಿದೆ. @ArbaazTheGreat1 ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಆಘಾತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  


Business Idea: ಈ ವ್ಯವಹಾರ ಪ್ರಾರಂಭಿಸಿದ್ರೆ ಪ್ರತಿ ತಿಂಗಳು ಲಕ್ಷ ಲಕ್ಷ ಗಳಿಸಬಹುದು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.