Viral Video: ಸೀಲಿಂಗ್ ಫ್ಯಾನ್‌ನಲ್ಲಿ ಹೆಡೆ ಎತ್ತಿ ರೌಂಡ್ ಹಾಕಿದ ನಾಗರ ಹಾವು!
King Cobra Hanging in Ceiling Fan: 5 ದಿನಗಳ ಹಿಂದಷ್ಟೇ chandrasekaran6102 ಎಂಬ Instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ 2 ಮಿಲಿಯನ್ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಅನೇಕರು ಶೇರ್ ಕೂಡ ಮಾಡಿದ್ದಾರೆ.
ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್ ಆಗುತ್ತವೆ. ಈ ಪೈಕಿ ಕೆಲವು ವಿಡಿಯೋಗಳು ಹಾಸ್ಯದ ಕಚಗುಳಿ ನೀಡಿದ್ರೆ, ಇನ್ನೂ ಕೆಲವು ವಿಡಿಯೋಗಳು ಭಯಾನಕವಾಗಿರುತ್ತವೆ. ಅಪಾಯಕಾರಿ ಪ್ರಾಣಿಗಳು ಮತ್ತು ವಿಷಕಾರಿ ಸರಿಸೃಪಗಳ ವಿಡಿಯೋಗಳು ಸಹ ಜನರ ಗಮನ ಸೆಳೆಯುತ್ತವೆ. ಇದಕ್ಕೆ ನಿದರ್ಶನವೆಂಬಂತೆ ಇಂಟರ್ನೆಟ್‌ನಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮನೆಯ ಸೀಲಿಂಗ್ ಫ್ಯಾನ್‌ನಲ್ಲಿ ನಾಗರ ಹಾವೊಂದು ಸುರಳಿ ಸುತ್ತಿ ಕುಳಿತುಕೊಂಡಿದೆ. ವರ್ಕ್ ಆಗದ ಹಳೆಯ ಸೀಲಿಂಗ್ ಫ್ಯಾನ್ ಮೇಲೆ ಹಾವು ಹೋಗಿದೆ. ಆ ಕಡೆ ಈ ಕಡೆ ಸರಿದಾಡಿದ ಪರಿಣಾಮ ಸೀಲಿಂಗ್ ಫ್ಯಾನ್ ತಿರುಗಲು ಪ್ರಾರಂಭಿಸಿದೆ. ಈ ವೇಳೆ ಹಾವು ತನ್ನ ಹೆಡೆ ಎತ್ತಿ ಸುಮ್ಮನೆ ಕುಳಿತುಕೊಂಡಿದೆ.
ಇದನ್ನೂ ಓದಿ: ಮಧ್ಯಂತರ ಬಜೆಟ್ 2024: ರಕ್ಷಣಾ ಸಾಮರ್ಥ್ಯ ಮತ್ತು ಮೂಲಭೂತ ಸೌಕರ್ಯಗಳ ವರ್ಧನೆ
ನಾಗರ ಹಾವು ಚಲಿಸಿದ ಪರಿಣಾಮ ಫ್ಯಾನಿಗೆ ಅದರ ತೂಕ ಹೆಚ್ಚಾಗಿ ತಿರುಗಲು ಪ್ರಾರಂಭಿಸಿದೆ. ಒಂದು ಹಂತದಲ್ಲಿ ಕಿಂಗ್ ಕೋಬ್ರಾದ ತೂಕಕ್ಕೆ ಫ್ಯಾನ್ ಬೀಳುವಂತಿತ್ತು. 5 ದಿನಗಳ ಹಿಂದಷ್ಟೇ chandrasekaran6102 ಎಂಬ Instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ 2 ಮಿಲಿಯನ್ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಅನೇಕರು ಶೇರ್ ಕೂಡ ಮಾಡಿದ್ದಾರೆ.
ವಿಡಿಯೋ ನೋಡಿದ ಬಹುತೇಕರು ನಾಗರ ಹಾವು ಕಂಡು ಹೌಹಾರಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ. ಇನ್ನೂ ಕೆಲವರು ನಾಗಪ್ಪನಿಗೆ ಭಕ್ತಿಯಿಂದ ನಮಸ್ಕರಿಸಿದ್ದಾರೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ಮುನ್ನವೇ ಮತ್ತೊಬ್ಬ ಸೂಪರ್ ಸ್ಟಾರ್ ರಾಜಕೀಯಕ್ಕೆ ಎಂಟ್ರಿ...!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.