ಬೆಂಗಳೂರು: ಸಾಮಾನ್ಯವಾಗಿ ಗೂಳಿಯನ್ನು ಅತ್ಯಂತ ಶಕ್ತಿಶಾಲಿ ಪ್ರಾಣಿಗಳಲ್ಲಿ ಒಂದು ಎಂದು ಭಾವಿಸಲಾಗುತ್ತದೆ. ಒಂದೊಮ್ಮೆ ಗೂಳಿಯ ತಲೆ ಕೆಟ್ಟರೆ ಅದು ಏನೆಲ್ಲಾ ಅನಾಹುತ ಸೃಷ್ಟಿಸುತ್ತದೆ ಎಂಬ ಸಂಗತಿ ನಮ್ಮೆಲ್ಲರಿಗೂ ತಿಳಿದೇ ಇದೆ. ಕೋಪದಲ್ಲಿ ಅದು ಮನೆಗಳ ಗೋಡೆಯನ್ನು ಕೂಡ ಧ್ವಂಸಗೊಳಿಸಬಲ್ಲದು. ಒಂದೊಮ್ಮೆ ಅದಕ್ಕೆ ಮನುಷ್ಯ ಮುಖಾಮುಖಿಯಾದರೆ, ಅದು ವ್ಯಕ್ತಿಯನ್ನು ಹಲವಾರು ಅಡಿ ಗಾಳಿಯಲ್ಲಿ ತೂರುವ ಸಾಮರ್ಥ್ಯ ಹೊಂದಿರುತ್ತದೆ. ದೊಡ್ಡ ದೊಡ್ಡ ಪ್ರಾಣಿಗಳು ಕೂಡ ಗೂಳಿಯನ್ನು ಎದುರಿಸಲು ಹಿಂದೇಟು ಹಾಕುತ್ತವೆ. ಆದರೆ, ಇಂದು ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋದಲ್ಲಿ ಒಂದು ಪುಟಾಣಿ ಮೇಕೆ ಗೂಳಿಗೆ ಡಿಕ್ಕಿ ಹೊಡೆದು ಹಿಮ್ಮೆಟ್ಟಿಸಿದೆ ಎಂದರೆ ಒಂದು ಕ್ಷಣ ನಿಮಗೂ ಕೂಡ ನಂಬಿಕೆಯಾಗದಿರಬಹುದು. ಆದರೆ, ಇದು ನಿಜ. ಇಂತಹದೊಂದು ನಿಬ್ಬೆರಗಾಗಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮೇಕೆ ಗೂಳಿಯನ್ನು ಹಿಮ್ಮೆಟ್ಟಿಸುವಲ್ಲಿ ಮಾತ್ರ ಯಶಸ್ವಿಯಾಗದೆ, ಗೂಳಿಯನ್ನು ಅಲ್ಲಿಂದ ಕಾಲ್ಕೀತ್ತುವಂತೆ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಇದೇ ನೋಡಿ ವಿಶ್ವದ ಅತ್ಯಂತ ಸುಲಭ ನೌಕರಿ, ಕೆಲಸವಿಲ್ಲದೆ ಕುಳಿತುಕೊಳ್ಳಲು ಎಷ್ಟು ವೇತನ ಸಿಗುತ್ತೆ ಗೊತ್ತಾ?

ಗೂಳಿಗೆ ಸವಾಲೇಸಗಿದ ಮೇಕೆ
ಗೂಳಿ ಹಾಗೂ ಮೇಕೆಯ ನಿಬ್ಬೆರಗಾಗಿಸುವ ವಿಡಿಯೋ ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋಗೇ ಸಾವಿರಾರು ಲಕ್ಷಾಂತರ ವೀಕ್ಷಣೆಗಳು ಹಾಗೂ ಲೈಕ್ ಗಳು ಬಂದಿವೆ. ನೆಟ್ಟಿಗರು ಕೂಡ ವಿಡಿಯೋಗೇ ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಗೂಳಿಯೊಂದು ರಸ್ತೆ ಪಕ್ಕದಲ್ಲಿ ನಿಂತುಕೊಂಡಿದೆ. ಆಗ ಅಲ್ಲಿಗೆ ಮೇಕೆಯೊಂದು ಆಗಮಿಸುತ್ತದೆ ಮತ್ತು ಗೂಳಿಗೆ ಕಾಟ ಕೊಡಲು ಆರಂಭಿಸುತ್ತದೆ. ಮೊದಮೊದಲಿಗೆ ಗೂಳಿ ಮೇಕೆಯನ್ನು ನಿರ್ಲಕ್ಷಿಸುತ್ತದೆ. ಆದರೆ ಮೇಕೆ ಮಾತ್ರ ಮತ್ತೊಮ್ಮೆ ಅದರ ಮುಂದೆ ಬಂದು ತನ್ನ ತಲೆಯಿಂದ ಗೂಳಿಯ ತಲೆಗೆ ಡಿಕ್ಕಿ ಹೊಡೆಯುತ್ತದೆ. ಈಗ ಅದರ ದುಸ್ಸಾಹಸ ಕಂಡು ಗೂಳಿ ಕೆರಳುತ್ತದೆ ಮತ್ತು ಹೋರಾಟದ ಮೂಡ್ ಗೆ ಜಾರುತ್ತದೆ. ಅದು ತನ್ನ ಕೊಂಬುಗಳನ್ನು ಕೆಳಗೆ ಮಾಡಿ ಜೋರಾಗಿ ತನ್ನ ತಲೆಯಿಂದ ಮೇಕೆಗೆ ಗುದ್ದುತ್ತದೆ. 



ಇದನ್ನೂ ಓದಿ-Viral Video: ದೆಹಲಿ ಮೆಟ್ರೊದಿಂದ ಯುವಕ-ಯುವತಿಯ ಮತ್ತೊಂದು ಅಸಹ್ಯ ಹುಟ್ಟಿಸುವಂತ ವಿಡಿಯೋ ವೈರಲ್!

ಗೂಳಿಯನ್ನು ಹಿಮ್ಮೆಟ್ಟಿಸಿದ ಮೇಕೆ
ಇದಾದ ಬಳಿಕ ಫ್ರೇಮ್ ನಲ್ಲಿ ಕಾಣಿಸಿಕೊಳ್ಳುವುದು ಮಾತ್ರ ಒಂದು ರೋಮಾಂಚಕ ಯುದ್ಧ. ಇದರಲ್ಲಿ ಏಟು ತಿಂದ ಮೇಕೆ ಮತ್ತೊಮ್ಮೆ ಮೈದಾನಕ್ಕೆ ಧುಮುಕುತ್ತದೆ ಮತ್ತು ತನ್ನ ಸಂಪೂರ್ಣ ಶಕ್ತಿ ಬಳಸಿ ಗೂಳಿಗೆ ಡಿಕ್ಕಿ ಹೊಡೆಯುತ್ತದೆ. ಆದರೆ, ಗೂಳಿ ಮಾತ್ರ ಒಂದಿಂಚು ಕದಲುವುದಿಲ್ಲ. ಆದರೆ, ಮೇಕೆ ಮಾತ್ರ ಪಟ್ಟು ಬಿಡದೆ ತನ್ನ ಚಿಕ್ಕ ಚಿಕ್ಕ ಕೊಂಬುಗಳಿಂದ ಗೂಳಿಗೆ ತಿವಿಯುತ್ತಲೇ ಹೋಗುತ್ತದೆ. ಈ ಕಾದಾಟದಲ್ಲಿ ಹಲವು ಬಾರಿ ನೆಲಕ್ಕೆ ಬಿದ್ದರೂ ಕೂಡ ಮೇಕೆ ಧೈರ್ಯ ಬಿಡದೆ ಗೂಳಿಯ ಮುಂದೆ ಮತ್ತೆ ಮತ್ತೆ ಪ್ರತ್ಯಕ್ಷವಾಗಿ ಕಾದಾಡುತ್ತದೆ ಮತ್ತು ಗೂಳಿಯನ್ನು ಹಲವಾರು ಬಾರಿ ಹಿಮ್ಮೆಟ್ಟಿಸುತ್ತದೆ. ಇಷ್ಟಕ್ಕೆ ತೃಪ್ತಿಪಡದ ಮೇಕೆಯ ಧೈರ್ಯವನ್ನು ಕಂಡು ಗೂಳಿ ಕೊನೆಗೆ ಅಲ್ಲಿಂದ ಕಾಲ್ಕೀತ್ತುತ್ತದೆ. MOTIVATION BONDIN ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ