Python Viral Video: ಪ್ರತಿದಿನ ಸೋಷಿಯಲ್‌ ಮೀಡಿಯಾದಲ್ಲಿ ಸಾವಿರಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಈ ಪೈಕಿ ಪ್ರಾಣಿ-ಪಕ್ಷಿಗಳ ವಿಡಿಯೋಗಳು ಜನರ ಗಮನ ಸೆಳೆಯುತ್ತವೆ. ಕೆಲವು ವಿಡಿಯೋಗಳು ಜನರ ಮೊಗದಲ್ಲಿ ನಗು ತರಿಸಿದರೆ, ಇನ್ನೂ ಕೆಲ ವಿಡಿಯೋಗಳು ಭಯ ಮೂಡಿಸುತ್ತವೆ. ಹಾವುಗಳ ವಿಡಿಯೋಗಳು ಸಹ ಜನರ ಗಮನ ಸೆಳೆಯುತ್ತವೆ. ವಿಷಕಾರಿ ಸರ್ಪಗಳು, ಹೆಬ್ಬಾವುಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತವೆ. 


COMMERCIAL BREAK
SCROLL TO CONTINUE READING

ಬೃಹತ್‌ ಹೆಬ್ಬಾವಿನೊಂದಿಗೆ ವ್ಯಕ್ತಿಯೊಬ್ಬ ಸರಸವಾಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ವಿಡಿಯೋವೊಂದು ಸಖತ್‌ ವೈರಲ್‌ ಆಗುತ್ತಿದೆ. ಈ ಘಟನೆಯ ವೇಳೆ ಸ್ಥಳದಲ್ಲಿದ್ದ ಜನರು ಭಯಭೀತರಾಗಿದ್ದನ್ನು ದೃಶ್ಯಾವಳಿಗಳು ತೋರಿಸುತ್ತವೆ. ವೈರಲ್‌ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಬ್ಬಾವನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಹೆಬ್ಬಾವು ಆತನಿಂದ ಬಿಡಿಸಿಕೊಂಡು ಎಸ್ಕೇಪ್‌ ಆಗಲು ಪ್ರಯತ್ನಿಸಿದೆ. ಈ ವೇಳೆ ಅದನ್ನು ಬಿಗಿಯಾಗಿ ಹಿಡಿಯಲು ಆ ವ್ಯಕ್ತಿ ಪ್ರಯತ್ನಿಸಿದ್ದಾನೆ. 


ಇದನ್ನೂ ಓದಿ: 58 ಜನರ ಜೊತೆ S*X.. 71 ಕೋಟಿ ಲಂಚ.. ಬ್ಯಾಗ್‌ನಲ್ಲಿ ಕಾಂಡೋಮ್‌ ರಾಶಿ..! ʼಸುಂದರಿ ರಾಜಕಾರಣಿʼ ರಹಸ್ಯ ಬಯಲು


ಹೆಬ್ಬಾವು ನೇರವಾಗಿ ವ್ಯಕ್ತಿಯ ಮುಖಕ್ಕೆ ಕಚ್ಚಲು ಪ್ರಯತ್ನಿಸಿದೆ. ಈ ವೇಳೆ ಆತ ಅದರಿಂದ ತಪ್ಪಿಸಿಕೊಂಡು ಹೆಬ್ಬಾವಿನ ಬಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ಜೋರಾಗಿ ಚಪ್ಪಾಳೆ ತಟ್ಟಿ ಆ ವ್ಯಕ್ತಿಯನ್ನು ಹುರಿದುಂಬಿಸಿದ್ದಾರೆ. @visualfeastwang ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಾವಿರಾರು ಜನರು ವೀಕ್ಷಿಸಿದ್ದಾರೆ. ಅನೇಕರು ಹಾವಿನೊಂದಿಗೆ ಸರಸವಾಡುವ ಮುನ್ನ ತುಂಬಾ ಎಚ್ಚರಿಕೆ ವಹಿಸಬೇಕು ಅಂತಾ ಕಾಮೆಂಟ್‌ ಮಾಡಿದ್ದಾರೆ. 


ಇದನ್ನೂ ಓದಿ: ವರ ಬೇಕಾಗಿದ್ದಾನೆ..! ಮದುವೆಯಾಗದ ನಿಮ್ಮ ಗೆಳೆಯನಿಗೆ ತಿಳಿಸಿ ಇಲ್ಲೋಂದು ಬಂಪರ್‌ ಆಫರ್‌ ಇದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.