Viral Video: ಅಮೀರ್ ಖಾನ್ ಅಭಿನಯದ 3 ಈಡಿಯಟ್ಸ್‌ನ ಆ ದೃಶ್ಯವನ್ನು ನಿಮಗೂ ನೆನಪಿರಬಹುದು, ಅದರಲ್ಲಿ ಅಮೀರ್ ಮತ್ತು ಕರೀನಾ ಕಪೂರ್ ಅನಾರೋಗ್ಯದಿಂದ  ಅಂಕಲ್ ನನ್ನು ತಮ್ಮ ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಮಧ್ಯಪ್ರದೇಶದ ಆಸ್ಪತ್ರೆಯೊಂದರ ಸಿಬ್ಬಂದಿ ಕೂಡ ಇದೇ ರೀತಿ ಮಾಡಿದ್ದಾರೆ. ಆ ವ್ಯಕ್ತಿ ನಿರ್ಭಿಡವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಬೈಕಿನಲ್ಲಿ ತನ್ನ ಅಸ್ವಸ್ಥ ಅಜ್ಜನನ್ನು ಹೊತ್ತುಕೊಂಡು ಪ್ರವೇಶಿಸುತ್ತಾನೆ ಮತ್ತು ನಿಲ್ಲಿಸಲು ಯತ್ನಿಸಿದಾಗ, ತಾನು ಆಸ್ಪತ್ರೆಯ ಸಿಬ್ಬಂದಿ ಎಂದು ಪರಿಚಯಿಸಿಕೊಳ್ಳುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. (Viral News In Kannada)


COMMERCIAL BREAK
SCROLL TO CONTINUE READING

ವೀಡಿಯೊದಲ್ಲಿ ನೀಡಲಾದ ಶೀರ್ಷಿಕೆಯ ಪ್ರಕಾರ, ಸತ್ನಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾ ಆಸ್ಪತ್ರೆಯಲ್ಲಿ, ಒಬ್ಬ ವ್ಯಕ್ತಿಯು ತನ್ನ ಅಸ್ವಸ್ಥ ಅಜ್ಜನನ್ನು ಬೈಕ್‌ನಲ್ಲಿ ಹೊತ್ತುಕೊಂಡು ತುರ್ತು ವಿಭಾಗಕ್ಕೆ ನಿರ್ಭಿಡವಾಗಿ ಪ್ರವೇಶಿಸುತ್ತಾನೆ. ಜನ ಆತನನ್ನು ತಡೆದು ‘ನೀನು ಹೀಗೆ ಮಾಡಿದರೆ...’ ಎನ್ನುತ್ತಿದ್ದಾರೆ.  ಈ ವ್ಯಕ್ತಿ ಆಸ್ಪತ್ರೆಯ ಸಿಬ್ಬಂಧಿ ಎನ್ನಲಾಗಿದೆ. ಈತ ಆಸ್ಪತ್ರೆಯ ಹೊರಗುತ್ತಿಗೆ ನೌಕರನಾಗಿದ್ದು, ಆಸ್ಪತ್ರೆಯಲ್ಲಿ ರೋಗಿಗಳ ದಾಖಲೆಗಳನ್ನು ನಿರ್ವಹಿಸುವ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ವಿಡಿಯೋದಲ್ಲಿ ಸೆರೆಯಾಗಿರುವ ಈ ಘಟನೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ-Viral Video: ವಿಮಾನದಲ್ಲಿ ಭಾರತದ ರಾಷ್ಟ್ರ ಗೀತೆ ಹಾಡಿದ ವಿದೇಶಿ ಪ್ರವಾಸಿಗರು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್


ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸಿಕ್ಕಿದೆ
ವೀಡಿಯೋ ವೈರಲ್ ಆಗುತ್ತಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಕೆಲವರು ಬೆಂಬಲ ವ್ಯಕ್ತಪಡಿಸಿದರೆ, ಕೆಲವರು ಟೀಕೆ ಮಾಡುತ್ತಿದ್ದಾರೆ. ಕಾಮೆಂಟ್ ಈ ಕುರಿತು ಕಾಮೆಂಟ್ ಮಾಡಿದ ಓರ್ವ ಬಳಕೆದಾರ, 'ತುಂಬಾ ಒಳ್ಳೆಯ ಕೆಲಸ' ಎಂದು ಬರೆದಿದ್ದಾರೆ. ಮತ್ತೊಬ್ಬರು , 'ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡದ ವಾರ್ಡ್ ಬಾಯ್‌ಗಳು ಮತ್ತು ಇತರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕು ಮತ್ತು ಕ್ರಮ ತೆಗೆದುಕೊಳ್ಳಬೇಕು' ಎಂದಿದ್ದಾರೆ. ಮೂರನೆಯವರು , 'ಒಳ್ಳೆಯದು, ಯಾವುದೇ ಪ್ರೋಟೋಕಾಲ್‌ಗಿಂತ ಅಜ್ಜನ ಜೀವನ ಮುಖ್ಯವಾಗಿದೆ ಎಂದಿದ್ದಾರೆ. 


ಇದನ್ನೂ ಓದಿ-Viral Video: ನೀರಿನಲ್ಲಿ ತೇಲಾಡುವ ಬಿಲ್ಡಿಂಗ್, ಅಪಾರ್ಟ್ಮೆಂಟ್ ಒಳಗಡೆಯಿಂದ ಹಾದುಹೋಗುವ ರೈಲು, ತಲೆ ಗಿರ್ರ್ ಅನ್ನುವಂತಿದೆ ಚೀನಾದ ಈ ನಗರ!


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ