Shocking: ಪಂಜರದಲ್ಲಿರುವ ಸಿಂಹದ ಜೊತೆಗೆ ಚೆಲ್ಲಾಟ, ನೋಡುತ್ತಲೇ ನಡೆದ್ಹೋಯ್ತು ಈ ಘಟನೆ
Lion Chewed Man Finger: ಕಾಡಿನ ರಾಜ ಸಿಂಹದ ಜೊತೆಗಿನ ಚೆಲ್ಲಾಟ ವ್ಯಕ್ತಿಯೊಬ್ಬನಿಗೆ ದುಬಾರಿ ಪರಿಣಮಿಸಿದ್ದು, ವ್ಯಕ್ತಿ ತನ್ನ ಜೀವನದಲ್ಲಿಯೇ ಮರೆಯಲಾರದ ಪೆಟ್ಟು ತಿಂದಿದ್ದಾನೆ. ಈ ವಿಡಿಯೋ ನಡುಕ ಹುಟ್ಟಿಸುವಂತಿದೆ. ಜಮೈಕಾದ ಮೃಗಾಲಯದ ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
Lion Chewed Man Finger: ಕ್ಷನಾರ್ಧದಲ್ಲಿ ತನ್ನ ಬೇಟೆಯನ್ನು ಸೀಳಿಹಾಕುವ ಕಾಡು ಪ್ರಾಣಿಗಳಲ್ಲಿ ಸಿಂಹವೂ ಕೂಡ ಒಂದು. ಕಾಡಿಗೆ ಹಾಗೂ ಮೃಗಾಲಯಕ್ಕೆ ಭೇಟಿ ನೀಡುವವರನ್ನು ಸಿಂಹದಿಂದ ಅಂತರ ಕಾಯ್ದುಕೊಳ್ಳಲು ಸಲಹೆ ನೀಡಲಾಗುತ್ತದೆ. ಪಂಜರದಲ್ಲಿದ್ದರೂ ಕೂಡ ಇದು ತುಂಬಾ ಅಪಾಯಕಾರಿಯಾಗಿರುತ್ತದೆ. ಅಷ್ಟಾದರೂ ಕೂಡ ಕೆಲವರು ಸಿಂಹದ ಜೊತೆಗೆ ಚೆಲ್ಲಾಟವಾಡಲು ಮುಂದಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಿಂಹದ ಜೊತೆಗೆ ಚೆಲ್ಲಾಟವಾಡುವುದು ವ್ಯಕ್ತಿಯೋಬ್ಬನಿಗೆ ದುಬಾರಿ ಪರಿಣಮಿಸಿದೆ,
ಇದನ್ನೂ ಓದಿ-OMG! Watch Video: ಅಡುಗೆ ಅನಿಲದಿಂದ ಬಟ್ಟೆ ಇಸ್ತ್ರೀ ಮಾಡುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ?
ಬೆಚ್ಚಿಬೀಳಿಸುವ ವೈರಲ್ ವಿಡಿಯೋ
ಈ ವಿಡಿಯೋವನ್ನು ಆಫ್ರಿಕಾದ ಮೃಗಾಲಯದಲ್ಲಿ ಚಿತ್ರೀಕರಿಸಲಾಗಿದೆ. ಮೃಗಾಲಯಕ್ಕೆ ಓರ್ವ ವ್ಯಕ್ತಿ ಭೇಟಿ ನೀಡಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಈ ಸಂದರ್ಭದಲ್ಲಿ ಪಂಜರದಲ್ಲಿರುವ ಸಿಂಹವನ್ನು ಕಂಡು ಆತ ಸಿಂಹದ ಜೊತೆಗೆ ಚೆಲ್ಲಾಟಕ್ಕೆ ಮುಂದಾಗಿದ್ದಾನೆ. ಈ ಚೆಲ್ಲಾಟ ಆತನಿಗೆ ಜೀವನದಲ್ಲಿಯೇ ಮರೆಯಲಾಗದ ಅನುಭವವನ್ನು ನೀಡಿದೆ. ಈ ವಿಡಿಯೋ ನೋಡಿದರೆ ಒಂದು ಕ್ಷಣ ಮೈಯಲ್ಲಿ ನಡುಕ ಹುಟ್ಟುತ್ತದೆ. ಜಮೈಕಾದ ಮೃಗಾಲಯದ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ-Viral Video: ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಕುಣಿದು ಕುಪ್ಪಳಿಸಿದ ಬಾಲಕ!
ಮೃಗಾಲಯಕ್ಕೆ ಭೇಟಿ ನೀಡಿದ ಇತರ ವ್ಯಕ್ತಿಗಳು ಸಿಂಹದ ಚಿತ್ರ ಕ್ಲಿಕ್ಕಿಸುವಲ್ಲಿ ನಿರತರಾಗಿದ್ದಾಗ, ಓರ್ವ ವ್ಯಕ್ತಿ ಮಾತ್ರ ಸಿಂಹದ ಜೊತೆಗೆ ಚೆಲ್ಲಾಟಕ್ಕೆ ಇಳಿದಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ತುಂಬಾ ವಿಭಿನ್ನ ಮೂಡ್ ನಲ್ಲಿರುವ ಈ ವ್ಯಕ್ತಿ ಬಳಿಕ ಸಿಂಹವಿರುವ ಪಂಜರಕ್ಕೆ ಕೈಹಾಕುವ ದುಸ್ಸಾಹಸ ಮೆರೆಯುತ್ತಾನೆ. ಆದರೆ, ಆತನ ಈ ದುಸ್ಸಾಹಸ ಸಿಂಹಕ್ಕೆ ಕಿಂಚಿತ್ತು ಇಷ್ಟವಾಗಿಲ್ಲ. ಅದು ವ್ಯಕ್ತಿಯ ಕೈಯನ್ನು ತನ್ನ ಬಾಯಿಯೊಳಗೆ ತೆಗೆದುಕೊಂಡು ವ್ಯಕ್ತಿಯ ಬೆರಳುಗಳನ್ನೇ ಕಚ್ಚಿದೆ.. ವಿಡಿಯೋ ನೋಡಿ....
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.