Viral Video: ಮನೆಗೆ ನುಗ್ಗಿದ ದರೋಡೆಕೋರರು, ತಾಯಿ-ಮಗಳಿಗೆ ಪೊಲೀಸರ ಸನ್ಮಾನ!
Hyderabad Viral Video: ಶಸ್ತ್ರಸಜ್ಜಿತವಾಗಿ ಕಳ್ಳತನಕ್ಕೆ ಬಂದ ಅವರು ಬೆಲೆಬಾಳುವ ವಸ್ತುಗಳನ್ನು ಲಪಟಾಯಿಸಲು ಮನೆಗೆ ನುಗ್ಗಿದ್ದರು. ಈ ವೇಳೆ ಸಮರ ಕಲೆಯಲ್ಲಿ ನುರಿತ ಮಹಿಳೆ ಮತ್ತು ಆಕೆಯ ಚಿಕ್ಕ ಮಗಳು ಇಬ್ಬರನ್ನೂ ಹೊಡೆದೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
Hyderabad Viral Video: ಮುತ್ತಿನ ನಗರಿ ಖ್ಯಾತಿಯ ಹೈದರಾಬಾದ್‌ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮನೆಗೆ ನುಗ್ಗಿದ ದರೋಡೆಕೋರರನ್ನು ತಾಯಿ-ಮಗಳು ಸೇರಿ ಅಟ್ಟಾಡಿಸಿ ಹೊಡೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ತಾಯಿ-ಮಗಳ ಧೈರ್ಯ ಮತ್ತು ಸಾಹಸವನ್ನು ಮೆಚ್ಚಿಕೊಂಡು ಹಾಡಿಹೊಗಳುತ್ತಿದ್ದಾರೆ. ಕಳ್ಳತನಕ್ಕೆ ಅಂತಾ ಮನೆಗೆ ನುಗ್ಗಿದ ಇಬ್ಬರು ದರೋಡೆಕೋರರನ್ನು ಧೈರ್ಯದಿಂದ ಹಿಮ್ಮೆಟ್ಟಿಸಿ ಹೊಡೆದು ಓಡಿಸಿರುವ ತಾಯಿ-ಮಗಳಿಗೆ ಹೈದರಾಬಾದ್ ಪೊಲೀಸರು ಸನ್ಮಾನ ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು ಅಂತೀರಾ..? ಹೈದರಾಬಾದ್‌ನ ಬೇಗಂಪೇಟೆಯಲ್ಲಿ ಇಬ್ಬರು ದರೋಡೆಕೋರರು ಡೆಲಿವರಿ ಬಾಯ್ ವೇಷ ಧರಿಸಿ ಮನೆ ದೋಚಲು ಪ್ಲ್ಯಾನ್ ಮಾಡಿದ್ದಾರೆ. ಶಸ್ತ್ರಸಜ್ಜಿತವಾಗಿ ಕಳ್ಳತನಕ್ಕೆ ಬಂದ ಅವರು ಬೆಲೆಬಾಳುವ ವಸ್ತುಗಳನ್ನು ಲಪಟಾಯಿಸಲು ಮನೆಗೆ ನುಗ್ಗಿದ್ದರು. ಈ ವೇಳೆ ಸಮರ ಕಲೆಯಲ್ಲಿ ನುರಿತ ಮಹಿಳೆ ಮತ್ತು ಆಕೆಯ ಚಿಕ್ಕ ಮಗಳು ಇಬ್ಬರನ್ನೂ ಹೊಡೆದೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಪ್ರಕಾರ, ಉತ್ತರ ಪ್ರದೇಶದ ಕಾನ್ಪುರದ ನಿವಾಸಿಗಳಾದ ಇಬ್ಬರೂ ದರೋಡೆಕೋರರು ಪಕ್ಕಾ ಪ್ಲ್ಯಾನ್ ಮಾಡಿಕೊಂಡು ದರೋಡೆಗೆ ಸ್ಕೇಚ್ ಹಾಕಿದ್ದರಂತೆ. ಅದರಂತೆ ಒಂದು ದಿನ ಮಧ್ಯಾಹ್ನ 1 ಗಂಟೆ ವೇಳೆಗೆ ತಾನು ಡೆಲಿವರಿ ಬಾಯ್ ಅಂತಾ ಹೇಳಿಕೊಂಡು ಮನೆ ಪ್ರವೇಶಿಸಿದ್ದಾನೆ. ಈ ವೇಳೆ ಮನೆಯಲ್ಲಿ ಯಾರ್ಯಾರು ಇದ್ದಾರೆ ಅಂತಾ ಮಾಹಿತಿ ಪಡೆದುಕೊಂಡು ಹೋಗಿದ್ದಾನೆ.
Petrol And Diesel Price: ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಾಗಿದೆ ಗೊತ್ತೇ?
ಮರುದಿನ ಇಬ್ಬರು ವ್ಯಕ್ತಿಗಳು ಮನೆಗೆ ನುಗ್ಗಿ ದೋಚಲು ಪ್ರಯತ್ನಿಸಿದ್ದಾರೆ. ಈ ಪೈಕಿ ಒಬ್ಬ ಹೆಲ್ಮೆಟ್ ಧರಿಸಿದ್ದರೆ, ಇನ್ನೊಬ್ಬ ತನ್ನ ಮುಖಕ್ಕೆ ಮಾಸ್ಕ್ ಧರಿಸಿದ್ದ. ದರೋಡೆ ಉದ್ದೇಶದಿಂದ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅಡುಗೆ ಮನೆಗೆ ನುಗ್ಗಿ ಕೆಲಸ ಮಾಡುತ್ತಿದ್ದ ಕೆಲಸದಾಕೆಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿದ್ದಾನೆ. ಆಗ ಮನೆಯ ಯಜಮಾನಿ ಮತ್ತು ಆಕೆಯ ಮಗಳು ಮನೆಯೊಳಗೆ ನುಗ್ಗುತ್ತಿದ್ದ ಮತ್ತೊಬ್ಬನನ್ನು ಹಿಡಿದು ಹೊಡೆದಿದ್ದಾರೆ.
ಈ ವೇಳೆ ಒಬ್ಬಾತ ಪಿಸ್ತೂಲ್ ತೋರಿಸಿ ತಾಯಿ-ಮಗಳಿಗೆ ಗುಂಡು ಹಾರಿಸುವುದಾಗಿ ಹೆದರಿಸಿದ್ದಾನೆ. ಇದಕ್ಕೆ ಹೆದರದ ಮನೆಯ ಯಜಮಾನಿ ಮಹಿಳೆ ತನ್ನ ಸಮರ ಕಲೆಯ ಕೌಶಲ್ಯದಿಂದ ಆತನ ಮುಖಕ್ಕೆ ಪಂಚ್ ಮಾಡಿದ್ದಾಳೆ. ಆತನ ಜೊತೆಗೆ ಫೈಟ್ ಮಾಡಿ ಪಿಸ್ತೂಲ್ ಕೆಳಕ್ಕೆ ಬೀಳಿಸಿದ್ದಾರೆ. ಬಳಿಕ ತಾಯಿ-ಮಗಳು ಸೇರಿ ಇಬ್ಬರಿಗೂ ಚೆನ್ನಾಗಿ ಹೊಡೆದಿದ್ದಾರೆ. ಮನೆ ಕಳ್ಳತನಕ್ಕೆ ಅಂತಾ ಬಂದಿದ್ದ ದರೋಡೆಕೋರರಿಗೆ ಸರಿಯಾಗಿ ಗೂಸಾ ಬಿದ್ದಿದ್ದರಿಂದ ಇನ್ನೂ ಇಲ್ಲೇ ಇದ್ದರೆ ನಮ್ಮ ಟೈಮ್ ಕೆಡುತ್ತೆ ಅಂತಾ ಹೇಳಿ ಮನೆಯಿಂದ ಹೊರಗೆ ಓಡಲು ಶುರು ಮಾಡಿದ್ದಾರೆ. ಈ ವೇಳೆ ಅಕ್ಕಪಕ್ಕದಲ್ಲಿದ್ದ ಮನೆಯವರು ಬಂದು ಓಡಿ ಹೋಗುತ್ತಿದ್ದ ಒಬ್ಬ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಬಳಿಕ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಮನೆಗಳ್ಳತನಕ್ಕೆ ಅಂತಾ ಬಂದ ದರೋಡೆಕೋರರು ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಆ ಮನೆಯ ಯಜಮಾನಿ ಮಹಿಳೆ ತನ್ನ ಮಗಳೊಂದಿಗೆ ಧೈರ್ಯದಿಂದ ಹೋರಾಡಿ ಖದೀಮರಿಗೆ ಸರಿಯಾಗಿ ಗೂಸಾ ನೀಡಿದ್ದಾರೆ. ಸದ್ಯ ತಾಯಿ-ಮಗಳ ಈ ಶೌರ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನಂತರ ಮನೆಗೆ ಬಂದ ಪೊಲೀಸರು ತಾಯಿ-ಮಗಳನ್ನು ಸನ್ಮಾನಿಸಿದ್ದಾರೆ.
ಇದನ್ನೂ ಓದಿ: FASTAG ಗೆ ಫುಲ್ ಸ್ಟಾಪ್.. ಟೋಲ್ ಗೇಟ್ ಗಳಲ್ಲಿ ಹೊಸ ವ್ಯವಸ್ಥೆ, ಈ ರೀತಿ ಹಣ ಪಾವತಿ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ