Yuva Trailer: ʻಯುವʼ ಟ್ರೇಲರ್‌ ಔಟ್!‌ ರಗಡ್‌ ಅವತಾರದಲ್ಲಿ ಯುವ ರಾಜ್​ಕುಮಾರ್!

Yuva Update: ಕನ್ನಡ ಚಿತ್ರರಂಗದ ರಗಡ್‌ ಹೀರೋ ಯುವ ರಾಜ್‌ಕುಮಾರ್‌ ನಟನೆಯ ʻಯುವʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾ ಟ್ರೇಲರ್‌ ಹೇಗಿದೆ? ಯುವ ರಾಜ್‌ಕುಮಾರ್‌ ಅಭಿನಯ ಯಾವ ರೀತಿ ಇದೆ? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Mar 21, 2024, 06:30 PM IST
  • ನಟ ಯುವ ರಾಜ್‌ಕುಮಾರ್‌ ಸ್ಟೈಲಿಷ್ ಆಗಿ ಮಾತ್ರವಲ್ಲದೇ, ತಮ್ಮ ರಗಡ್‌ ಅವತಾರದಲ್ಲಿ ಸಖತ್‌ ಆಕ್ಷನ್‌ ಕೂಡ ರಿವೀಲ್‌ ಮಾಡಿದ್ದಾರೆ.
  • ಕಾಲೇಜು ಸ್ಟೋರಿಯ ಹಿನ್ನೆಲೆಯಾಗಿದ್ದರು, ಮಾಸ್‌ ಎಲಿಮೆಂಟ್ಸ್‌ಗಳನ್ನು ಮಾತ್ರ ತುಂಬಾ ಚೆನ್ನಾಗಿಯೇ ತೋರಿಸಿದ್ದಾರೆ.
  • ಯುವ ಸಿನಿಮಾದ ಫಸ್ಟ್‌ ಹಾಫ್‌ನಲ್ಲಿ ಇಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್ ಕಥೆಯಿದೆ ಎಂದು ಝಲಕ್‌ನಲ್ಲಿ ತಿಳಿಯುತ್ತದೆ.
Yuva Trailer: ʻಯುವʼ ಟ್ರೇಲರ್‌ ಔಟ್!‌ ರಗಡ್‌ ಅವತಾರದಲ್ಲಿ ಯುವ ರಾಜ್​ಕುಮಾರ್! title=

Yuva Trailer Released: ಸ್ಯಾಂಡಲ್‌ವುಡ್‌ ನಟ ಯುವ ರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ʻಯುವʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ನಟ ಯುವ ರಾಜ್‌ಕುಮಾರ್‌ ಸ್ಟೈಲಿಷ್ ಆಗಿ ಮಾತ್ರವಲ್ಲದೇ, ತಮ್ಮ ರಗಡ್‌ ಅವತಾರದಲ್ಲಿ ಸಖತ್‌ ಆಕ್ಷನ್‌ ಕೂಡ ರಿವೀಲ್‌ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್‌ ನೋಡುತ್ತಾಯಿದ್ದರೇ ಈ ನಟ ಮಾಸ್‌ ಹೀರೋ ಆಗುವುದರಲ್ಲಿ ಅನುಮಾನವೇ ಇಲ್ಲ. 

ಯುವ ಟೇಲರ್‌ನಲ್ಲಿ ಕಾಲೇಜು-ಮಾಸ್-ಲವ್ ಎಲಿಮೆಂಟ್ಸ್ ಅದ್ಬುತವಾಗಿ ಮೂಡಿಬಂದಿದೆ. ಇದರಲ್ಲಿ ನಟ ಯುವ ರಾಜ್‌ಕುಮಾರ್‌ನನ್ನು ಯಂಗ್‌ ಕಾಲೇಜು ಹುಡುಗನಾಗಿ, ಜೊತೆಗೆ ರೊಮ್ಯಾಂಟಿಕ್ ಲವರ್ ಬಾಯ್ ಹಾಗೂ ಮಾಸ್‌  ಹೀರೋ ಒಟ್ಟಿನಲ್ಲಿ ಎಲ್ಲಾ ಆ್ಯಂಗಲ್‌ನಲ್ಲಿಯೂ ಈತನನ್ನು ನೋಡಬಹುದು. ಇದು ಕಾಲೇಜು ಸ್ಟೋರಿಯ ಹಿನ್ನೆಲೆಯಾಗಿದ್ದರು, ಮಾಸ್‌ ಎಲಿಮೆಂಟ್ಸ್‌ಗಳನ್ನು ಮಾತ್ರ ತುಂಬಾ ಚೆನ್ನಾಗಿಯೇ ತೋರಿಸಿದ್ದಾರೆ.

ಇದನ್ನೂ ಓದಿ: ರಿಲೀಸ್ ಆಯ್ತು ಮ್ಯಾಟ್ನಿ ಸಿನಿಮಾದ ರೋಮ್ಯಾಂಟಿಕ್ ಸಾಂಗ್!

ನಟ ಯುವ ಮಂಗಳೂರಿನ ಇಂಜಿನಿಯರಿಂಗ್ ಕಾಲೇಜ್‌ನ  ರಗಡ್ ವಿದ್ಯಾರ್ಥಿಯಾಗಿದ್ದು, ಕಾಲೇಜಿನಲ್ಲಿ ತನ್ನವರಿಗಾಗಿ ಏನು ಬೇಕಾದರೂ, ಯಾವುದೇ ಹಂತಕ್ಕೆ ಹೋಗಲು ರೆಡಿಯಾಗಿರುತ್ತಾನೆ. ಇಂತಹ ಹಾದಿಯಲ್ಲಿ ನಡೆಯುವನು ಒಂದು ಸಮಸ್ಯೆಯಲ್ಲಿ ಸಿಲುಕಿಕೊಂಡು, ತಂದೆ-ತಾಯಿ ದೃಷ್ಟಿಯಲ್ಲಿ ತಪ್ಪಿತಸ್ಥನಾಗಿ ನಿಲ್ಲುವಂತೆ ಆಗುತ್ತದೆ. ತದನಂತರ ಯುವ ತನ್ನನ್ನು ತಾನು ಸಾಬೀತು ಮಾಡಿಕೊಳ್ಳಲು ನಡೆಸುವ ಹೋರಾಟದ ಕಥೆಯೇ ಈ ಸಿನಿಮಾವಾಗಿದೆ ಅನ್ನೋದನ್ನ ಟ್ರೈಲರ್‌ನಲ್ಲಿ ಗೊತ್ತಾಗುತ್ತದೆ. 

ಯುವ ಸಿನಿಮಾದ ಫಸ್ಟ್‌ ಹಾಫ್‌ನಲ್ಲಿ ಇಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್ ಕಥೆಯಿದೆ ಎಂದು ಝಲಕ್‌ನಲ್ಲಿ ತಿಳಿಯುತ್ತದೆ. ಅದಾದ ಬಳಿಕ 'ಯುವ' ಯಾವ ರೀತಿ ಡೆಲಿವರಿ ಬಾಯ್ ಆಗಿ ಕುಟುಂಬದ ಸಮಸ್ಯೆ ಬಗೆಹರಿಸಲು ನಿಲ್ಲುತ್ತಾನೆಂಬುದು ಗೊತ್ತಾಗುತ್ತದೆ. ಇದೊಂಥರ ಹಳೇಕಥೆ ಅಂತನಿಸಿದರು ಹೊಸದಾಗಿರುವ ಟ್ರೀಟ್‌ಮೆಂಟ್ ಅಂತನೇ ಹೇಳಬಹುದು. ಇದರಲ್ಲಿರುವ ಯುವ ರಾಜ್‌ಕುಮಾರ್‌ನ ಆಕ್ಷನ್ ಸೀಕ್ವೆನ್ಸ್‌, ಸ್ಟಂಟ್ಸ್, ಡೈಲಾಗ್ಸ್ ಫ್ಯಾನ್ಸ್‌ಗೆ ಸಖಕ್ ಕಿಕ್ ಕೊಡುವಂತಿದೆ.

ಇದನ್ನೂ ಓದಿ: Hanu Man OTT Record: ಒಟಿಟಿಯಲ್ಲೂ ಹನುಮಾನ್ ಸಿನಿಮಾ ವಿಶ್ವದಾಖಲೆ..!

ಯುವ ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದಾರೆ. ನಟ ಅಚ್ಯುತ್‌ಕುಮಾರ್ ತಂದೆ ಪಾತ್ರದಲ್ಲಿ  ಹಾಗೂ ನಟಿ ಸುಧಾರಾಣಿ  ತಾಯಿ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಇನ್ನು ಯುವ ಮೆಂಟರ್ ಆಗಿ ಕಿಶೋರ್ ನಿರ್ವಹಿಸಿದ್ದು, ತುಂಬಾನೇ ಗ್ರ್ಯಾಂಡ್‌ ಆಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಈ ಸಿನಿಮಾಗೆ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಆಕ್ಷನ್‌ ಕಟ್‌ ಹೇಳಿದ್ದು, ಚಿತ್ರದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ಈ ಸಿನಿಮಾ ಇದೇ ಮಾರ್ಚ್‌ 29ಕ್ಕೆ ತೆರೆಗೆ ಬರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News