ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವ ವಿಡಿಯೋಗಳು ಎಲ್ಲರನ್ನು ಹುಬ್ಬೇರುವಂತೆ ಮಾಡುತ್ತದೆ. ಚಿತ್ರ ವಿಚಿತ್ರ ವಿಡಿಯೋಗಳ ಜೊತೆ ಮನಸ್ಸಿಗೆ ಮುದ ನೀಡುವ ದೃಶ್ಯಗಳು ಇರುತ್ತವೆ. ಅಂತಹದ್ದರಲ್ಲಿ ಈ ವಿಡಿಯೋ ಸಹ ಒಂದು. ಉಲ್ಲಾಸ ತುಂಬಿದಂತೆ ವೃದ್ಧರು ಡ್ಯಾನ್ಸ್‌ ಮಾಡೋದನ್ನು ನೋಡಿದರೆ "ಈ ವಯಸ್ಸಿನಲ್ಲಿಯೇ ಹೀಗೆ ಕುಣಿದಾಡುವ ಇವರು, ಯವ್ವನದಲ್ಲಿ ಇನ್ನೆಷ್ಟು ಹುಮ್ಮಸ್ಸಿನಿಂದ ಇರುತ್ತಿದ್ದರೋ!" ಎಂಬ ಪ್ರಶ್ನೆ ಮೂಡುತ್ತದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Madhya Pradesh: ಏಕಕಾಲದಲ್ಲಿ ಮೂವರನ್ನು ವರಿಸಿದ 42ರ ಭೂಪತಿ ಗಂಡು


ವಯಸ್ಸು ಎಂಬುದು ಬರಿಯ ಸಂಖ್ಯೆ ಅಂತ ಇಲ್ಲೊಬ್ಬರು ಅಜ್ಜಿ ಪ್ರೂವ್‌ ಮಾಡಿದ್ದಾರೆ. ತೆಲುಗಿನ ಪುಷ್ಪ ಸಿನಿಮಾದ ಸಾಮಿ, ಸಾಮಿ ಹಾಡಿಗೆ ವೃದ್ಧೆಯೊಬ್ಬರು ಕುಣಿದಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಿರಿಯ ವಯಸ್ಸಿನಲ್ಲಿ ವೃದ್ಧೆಯ ಹುಮ್ಮಸ್ಸು ನೋಡಿ ಜನರು ಫಿದಾ ಆಗಿದ್ದಾರೆ. 


ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಸಿನಿಮಾ 'ಪುಷ್ಪ: ದಿ ರೈಸ್' ಸಿಕ್ಕಾಪಟ್ಟೆ ಕ್ರೇಜ್‌ ಸೃಷ್ಟಿಸಿತ್ತು. ಅದರಲ್ಲೂ ಆ ಸಿನಿಮಾದ ಹಾಡುಗಳು ಸೂಪರ್‌ ಹಿಟ್‌ ಕಂಡಿತ್ತು. ಒಂದಿಷ್ಟು ಮಂದಿಗೆ ಡೈಲಾಗ್‌ ಇಷ್ಟವಾದರೆ ಇನ್ನೊಂದಿಷ್ಟು ಮಂದಿಗೆ ಹಾಡಿನ ಕ್ರೇಜ್‌ ಹುಟ್ಟಿಕೊಂಡಿತ್ತು. ಇದೀಗ ಅಂತಹದ್ದೇ ಕ್ರೇಜ್‌ ಹೊಂದಿದ್ದ ವೃದ್ಧೆಯೊಬ್ಬರು ಪುಷ್ಪ ಸಿನಿಮಾದ ʼಸಾಮಿ ಸಾಮಿʼ ಹಾಡಿಗೆ ಸ್ಟೆಪ್‌ ಹಾಕಿದ್ದಾರೆ. ಈ ಕ್ಲಿಪ್‌ ಸಖತ್‌ ವೈರಲ್‌ ಆಗುತ್ತಿದೆ.


 

 

 

 



 

 

 

 

 

 

 

 

 

 

 

A post shared by GiDDa CoMpAnY (@giedde)


 


 


giedde ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋದ ಎಡಿಟೆಡ್‌ ವರ್ಷನ್‌ನ್ನು ಅಪ್ಲೋಡ್ ಮಾಡಲಾಗಿದೆ. `ಸಾಮಿ ಸಾಮಿ' ಹಾಡು ಕಿವಿಗೆ ಬೀಳುತ್ತಿದ್ದಂತೆಯೇ ವೃದ್ಧೆಯೊಬ್ಬರು ಕುಣಿದಾಡಿದ್ದಾರೆ. ಈ ಅಜ್ಜಿ ಕುಣಿಯುವ ಸ್ಟೈಲ್‌, ಉತ್ಸಾಹ ಮತ್ತು ಉಲ್ಲಾಸ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. 


ಇದನ್ನು ಓದಿ: Viral Video: ಮದುವೆ ಬಳಿಕ ಧೂಳನ್ನೂ ಲೆಕ್ಕಿಸದೆ ಕಾರಿನ ಹಿಂದೆ ಓಡಿದ ವಧು-ವರ..!


ಅಜ್ಜಿಯ ಉತ್ಸಾಹ ಎಲ್ಲರನ್ನೂ ಬಹುವಾಗಿ ಸೆಳೆದಿದೆ. ಹೀಗಾಗಿ, ಈ ಅಜ್ಜಿಯನ್ನು ಹೊಗಳದೇ ಇರಲು ನೆಟ್ಟಿಗರಿಗೆ ಸಾಧ್ಯವಾಗಿಲ್ಲ. ಸದ್ಯ ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಎಲ್ಲರಲ್ಲೂ ಮಂದಹಾಸ ಮೂಡಿಸುವಲ್ಲಿ ಈ ಉತ್ಸಾಹಿ ಅಜ್ಜಿ ಯಶಸ್ವಿಯಾಗಿದ್ದಾರೆ. ನಿಮಗೆ ಕೂಡಾ ಈ ಉಲ್ಲಾಸದಾಯಕ ನೃತ್ಯ ಖುಷಿ ನೀಡಿರಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.