ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಯುರೋಪ್‌ನ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದು, ಈಗಾಗಲೇ ಜರ್ಮನಿ ತಲುಪಿದ್ದಾರೆ. ಜರ್ಮನಿಯಲ್ಲಿರುವ ಭಾರತೀಯ ವಲಸಿಗರ ಅದ್ದೂರಿ ಸ್ವಾಗತದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಮೇ 2, 2022) ಬರ್ಲಿನ್‌ಗೆ ಆಗಮಿಸಿದರು. ಬರ್ಲಿನ್‌ನ ಹೊಟೇಲ್ ಅಡ್ಲಾನ್ ಕೆಂಪಿನ್ಸ್ಕಿಯಲ್ಲಿ ಪಿಎಂ ಮೋದಿ ನೋಡಲು ಹಲವಾರು ಜನರು ಸೇರಿದ್ದರು. ಜರ್ಮನಿಯಲ್ಲಿ ಮಕ್ಕಳನ್ನು ಭೇಟಿ ಮಾಡಿದ ಪ್ರಧಾನಿ ಅವರೊಂದಿಗೆ ಒಂದಷ್ಟು ಸಮಯ ಕಳೆದಿದ್ದಾರೆ.
ಹಿಂದುಸ್ತಾನದ ಕುರಿತು ಹುಡುಗನೊಬ್ಬ ಹಾಡು ಹೇಳಿದ್ದು, ಪ್ರಧಾನಿ ಅದಕ್ಕೆ ತಾಳ ಹಾಕಿರುವ ವಿಡಿಯೋ ಹಾಗೂ ಮೋದಿ ಅವರ ಭಾವಚಿತ್ರ ಬಿಡಿಸಿರುವ ಹುಡುಗಿಯೊಬ್ಬಳಿಗೆ ಆಟೋಗ್ರಾಫ್ ನೀಡುತ್ತಿರುವ ವಿಡಿಯೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಬೆಳಗಿನ ಆಹಾರ ತ್ಯಜಿಸಿದರೆ ಹೆಚ್ಚಾಗುತ್ತದೆ ದೇಹದ ತೂಕ...!
ಮೋದಿ ಅವರ ಚಿತ್ರ ಬಿಡಿಸಿದ ಹುಡುಗಿಯೊಬ್ಬಳು ಅವರಿಗೆ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದಳು. ಪುಟ್ಟ ಬಾಲಕಿಯೊಂದಿಗೂ ಪ್ರಧಾನಿ ಸಂವಾದ ನಡೆಸಿದರು. ಅವರು ತಮ್ಮ ಐಕಾನ್ ಎಂದು ಹುಡುಗಿ ಹೇಲಿದರು. ಈ ಬಳಿಕ ಮೋದಿ ಅವರು ಬಾಳಕಿಗೆ ಆಟೋಗ್ರಾಫ್ ನೀಡಿದರು.
It was early morning in Berlin yet several people from the Indian community came by. Was wonderful connecting with them. India is proud of the accomplishments of our diaspora. pic.twitter.com/RfCyCqJkPY
— Narendra Modi (@narendramodi) May 2, 2022
ಹಿಂದಿನ ದಿನ, ಬರ್ಲಿನ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಈ ಭೇಟಿಯು ಭಾರತ ಮತ್ತು ಜರ್ಮನಿ ನಡುವಿನ ಸ್ನೇಹವನ್ನು ಹೆಚ್ಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಬರ್ಲಿನ್‌ಗೆ ಬಂದಿಳಿದಿದ್ದೇನೆ. ಇಂದು, ನಾನು ಚಾನ್ಸೆಲರ್ @OlafScholz ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತೇನೆ. ಈ ಭೇಟಿಯು ಭಾರತ ಮತ್ತು ಜರ್ಮನಿ ನಡುವಿನ ಸ್ನೇಹವನ್ನು ಹೆಚ್ಚಿಸುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಅಬ್ಬಾ... ವೃದ್ಧ ದಂಪತಿಯ ಈ ಡ್ಯಾನ್ಸ್ ನೋಡಿದ್ರೆ ಫಿದಾ ಆಗ್ತೀರಾ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.