Viral Video: ಶಾಲೆಯಲ್ಲಿ ಮಗುವಿನಿಂದ ಮಸಾಜ್ ಮಾಡಿಸಿಕೊಂಡ ಟೀಚರಮ್ಮ, ವಿಡಿಯೋ ನೀವೂ ನೋಡಿ
Trending Vide: ಈ ಮಹಿಳಾ ಶಿಕ್ಷಕಿಯ ಮೇಲೆ ಈ ಮೊದಲೇ ಹಲವು ಆರೋಪಗಳಿವೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಮಕ್ಕಳ ವಿರುದ್ಧ ದುರ್ನಡತೆ ತೋರಿದ್ದಕ್ಕೆ ಸಂಬಂಧಿಸಿದಂತೆ ಈ ಮೊದಲೇ ಮೇಡಮ್ ವಿರುದ್ಧ ಹಲವು ದೂರುಗಳು ಬಂದಿವೆ. ಆದರೆ, ಈ ಬಾರಿ ಮಾತ್ರ ವಿಷಯ ತುಂಬಾ ದೂರಕ್ಕೆ ಹೋಗಿದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ
Viral Video Shows Student Massaging Teacher's Hand: ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬಳು ತರಗತಿ ಕೊಠಡಿಯೊಳಗೆ ಮಕ್ಕಳಿಗೆ ಸೇವೆ ಮಾಡಿಸಿಕೊಲ್ಲುತ್ತಿರುವ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ ಕಂಡುಬಂದಿರುವ ಶಿಕ್ಷಕಿ ಊರ್ಮಿಳಾ ಸಿಂಗ್ ಅವರನ್ನು ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ನೇಮಕ ಮಾಡಲಾಗಿದೆ. ಬವಾನ್ ಬ್ಲಾಕ್‌ನ ಪೋಖಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ತರಗತಿಯ ವಿದ್ಯಾರ್ಥಿಯೋಬ್ಬನಿಂದ ತನ್ನ ಕೈಗಳಿಗೆ ಮಸಾಜ್ ಮಾಡಿಸಿಕೊಂಡಿರುವ ವೀಡಿಯೊ ವೈರಲ್ ಆದ ಬಳಿಕ ಬಿಎಸ್‌ಎ ಶಿಕ್ಷಕಿಯನ್ನು ಅಮಾನತುಗೊಳಿಸಿದೆ. ಈ ಹಿಂದೆಯೂ ಶಿಕ್ಷಕಿ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ-ದೇಶದ ಹಲವು ಭಾಗಗಳಲ್ಲಿ ಮುಂದಿನ 72 ಗಂಟೆಗಳ ಕಾಲ ಭಾರೀ ಮಳೆ ಎಚ್ಚರಿಕೆ
ಶಿಕ್ಷಣಾಧಿಕಾರಿಯವರೆಗೆ ತಲುಪಿದ ದೂರು
ಈ ವಿಡಿಯೋ ಇದೇ ತಿಂಗಳದ್ದಾಗಿದೆ ಮತ್ತು ಈ ಪ್ರಕರಣದಲ್ಲಿ ಶಿಕ್ಷಕಿಯ ದೂರು ಜುಲೈ 14 ರಂದು ಶಾಲೆಯ ಮುಖ್ಯೋಪಾಧ್ಯಾಯರಿಗೆ ತಲುಪಿತ್ತು, ನಂತರ ಅವರು ಶಿಕ್ಷಕಿಯ ಅಸಮರ್ಪಕ ನಡವಳಿಕೆ ಮತ್ತು ಅವ್ಯವಹಾರದ ಬಗ್ಗೆ ಬಿಇಒಗೆ ದೂರು ನೀಡಿದ್ದರು, ಇದೇ ವೇಳೆ ವೀಡಿಯೊ ಭಾರಿ ವೈರಲ್ ಆದ ಕಾರಣ ಬಿಇಒ ತಕ್ಷಣವೇ ಜಾರಿಗೆ ಬರುವಂತೆ ಮೇಡಂ ಅವರನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ-Viral Video : ವಿಹಾರಕ್ಕೆಂದು ಬಂದವ ಪ್ರಿಯತಮೆಯ ತಲೆಯ ಹೇನು ಹುಡುಕುತ್ತಾ ಕುಳಿತ
ನೀವೂ ಒಮ್ಮೆ ಈ ವಿಡಿಯೋ ನೋಡಿ
34 ಸೆಕೆಂಡುಗಳ ಈ ವೀಡಿಯೊ ವೈರಲ್ ಆಗಿದ್ದು, ಪೋಖಾರಿ ಪ್ರಾಥಮಿಕ ಶಾಲೆಯಲ್ಲಿ ನಿಯುಕ್ತಿ ಮಾಡಲಾದ ಸಹಾಯಕ ಶಿಕ್ಷಕಿ ಊರ್ಮಿಳಾ ಸಿಂಗ್ ಮಗುವಿಗೆ ಕೈಯಿಂದ ತನ್ನ ಕೈಗಳಿಗೆ ಮಸಾಜ್ ಮಾಡಿಸಿಕೊಳ್ಳುತಿರುವುದನ್ನು ನೀವು ಸ್ಪಷ್ಟವಾಗಿ ಕಾಣಬಹುದು. ಈ ತಿಂಗಳ ಆರಂಭದಲ್ಲಿ ಎರಡು ಬಾರಿ ಶಾಲೆಯ ತಪಾಸಣೆ ವೇಳೆ ಶಿಕ್ಷಕಿ ಗೈರುಹಾಜರಾಗಿದ್ದರು. ವರದಿ ಪ್ರಕಾರ, ಜುಲೈ 13 ರಂದು ಅವರು ಗೈರುಹಾಜರಾಗಿದ್ದರು.ಮಸಾಜ್ ಮಾಡಿಸಿಕೊಂಡ ದೂರಿನ ಮೇರೆಗೆ ಜುಲೈ 15 ರಂದು ಮತ್ತೊಮ್ಮೆ ತಪಾಸಣೆ ನಡೆಸಲಾಗಿದ್ದು, ಆಗಲೂ ಆಕೆ ಶಾಲೆಯಲ್ಲಿ ಇರಲಿಲ್ಲ. ಇದಾದ ನಂತರ ಆಕೆಯ ಮೇಲೆ ದೂರು ದಾಖಲಿಸಲಾಗಿದೆ. ಶಿಕ್ಷಕಿ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ತಿಳಿಸದೆ ರಜೆಯಲ್ಲಿದ್ದಾರೆ ಎಂದು ಪ್ರಾಂಶುಪಾಲರು ಬಿಇಒಗೆ ನೀಡಿದ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಇದಲ್ಲದೆ ಶಿಕ್ಷಕಿಯನ್ನು ಮನೋವೈದ್ಯರ ಬಳಿ ಪರೀಕ್ಷೆ ಮಾಡಿಸುವ ಅಗತ್ಯವನ್ನೂ ಸಹ ಅವರು ತಿಳಿಸಿದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.