ನವದೆಹಲಿ: ದೇಶಾದ್ಯಂತ ಮದುವೆ ಸೀಸನ್ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಮದುವೆಯ ವಿಡಿಯೋಗಳು ಹರಿದಾಡುತ್ತಿವೆ. ಜನರನ್ನು ನಗಿಸುವ ಕೆಲವು ವಿಡಿಯೋಗಳಿವೆ. ಅಂತಹುದೇ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಏಕಕಾಲಕ್ಕೆ ನಾಲ್ಕು ಹುಡುಗಿಯರನ್ನು ಮದುವೆಯಾಗುತ್ತಿದ್ದಾನೆ. ಈ ವಿಡಿಯೋ ನೋಡಿ ಜನರಿಗೆ ನಂಬಿಕೆಯ ಆಗುತ್ತಿಲ್ಲ. ಇದೇ ವೇಳೆ, ವೀಡಿಯೋ ವೈರಲ್ ಆದ ಬಳಿಕ ಅನೇಕರು ತಮ್ಮ ಪ್ರತಿಕ್ರಿಯೆಯನ್ನು ಸಹ ಕೊಡುತ್ತಿದ್ದಾರೆ. ಇಂತಹ ವೀಡಿಯೊ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಆದರೆ, ಈ ವಿಡಿಯೋ ನೋಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಇಂತಹದೊಂದು ವಿಡಿಯೋ ತಯಾರಿಸಿ ಹಂಚಿಕೊಂಡಿದ್ದಾರೆ ಎಂದೂ ಸಹ ಜನ ಹೇಳುತ್ತಿದ್ದಾರೆ. (Viral News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಸೀಟ್ ಗಾಗಿ ದೆಹಲಿ ಮೆಟ್ರೊ ರೈಲಿನಲ್ಲಿ ಜಬರ್ದಸ್ತ್ ಮಾರಾಮಾರಿ, ವಿಡಿಯೋ ವೈರಲ್!


ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವರನೊಬ್ಬ ತನ್ನ ನಾಲ್ವರು ವಧುಗಳೊಂದಿಗೆ ಮದುವೆ ಮಂಟಪದಲ್ಲಿ ಸಪ್ತಪದಿ ತುಳಿಯುತ್ತಿರುವುದನ್ನು ನೀವು ನೋಡಬಹುದು. ವರನು ಮುಂದೆ ನಡೆಯುತ್ತಿದ್ದಾನೆ ಮತ್ತು ಎಲ್ಲಾ ವಧುಗಳು ಅವನನ್ನು ಅನುಸರಿಸುತ್ತಿದ್ದಾರೆ. ಈ ವೀಡಿಯೋ ನೋಡಿದ ಜನರಿಗೆ ತಮ್ಮ ಕಣ್ಣುಗಳೆ ನಂಬಲು ಆಗುತ್ತಿಲ್ಲ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ, ಇದನ್ನು ಇದುವರೆಗೆ 11 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಇದೇ ವೇಳೆ, ಅನೇಕ ಜನರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡುತ್ತಿದ್ದಾರೆ. ಆ ವ್ಯಕ್ತಿಯ ಸ್ಥಿತಿ ನೋಡಿ ಜನರೂ ಖುಷಿ ಪಡುತ್ತಿದ್ದಾರೆ.


ಇದನ್ನೂ ಓದಿ-ವಿವಾಹದ ಮೊದಲ ರಾತ್ರಿಯ ವಿಡಿಯೋ ಹಂಚಿಕೊಂಡ ದಂಪತಿ ಜೋಡಿ, ವಿಡಿಯೋ ವೈರಲ್!

ವಿಡಿಯೋಗೇ ಜನರ ಪ್ರತಿಕ್ರಿಯೆ ಹೇಗಿದೆ?
ವೈರಲ್ ಆಗುತ್ತಿರುವ ಈ ವಿಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, 'ನಂಬಲು ಸಾಧ್ಯವಿಲ್ಲ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಅದೃಷ್ಟ ಎಂದರೆ ಹೀಗಿರಬೇಕು' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, 'ಈ ವೀಡಿಯೊ ನಕಲಿಯಾಗಿದೆ' ಎಂದಿದ್ದಾರೆ.


ವೈರಲ್ ವಿಡಿಯೋ ಇಲ್ಲಿದೆ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ