Viral Video: ಅದೇನು ನೀವು ಮಾತ್ರಾನಾ ಎಣ್ಣೆ ಕುಡಿಯೋದು..ನಾನು ಹೊಡಿತೀನಿ ನೋಡಿ ಎಂದು ಬಿಯರ್ ಬಾಟಲಿ ಕೈಗೆತ್ತಿಕೊಂಡ ಕೋತಿ! ನಂತರ ಆಗಿದ್ದೇನು..? ವಿಡಿಯೋ ನೋಡಿ
Viral video: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಲು ವೈರಲ್ ಆಗುತ್ತಿರುತ್ತವೆ. ಜನರು ತಮ್ಮ ಸುತ್ತ ಮುತ್ತಲು ನಡೆಯುವ ಫನ್ನಿ ಮೂಮೆನ್ಟ್ಸ್ ಹಾಗೂ ಅಪರೂಪದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ರೀತಿಯ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
Viral video: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಲು ವೈರಲ್ ಆಗುತ್ತಿರುತ್ತವೆ. ಜನರು ತಮ್ಮ ಸುತ್ತ ಮುತ್ತಲು ನಡೆಯುವ ಫನ್ನಿ ಮೂಮೆನ್ಟ್ಸ್ ಹಾಗೂ ಅಪರೂಪದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ರೀತಿಯ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿನ ಘಟನೆ, ಬ್ರೆಜಿಲ್‌ನ ಪರಾನಾದಲ್ಲಿ ನಡೆದಿದ್ದು, ಎರಡು ಮಂಗಗಳು ಕಸದ ತೊಟ್ಟಿಯ ಮೇಲೆ ಕುಳಿತು, ಡಸ್ಟ್‌ಬಿನ್‌ನಲ್ಲಿದ್ದ ಬಿಯರ್ ಬಾಟಲ್ ಅನ್ನು ಕೈಗೆತ್ತುಕೊಂಡು ಕುಡಿಯಲು ಆರಂಬಿಸಿದೆ. ಎರಡು ಮಂಗಗಳು ಕಸದ ತೊಟ್ಟಿಯ ಮೇಲೆ ಕುಳಿತು ಬಿಯರ್ ಕುಡಿಯುತ್ತಿರುವ ಈ ವಿಡಿಯೋ ಎಲ್ಲರನ್ನು ಬೆರಗುಗೊಳಿಸಿದೆ.
ವೈರಲ್ ಆಗಿರುವ ವಿಡಿಯೋಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಬಿಯರ್ ಬಾಟಲ್‌ಗಲನ್ನು ಕಸದ ಬುಟ್ಟಿಯಲ್ಲಿ ಎಸೆಯುವುದರಿಂದ ಇದು ಪ್ರಾನಿಗಳ ಆರೋಗ್ಯಕ್ಕೂ ಹಾನಿ ಉಂಟು ಮಾಡುತ್ತವೆ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಮಂಗಗಳು ಮಾನವ ಅಸ್ತಿತ್ವಕ್ಕೆ ಹತ್ತಿರದ ಜೀವಿಗಳಾಗಿರಬಹುದು ಆದರೆ ಮಾನವ ಆಹಾರ ಮತ್ತು ಪಾನೀಯಗಳ ಸೇವನೆಯು ಅವುಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಣಿಗಳ ಆರೋಗ್ಯಕ್ಕೆ ಆತಂಕಕಾರಿ ಎಂದು ಪುರಸಭೆಯ ಪರಿಸರ ಇಲಾಖೆ ಸಾರ್ವಜನಿಕರನ್ನು ಎಚ್ಚರಿಸಿದೆ.
ಮಂಗಗಳು ಮದ್ಯ ಸೇವಿಸುತ್ತಿರುವ ದೃಶ್ಯಗಳು ಅಪರೂಪ. ಮಂಗಗಳು ಮದ್ಯಪಾನ ಮಾಡುವುದು ತುಂಬಾ ಹಾನಿಕಾರಕ. ತ್ಯಾಜ್ಯದ ನಿರ್ವಹಣೆ ಮತ್ತು ವಿಲೇವಾರಿಯಲ್ಲಿ ಹೆಚ್ಚು ಜಾಗರೂಕರಾಗಿರಿ ಮತ್ತು ಹಾನಿಕಾರಕ ಉತ್ಪನ್ನಗಳನ್ನು ಎಸೆಯದಂತೆ ಅಧಿಕಾರಿಗಳು ಸಾರ್ವಜನಿಕರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಭಾರತದಲ್ಲಿ ಮೊನ್ನೆಯಷ್ಟೇ ಇಂತಹುದೇ ಘಟನೆ ನಡೆದಿತ್ತು. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಮಂಗಗಳ ಹಾವಳಿ ಪ್ರಕರಣದಲ್ಲಿ ಕೋತಿಯೊಂದು ಮದ್ಯದ ಅಂಗಡಿಗೆ ನುಗ್ಗಿ ಬಿಯರ್ ಕುಡಿಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮಂಗ ಅಂಗಡಿಗೆ ನುಗ್ಗಿ ಮದ್ಯದ ಉತ್ಪನ್ನಗಳನ್ನು ಕದಿಯುತ್ತಿದೆ ಎಂದು ಆರೋಪಿಸಲಾಗಿದೆ. 2022 ರಲ್ಲಿ ಆನ್‌ಲೈನ್‌ನಲ್ಲಿ ಬಿಡುಗಡೆಯಾದ ಈ ವೀಡಿಯೊದಲ್ಲಿ, ಕೋತಿಯು ಬಿಯರ್ ಕ್ಯಾನ್‌ನಿಂದ ಮದ್ಯಪಾನ ಮಾಡುತ್ತಿದೆ. ಈ ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೈಲೈಟ್ ಮಾಡಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.