ಕೋತಿಗಳು ಇತರರನ್ನು ಅನುಕರಿಸುವಲ್ಲಿ ಬಹಳ ಪ್ರವೀಣವಾಗಿರುತ್ತವೆ. ಕೋತಿಗಳು ಮನುಷ್ಯರನ್ನು ಅನುಕರಿಸುವಂತಹ ಹಲವು ವೀಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ. ಆದರೆ ಈ ವಿಡಿಯೋ ಸ್ವಲ್ಪ ವಿಭಿನ್ನವಾಗಿದೆ. ಈ ಟ್ರೆಂಡಿಂಗ್ ವಿಡಿಯೋ ನೋಡಿ ಹಲವರು ನಕ್ಕು ನಕ್ಕು ಸುಸ್ತಾಗಿದ್ದಾರೆ. ವಾಸ್ತವವಾಗಿ, ಕೋತಿ ಅಂತಹದ್ದೇ ಒಂದು ಕೆಲಸ ಮಾಡಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದಿನವಿಡೀ ಎಸಿ ಆನ್‌ ಮಾಡಿದ್ರೂ ವಿದ್ಯುತ್ ಬಿಲ್ ಹೆಚ್ಚಾಗಬಾರದೇ? ಹಾಗಾದ್ರೆ ಈ ಕೆಲಸ ಮಾಡಿ!


ಈ ವೀಡಿಯೋ ನೋಡಿದ್ರೆ ನೀವೂ ಮಂಗನ ಮುಗ್ಧ ಚೇಷ್ಟೆ ನೋಡಿ ನಗಲು ಶುರು ಮಾಡ್ತೀರಿ. ಮನೆಯ ಯಾವುದೋ ಕೊಠಡಿಯಲ್ಲಿ ಮಂಗ ಕುಳಿತುಕೊಂಡು ಕಷ್ಟಪಡುತ್ತಾ ತರಕಾರಿ ಕಟ್‌ ಮಾಡುತ್ತಿರೋದನ್ನು ಈ ವಿಡಿಯೋದಲ್ಲಿ ಕಾಣಬಹುದು. ಮಂಗನ ಮುಂದೆ ದೊಡ್ಡ ಪಾತ್ರೆಯೊಂದರಲ್ಲಿ ರಾಶಿ ಬೀನ್ಸ್ ಇರಿಸಲಾಗುತ್ತದೆ. ಪಾತ್ರೆ ಬಳಿ ಕುಳಿತ ಕೋತಿಯು ಎಚ್ಚರಿಕೆಯಿಂದ ತರಕಾರಿಯನ್ನು ಮುರಿಯುತ್ತಿದೆ. ಈ ವೇಳೆ ಕೋತಿಯ ಮುಖದಲ್ಲಾಗುವ ಬದಲಾವಣೆ ಎಂತವರನ್ನೂ ಸಹ ನಗಿಸುತ್ತದೆ. 


Facial expression every time is legendary" ಎಂದು ಬರೆಯಲಾಗಿದೆ. ಕೋತಿಯು ಕೆಲಸ ಮಾಡುವಾಗ ನೀಡುತ್ತಿರುವ ಮುಖಭಾವ ಎಂಥವರನ್ನೂ ಸಹ ನಗುವಂತೆ ಮಾಡುತ್ತದೆ. ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 


ಇದನ್ನೂ ಓದಿ: Driving License ಇಲ್ಲದೆ ಎಲ್ಲಿ ಬೇಕಾದರೂ ಬಿಂದಾಸ್ ವಾಹನ ಚಲಾಯಿಸಿ


ವೀಡಿಯೊವನ್ನು ಹಂಚಿಕೊಂಡ ಕೆಲವೇ ದಿನಗಳಲ್ಲಿ, ಅದನ್ನು 5.5 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಎರಡು ಸಾವಿರಕ್ಕೂ ಹೆಚ್ಚು ಮಂದಿ (ಸೋಶಿಯಲ್ ಮೀಡಿಯಾ ಬಳಕೆದಾರರು) ರೀಟ್ವೀಟ್ ಮಾಡಿದ್ದು, 9 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಅನೇಕ ಬಳಕೆದಾರರು ತಮ್ಮ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ