ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಕೇರಳದ ಪುನ್ನಮಾಡ ಸರೋವರದಲ್ಲಿ ಸ್ನೇಕ್ ಬೋಟ್ ರೇಸ್‍ನಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ANI ಸುದ್ದಿಸಂಸ್ಥೆ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಹುಲ್ ಕೇರಳದ ಪ್ರಸಿದ್ಧ ಹಾವು ದೋಣಿ ಪಂದ್ಯದಲ್ಲಿ ಪಾಲ್ಗೊಂಡು ಹುಟ್ಟುಹಾಕಿ ಸಂಭ್ರಮಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ರಾಹುಲ್ ಗಾಂಧಿ ಸೋಮವಾರ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆಯ 12ನೇ ದಿನದಂದು ಕೇರಳದ ವಡಕಲ್ ಬೀಚ್‌ನಲ್ಲಿ ಮೀನುಗಾರ ಸಮುದಾಯದೊಂದಿಗೆ ಚರ್ಚೆ ನಡೆಸಿದರು. ಬೆಳಗ್ಗೆ ನಡೆದ ಸಭೆಯಲ್ಲಿ ಇಂಧನ ವೆಚ್ಚಗಳ ಏರಿಕೆ, ಸಬ್ಸಿಡಿ ಕಡಿತ, ಕ್ಷೀಣಿಸುತ್ತಿರುವ ಮೀನು ಸಂಗ್ರಹ ಮತ್ತು ಪರಿಸರ ನಾಶ ಸೇರಿದಂತೆ ಇತರ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಚರ್ಚಿಸಿದರು.


ಇದನ್ನೂ ಓದಿ: Hunter 350: ಇವೇ ನೋಡಿ ಬೆಸ್ಟ್ ಸೆಲ್ಲಿಂಗ್ ರಾಯಲ್ ಎನ್‌ಫೀಲ್ಡ್ 350CC ಬೈಕ್‌ಗಳು


ಭಾರತ್ ಜೋಡೋ ಯಾತ್ರೆ ಪುನ್ನಪ್ರಾದಿಂದ ಆರಂಭಗೊಂಡಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆ.ಮುರಳೀಧರನ್, ಕೋಡಿಕುನ್ನಿಲ್ ಸುರೇಶ್, ರಮೇಶ್ ಚೆನ್ನಿತ್ತಲ, ಕೆ.ಸಿ.ವೇಣುಗೋಪಾಲ್ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ವಿ.ಡಿ.ಸತೀಶನ್ ರಾಹುಲ್ ಗಾಂಧಿ ಜೊತೆಗಿದ್ದರು. ಸುಮಾರು 16 ಕಿ.ಮೀ ಕ್ರಮಿಸಿದ ನಂತರ ಯಾತ್ರೆಯು ಬೆಳಗಿನ ಜಾವ ಕಳವೂರಿನಲ್ಲಿ ಮುಕ್ತಾಯವಾಯಿತು. ಮತ್ತೆ ಸಂಜೆ 4.30ಕ್ಕೆ ಯಾತ್ರೆಯು ಪುನರಾರಂಭವಾಯಿತು.


ಪಾದಯಾತ್ರೆ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಸೆಪ್ಟೆಂಬರ್ 10ರ ಸಂಜೆ ಕೇರಳವನ್ನು ಪ್ರವೇಶಿಸಿದ ‘ಭಾರತ್ ಜೋಡೋ ಯಾತ್ರೆ’ಯು ಅಕ್ಟೋಬರ್ 1ರಂದು ಕರ್ನಾಟಕ ಪ್ರವೇಶಿಸುವ ಮುನ್ನ 19 ದಿನಗಳ ಅವಧಿಯಲ್ಲಿ 7 ಜಿಲ್ಲೆಗಳನ್ನು ತಲುಪುವ ಮೂಲಕ 450 ಕಿ.ಮೀ ವ್ಯಾಪ್ತಿಯಿರುವ ರಾಜ್ಯದ ಮೂಲಕ ಸಾಗಲಿದೆ.


ಇದನ್ನೂ ಓದಿ: Congress President: ಕಾಂಗ್ರೆಸ್ ಪಕ್ಷದಲ್ಲಿ ಸುಧಾರಣೆಯ ಅವಶ್ಯಕತೆ ಬೆಂಬಲಿಸಿ ಸೋನಿಯಾ ಭೇಟಿಯಾದ ಶಶಿ ತರೂರ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.