Trending Video: ಲಿಫ್ಟ್ ಹಾಗೂ ಎಲಿವೇಟರ್ ಅಪಘಾತಕ್ಕೆ ಸಂಬಂಧಿಸಿದ ಸುದ್ದಿಗಳು ಆಗಾಗ ಪ್ರಕಟಗೊಳ್ಳುತ್ತಲೇ ಇರುತ್ತವೆ ಮತ್ತು ನೀವು ಕೂಡ ಕೇಳುತ್ತೀರಿ. ಹೆಚ್ಚಿನ ಲಿಫ್ಟ್ ಅಪಘಾತಗಳಲ್ಲಿ, ವ್ಯಕ್ತಿ ಗಂಟೆಗಟ್ಟಲೆ ಲಿಫ್ಟ್‌ನಲ್ಲಿ ಸಿಲುಕಿಕೊಳ್ಳುತ್ತಾನೆ, ಆದರೆ ಕೆಲವೊಮ್ಮೆ ಲಿಫ್ಟ್ ಪ್ರಾಣ ಬೆದರಿಕೆಯನ್ನೇ ಒಡ್ಡುತ್ತದೆ, ಏಕೆಂದರೆ ಕೆಲವು ಸಂದರ್ಭಗಳಲ್ಲಿ ಲಿಫ್ಟ್ ಅಪಘಾತದಲ್ಲಿ ವ್ಯಕ್ತಿ ಸ್ವಲ್ಪದರಲ್ಲೇ ಪಾರಾಗುತ್ತಾನೆ. ಇಂತಹುದೇ ಒಂದು ಘಟನೆ ರಷ್ಯಾದಿಂದ ಮುನ್ನೆಲೆಗೆ ಬಂದಿದೆ. ಈ ಘಟನೆಯಲ್ಲಿ ಲಿಫ್ಟ್ ನಿಗದಿತ ಫ್ಲೋರ್ ಗೆ ನಿಲ್ಲಬೇಕಾದಷ್ಟು ಸಮಯ ನಿಲ್ಲುವುದಿಲ್ಲ ಮತ್ತು ಇದ್ದಕ್ಕಿದ್ದಂತೆ ಮೇಲಕ್ಕೆ ಚಲಿಸಲು ಪ್ರಾರಂಭಿಸುತ್ತದೆ. ಈ ವೇಳೆ ಲಿಫ್ಟ್‌ನಿಂದ ಹೊರಗರುತ್ತಿದ್ದ ವ್ಯಕ್ತಿಯು ತನ್ನ ತುಂಬಾ ಚಾಣಾಕ್ಷ ತಾಣದಿಂದ ತನ್ನ ತಲೆಯನ್ನು ತಗ್ಗಿಸಿ ತನ್ನ ಪ್ರಾಣ ರಕ್ಷಿಸಿಕೊಲ್ಲುತ್ತಾನೆ. ಆತ ಹೊರಬರುವ ಬದಲು ಪುನಃ ಲಿಫ್ಟ್ ಒಳಕ್ಕೆ ಹೋಗಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಾನೆ,  ಇದೀಗ ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಅಪಾಯಕಾರಿ ವೀಡಿಯೊವನ್ನು ನೀವೂ ಒಮ್ಮೆ ನೋಡಿ.


COMMERCIAL BREAK
SCROLL TO CONTINUE READING

ಈ ವಿಡಿಯೋದಲ್ಲಿ ಏನಿದೆ?
ವೈರಲ್ ವಿಡಿಯೋ ಕಟ್ಟಡವೊಂದರಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಲ್ಲಿ ಲಿಫ್ಟ್ ಒಂದು ಮಹಡಿಯಲ್ಲಿ ಬರುವುದನ್ನು ನೀವು ನೋಡಬಹುದು. ಅದರ ಬಾಗಿಲು ತೆರೆಯುತ್ತದೆ ಮತ್ತು ಲಿಫ್ಟ್ ಒಳಗಿನಿಂದ ಒಬ್ಬ ವ್ಯಕ್ತಿ ಹೊರಬರಲು ಪ್ರಾರಂಭಿಸುತ್ತಾನೆ, ಆದರೆ ಆ ವೇಳೆಯಲ್ಲಿ ಮತ್ತೊಬ್ಬ ವ್ಯಕ್ತಿ  ಲಿಫ್ಟ್ ಒಳಗೆ ಪ್ರವೇಶಿಸುತ್ತಾನೆ. ಹೊರಗೆ ಬರುವ ವ್ಯಕ್ತಿಯು ಹೊರಬರುವ ಉದ್ದೇಶದಿಂದ ತನ್ನ ಹೆಜ್ಜೆಯನ್ನು ಹೊರಕ್ಕೆ ಇಟ್ಟಾಗ ಲಿಫ್ಟ್ ಇದ್ದಕ್ಕಿದ್ದಂತೆ ಮೇಲಕ್ಕೆ ಚಲಿಸಲು ಪ್ರಾರಂಭಿಸುತ್ತದೆ ಮತ್ತು ಅದರ ಗೇಟ್‌ಗಳು ಮುಚ್ಚಲು ಪ್ರಾರಂಭಿಸುತ್ತವೆ. ಆಗ ಚಾಣಾಕ್ಷತೆಯನ್ನು ಮೆರೆದ ಹೊರಬರುವ ವ್ಯಕ್ತಿ ಹೊರಬರುವ ಬದಲು ಲಿಫ್ಟ್ ಒಳಗೆ ಹಿಂದಕ್ಕೆ ಹೋಗಿ ತನ್ನ ಕತ್ತು ಮತ್ತು ತಲೆಯನ್ನು ರಕ್ಷಿಸಿಕೊಳ್ಳುತ್ತಾನೆ.


ಇದನ್ನೂ ಓದಿ-Viral News: ಮಗಳ ಮದುವೆಯಾಗಿದ್ದೇ ತಡ: ಅದೇ ಮಂಟಪದಲ್ಲಿ ಮತ್ತೊಂದು ವಿವಾಹವಾದ 11 ಮಕ್ಕಳ ತಂದೆ!


ಒಂದೇ ಸೆಕೆಂಡ್ ನಲ್ಲಿ ಉಳಿದ ಜೀವ, ಬೆಚ್ಚಿಬಿದ್ದ ವೀಕ್ಷಕರು
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ವ್ಯತಿ ತನ್ನ ಜೀವವನ್ನು ಹೇಗೆ ರಕ್ಷಿಸಿಕೊಂಡ ಎಂಬುದು ಅವರ ತಲೆಗೂ ತೋಚುತ್ತಿಲ್ಲ. ಆ ವ್ಯಕ್ತಿ ನಿಜವಾಗಿಯೂ ಅದೃಷ್ಟವಂತ ಎಂದು ಜನರು ಕಾಮೆಂಟ್‌ಗಳಲ್ಲಿ ಬರೆಯುತ್ತಿದ್ದಾರೆ. ವರದಿಯ ಪ್ರಕಾರ, ಈ ಸಿಸಿಟಿವಿ ದೃಶ್ಯಾವಳಿ ರಷ್ಯಾದ ಕ್ರಾಸ್ನೋಡರ್ ನಗರದ ಅಪಾರ್ಟ್ಮೆಂಟ್ನದ್ದಾಗಿದೆ.


ಇದನ್ನೂ ಓದಿ-Viral Video : ಮಾವುತನ ಪಿಸು ಮಾತು ಕೇಳಲು ಮಂಡಿಯೂರಿದ ಗಜರಾಜ


ಪ್ಲಾಟ್‌ಫಾರ್ಮ್‌ಗಳಲ್ಲಿಯೂ ವೀಡಿಯೊ ಹಂಚಿಕೆಯಾಗುತ್ತಿದೆ
ಈ ವೀಡಿಯೊವನ್ನು ಸೋಮವಾರ YouTube ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ. ಹಂಚಿಕೊಂದಾಗಿಂದ ಅದು ಬೆಂಕಿಯಂತೆ ಪಸರಿಸುತ್ತಿದೆ. ಜನರು ಇದನ್ನು ಸಾಮಾಜಿಕ ಮಾಧ್ಯಮದ ಇತರ ವೇದಿಕೆಗಳಲ್ಲಿಯೂ ಕೂಡ ಹಂಚಿಕೊಳ್ಳುತ್ತಿದ್ದಾರೆ. ಯೂಟ್ಯೂಬ್ ಬಗ್ಗೆ ಹೇಳುವುದಾದರೆ, ಇದುವರೆಗೆ ಈ ವೀಡಿಯೊವನ್ನು ಕೇವಲ ಒಂದೇ ದಿನದಲ್ಲಿ ಸುಮಾರು 6000 ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋಗೆ ಜನ ಸಾಕಷ್ಟು ಕಾಮೆಂಟ್ ಕೂಡ ಮಾಡುತ್ತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.