Viral News: ಮಗಳ ಮದುವೆಯಾಗಿದ್ದೇ ತಡ: ಅದೇ ಮಂಟಪದಲ್ಲಿ ಮತ್ತೊಂದು ವಿವಾಹವಾದ 11 ಮಕ್ಕಳ ತಂದೆ!

ಶೌಕತ್ ಹೇಳುವಂತೆ ಮನೆಯಲ್ಲಿ ಇಬ್ಬರು ಅವಿವಾಹಿತ ಹೆಣ್ಣು ಮಕ್ಕಳಿದ್ದಾರೆ. ಆದರೆ ಅವರ ಮದುವೆಯ ನಂತರ ಮನೆ ನಿರ್ಜನವಾದಾಗ ಏನಾಗುತ್ತದೆ. ಶೌಕತ್ ಅವರ ಹೆಣ್ಣುಮಕ್ಕಳು ಅದನ್ನೇ ಯೋಚಿಸಿ ತಂದೆಗೆ ವಧುವನ್ನು ಹುಡುಕಿ ಐದನೇ ಮದುವೆ ಮಾಡಿದ್ದಾರೆ.

Written by - Bhavishya Shetty | Last Updated : Oct 11, 2022, 10:29 PM IST
    • ಹೆಣ್ಣು ಮಕ್ಕಳು ತಮ್ಮ ತಂದೆಗೆ ಹೊಸ ವಧುವನ್ನು ಹುಡುಕಿದ್ದಾರೆ
    • ತಂದೆಯ ಒಂಟಿತನವನ್ನು ಹೋಗಲಾಡಿಸಲು ಹೆಣ್ಣುಮಕ್ಕಳ ಈ ನಿರ್ಧಾರ
    • ಮಕ್ಕಳು ಮದುವೆಯಾದ ಮಂಟಪದಲ್ಲಿ ತಂದೆಯ ಮದುವೆ
Viral News: ಮಗಳ ಮದುವೆಯಾಗಿದ್ದೇ ತಡ: ಅದೇ ಮಂಟಪದಲ್ಲಿ ಮತ್ತೊಂದು ವಿವಾಹವಾದ 11 ಮಕ್ಕಳ ತಂದೆ!  title=
Wedding At Old Age

ಯೂಟ್ಯೂಬ್‌ನಲ್ಲಿ ವಿಶಿಷ್ಟವಾದ ಪ್ರೇಮಕಥೆಯೊಂದು ಜನರ ಗಮನ ಸೆಳೆಯುತ್ತಿದೆ. ವ್ಯಕ್ತಿಯ ಪ್ರಕಾರ, ಆತನ ಇಬ್ಬರು ಹೆಣ್ಣುಮಕ್ಕಳು ಒತ್ತಾಯಿಸಿದ್ದಾರೆ ಎಂದು ಮಂಟಪದಲ್ಲಿ ಮದುವೆಯಾದೆ ಎನ್ನುತ್ತಾನೆ.

ಇದನ್ನೂ ಓದಿ: ತಪ್ಪಾಗಿ ಹಿಂದೂ ಪದ್ಧತಿಯಂತೆ ನಡೆಯಿತು ಮುಸಲ್ಮಾನನ ಅಂತ್ಯಕ್ರಿಯೆ! ಮುಂದೇನಾಯ್ತು ಗೊತ್ತಾ?

ಮದುವೆಯಾದ 11 ಮಕ್ಕಳ ತಂದೆ: ಈ ವ್ಯಕ್ತಿಯ ಹೆಸರನ್ನು ಶೌಕತ್ ಎಂದು ಹೇಳಲಾಗುತ್ತಿದೆ. ಅವರ ವಯಸ್ಸು 56 ವರ್ಷ. ಇದುವರೆಗೆ ಐದು ಮದುವೆಗಳನ್ನು ಆಗಿದ್ದಾರೆ. ಅಷ್ಟೇ ಅಲ್ಲದೆ, 11 ಮಂದಿ ಮಕ್ಕಳಿದ್ದಾರೆ. ಅದರಲ್ಲಿ 10 ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಮಗ ಸೇರಿದಂತೆ 8 ಹೆಣ್ಣು ಮಕ್ಕಳಿಗೂ ಮದುವೆಯಾಗಿದೆ. ಇದೀಗ ಆ ಹೆಣ್ಣು ಮಕ್ಕಳು ತಮ್ಮ ತಂದೆಗೆ ಹೊಸ ವಧುವನ್ನು ಹುಡುಕಿದ್ದಾರೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ.

ಶೌಕತ್ ಹೇಳುವಂತೆ ಮನೆಯಲ್ಲಿ ಇಬ್ಬರು ಅವಿವಾಹಿತ ಹೆಣ್ಣು ಮಕ್ಕಳಿದ್ದಾರೆ. ಆದರೆ ಅವರ ಮದುವೆಯ ನಂತರ ಮನೆ ನಿರ್ಜನವಾದಾಗ ಏನಾಗುತ್ತದೆ. ಶೌಕತ್ ಅವರ ಹೆಣ್ಣುಮಕ್ಕಳು ಅದನ್ನೇ ಯೋಚಿಸಿ ತಂದೆಗೆ ವಧುವನ್ನು ಹುಡುಕಿ ಐದನೇ ಮದುವೆ ಮಾಡಿದ್ದಾರೆ. ವಾಸ್ತವವಾಗಿ, ಶೌಕತ್ ಅವರ ನಾಲ್ವರು ಪತ್ನಿಯರು ಸಾವನ್ನಪ್ಪಿದ್ದಾರೆ. ಅವರ ತಂದೆಯ ಒಂಟಿತನವನ್ನು ಹೋಗಲಾಡಿಸಲು ಹೆಣ್ಣುಮಕ್ಕಳು ಮತ್ತೊಮ್ಮೆ ಅವರಿಗೆ ಮದುವೆ ಮಾಡಿಸಿದ್ದಾರೆ.

ಇದನ್ನೂ ಓದಿ: IND vs SA ODI: 12 ವರ್ಷಗಳ ಬಳಿಕ ಆಫ್ರಿಕಾ ವಿರುದ್ಧ ಗೆದ್ದ ಭಾರತ: ಟೀಂ ಇಂಡಿಯಾ ಗೆಲುವಿಗೆ ಇವರೇ ಕಾರಣ!

ದೊಡ್ಡ ಕುಟುಂಬ: ವ್ಯಕ್ತಿಯ ಕುಟುಂಬದಲ್ಲಿ ಒಟ್ಟು 62 ಸದಸ್ಯರಿದ್ದಾರೆ. ಶೌಕತ್‌ನ ಹೊಸ ಹೆಂಡತಿಗೂ ಅವನ ಕುಟುಂಬದೊಂದಿಗೆ ಯಾವುದೇ ಸಮಸ್ಯೆ ಇಲ್ಲ. ಕುಟುಂಬಕ್ಕಾಗಿ ಮನೆಯಲ್ಲಿ 100 ರೊಟ್ಟಿಗಳನ್ನು ತಯಾರಿಸಲಾಗುತ್ತದೆ. ಹಂತಹಂತವಾಗಿ ಈ ವಾತಾವರಣಕ್ಕೆ ಹೊಂದಿಕೊಳ್ಳುತ್ತಾರೆ ಎನ್ನುತ್ತಾರೆ ಅವರ ಮಕ್ಕಳು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News