Viral Video: ಸ್ಕೂಲ್ ಬಸ್ ಟೈರ್ ಸ್ಫೋಟ; ಯುವಕ ಎಗರಿ ಬಿದ್ದಿರೋ ವಿಡಿಯೋ ವೈರಲ್!!
Bus Tyre explosion: ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಈ ಘಟನೆ ನಡದಿದೆ. ಕೆಪಿಎಸ್ ಪಿಯು ಕಾಲೇಜಿನ ಹಿಂಭಾಗದಲ್ಲಿರುವ ಪಂಚರ್ ಶಾಪ್ನಲ್ಲಿ ಬಸ್ಸಿನ ಟೈರ್ಗೆ ಗಾಳಿ ತುಂಬುವ ವೇಳೆ ಟೈರ್ ಸ್ಫೋಟಗೊಂಡಿದೆ. ಈ ಸ್ಫೋಟದ ರಭಸಕ್ಕೆ ಯುವಕ ಮೇಲಕ್ಕೆ ಎಗರಿ ಬಿದ್ದು ಗಾಯಗೊಂಡಿದ್ದಾನೆ.
School bus tyre explosion: ಸ್ಕೂಲ್ ಬಸ್ ಟೈರ್ ಸ್ಫೋಟಗೊಂಡು 19 ವರ್ಷದ ಯುವಕ ಗಾಯಗೊಂಡಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಕೋಟೇಶ್ವರದ ಗ್ಯಾರೇಜ್‌ನಲ್ಲಿ ಡಿಸೆಂಬರ್ 21ರಂದು ಈ ಘಟನೆ ನಡೆದಿದೆ. ಟೈರ್ ಸ್ಫೋಟದಿಂದ ಯುವಕ ಎಗರಿ ಬಿದ್ದಿರೋ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಖಾಸಗಿ ಶಾಲಾ ಬಸ್ಸಿನ ಟೈರ್ ಪಂಕ್ಚರ್ ಆಗಿದ್ದರಿಂದ ಅದನ್ನು ರಿಪೇರಿ ಮಾಡಲು ತಂದಿದ್ದಾಗ ಯುವಕ ಗಾಳಿ ತುಂಬುತ್ತಿದ್ದ. ಈ ವೇಳೆ ಘಟನೆ ಸಂಭವಿಸಿದೆ. ಗಾಳಿ ತುಂಬುವಾಗ ಉಂಟಾದ ಒತ್ತಡದಿಂದ ಟೈರ್ ಸ್ಫೋಟವಾಗಿದ್ದು, ಯುವಕ ಗಾಳಿಯಲ್ಲಿ ಹಾರಿ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷದವರೆಗೆ ಸಾಲ ನೀಡಲು ಬ್ಯಾಂಕ್ ಗಳಿಗೆ ಅನುಮತಿ
ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಆಘಾತ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.